ಹರ್ಡೇಕರ ಮಂಜಪ್ಪ ಜಯಂತಿ ಮತ್ತು ನಾಟಕ ಪ್ರದರ್ಶನ

0
26

ಭಾಲ್ಕಿ: ಬಸವಜಯಂತಿ ಮತ್ತು ಅಕ್ಕನಾಗಮ್ಮ ಜಯಂತಿ ಕರ್ನಾಟಕದಲ್ಲಿ ಆಚರಣೆಗೆ ಬರಲು ಮೂಲ ಕಾರಣ ಪುರುಷರೇ ಹರ್ಡೇಕರ ಮಂಜಪ್ಪನವರಾಗಿದ್ದಾರೆ. ಖಾದಿ ಧರಿಸುವ ಮೂಲಕ ಸ್ವದೇಶಿ ವಸ್ತುಗಳ ಬಳಕೆ ವ್ಯಾಪಕ ಆಗಲಿ ರಾಷ್ಟ್ರ ಉದ್ಧಾರವಾಗಲಿ ಎನ್ನುವ ಹಿನ್ನಲೆಯಲ್ಲಿ ಕಾರ್ಯ ಮಾಡಿದ ಇವರನ್ನು ಕರ್ನಾಟಕದ ಗಾಂಧಿ ಮತ್ತು ರಾಷ್ಟ್ರಧರ್ಮದೃಷ್ಟಾರ ಎಂಬ ಹೆಸರಿನಿಂದ ಗುರುತಿಸಲಾಗುತ್ತದೆ ಎಂದು ಪೂಜ್ಯ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಚನ್ನಬಸವಾಶ್ರಮದಲ್ಲಿ ಹಿರೇಮಠ ಸಂಸ್ಥಾನ ಭಾಲ್ಕಿ ಆಶ್ರಯದಲ್ಲಿ ಶ್ರೀ ಶಿವಕುಮಾರ ಕಲಾಸಂಘ ಸಾಣೇಹಳ್ಳಿ ಶಿವಸಂಚಾರ ಕಲಾವಿದರಿಂದ ಡೋಹರ ಕಕ್ಕಯ್ಯ ನಾಟಕ ಪ್ರದರ್ಶನ ಉದ್ಘಾಟನೆ ಸಮಾರಂಭದ ದಿವ್ಯಸನ್ನಿಧಾನವಹಿಸಿ ಪೂಜ್ಯ ಶ್ರೀಗಳು ಒಂದು ನಾಟಕದ ಪ್ರದರ್ಶನ ಒಂದು ತಿಂಗಳು ಪ್ರವಚನಕ್ಕೆ ಸಮವಾಗಿರುತ್ತದೆ ಮತ್ತು ಅಷ್ಟು ಪ್ರಭಾವಿಯಾಗಿರುತ್ತದೆ ಎಂದು ತಮ್ಮ ಆಶೀರ್ವಚನದಲ್ಲಿ ತಿಳಿಸಿದರು.

Contact Your\'s Advertisement; 9902492681

ನಾಳೆ ಖ್ಯಾತ ಹೋರಾಟಗಾರರ ಯೋಗೇಂದ್ರ ಯಾದವ್ ಕಲಬುರಗಿಗೆ

ಪೂಜ್ಯ ಗುರುಬಸವ ಪಟ್ಟದ್ದೇವರು, ಪೂಜ್ಯ ಸಿದ್ಧರಾಮೇಶ್ವರ ಪಟ್ಟದ್ದೇವರು ಗೋರಚಿಂಚೋಳಿ, ಮತ್ತು ಪೂಜ್ಯ ಮಹಾಲಿಂಗ ಸ್ವಾಮಿಗಳು ಸಮ್ಮುಖ ವಹಿಸಿದ್ದರು. ಭಾಲ್ಕಿ ಪುರಸಭೆ ಅಧ್ಯಕ್ಷ ಬಸವರಾಜ ವಂಕೆ ಕಾರ್ಯಕ್ರಮ ಉದ್ಘಾಟಿಸಿದರು. ಶಿವಾಜಿ ಕಾಲೇಜ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದ ಡಾ.ಸೂರಜಸಿಂಗ್ ರಾಜಪುತ, ಡಾ.ರಜನೀಶ ವಾಲಿ ಮತ್ತು ನಿವೃತ್ತ ಶಿಕ್ಷಕ ಜೋಸೆಫ್ ಅಡವೆಪ್ಪ ಅವರಿಗೆ ಶ್ರೀಮಠದಿಂದ ಗೌರವಿಸಲಾಯಿತು.

ಪಿಂಜಾರ್ ನದಾಫ್ ಅಭಿವೃದ್ಧಿ ನಿಗಮ ಸ್ಥಾಪನೆ ಆಗ್ರಹಿಸಿ ಧರಣಿ

ವಿವಿಧ ಸಂಘ ಸಂಸ್ಥೆಗಳ ಮುಖಂಡರಾದ ರಾಜೇಶ್ವರಿ ಮೋರೆ, ಶಂಭುಲಿಂಗ ಕಾಮಣ್ಣ, ವಿಲಾಸ ಮೋರೆ, ಅಶೋಕ ಮೈನ್ನಳ್ಳೆ, ಶಶಿಧರ ಕೋಸಂಬೆ, ಮಲ್ಲಮ್ಮ ನಾಗನಕೇರೆ, ಮಹಾಂತೇಶ ನಾಗಶೆಟ್ಟಿ, ಮನೋಹರ ಕಾಳೆ, ದೊಂಢಿಬಾ ಕಾಳೆ, ವೈ.ಆರ್.ಇಂಗಳೆ, ದಶರಥ ಕಾವಳೆ, ಮಾರುತಿ ಗಾಯಕವಾಡ, ದೀಲಿಪ ಮಡಿವಾಳ, ಧನರಾಜ ಪಾಂಚಾಳ, ವಿಶ್ವನಾಥ ಸಂಪಂಗೆ, ಬಸವರಾಜ ಹಡಪದ, ಶಂಭುಲಿಂಗ ಸ್ವಾಮಿ ಮತ್ತು ಚನ್ನಬಸವೇಶ್ವರ ಖಾನಾವಳಿ ಚಂದ್ರಕಾಂತ ಬಿರಾದಾರ ಇದ್ದರು. ವೀರಣ್ಣ ಕುಂಬಾರ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here