ವಿಮರ್ಶಾ ಅಕಾಡೆಮಿ ಸ್ಥಾಪಿಸಲು ಡಾ. ಶ್ರೀಶೈಲ ನಾಗರಾಳ ಒತ್ತಾಯ

0
69

ಬೀದರ್: ಕರ್ನಾಟಕ ಸರಕಾರವು ಗ್ರಂಥಾಲಯ ಇಲಾಖೆ ಲೇಖಕರ ಪುಸ್ತಕಗಳ ಸಗಟು ಖರೀದಿಯನ್ನು ಈಗಿನ ವ್ಯವಸ್ಥೆಯಲ್ಲಿ ಬೆಂಗಳೂರು ಕೇಂದ್ರ ಮೂಲಕ ಖರೀದಿಸುತ್ತಿದೆ. ದೂರದ ಬೀದರ, ಕಲಬುರಗಿಯನ್ನು ಒಳಗೊಂಡ ಈ ಭಾಗದ ಲೇಖಕರಿಗೆ ನಿಗದಿತ ಸಮಯದಲ್ಲಿ ತಲುಪಿಸಲು ಕಷ್ಟ ಸಾಧ್ಯವಾಗುತ್ತಿರುವುದು ಅದಕ್ಕಾಗಿ ಕಲಬುರಗಿ ವಿಭಾಗದ ಜಿಲ್ಲೆಗಳ ಲೇಖಕರ ಪುಸ್ತಕಗಳನ್ನು ಕಲಬುರಗಿಯಲ್ಲಿಯೇ ಖರೀದಿಸುವ ಏರ್ಪಾಡು ಮಾಡಬೇಕು ಎಂದು ಸಮ್ಮೇಳನಾಧ್ಯಕ್ಷರ ಭಾಷಣ ಡಾ. ಶ್ರೀಶೈಲ ನಾಗರಾಳ ಒತ್ತಾಯಿಸಿದರು.

ಇಂದು ಬೀದರ ಜಿಲ್ಲೆಯ ನೂತನ ಹುಲಸೂರ ತಾಲೂಕನ ಬೇಲೂರಿನ ಶರಣಶ್ರೀ ಉರಿಲಿಂಗ ಪೆದ್ದಿ ಸಂಸ್ಥಾನದ ಆವರಣದಲ್ಲಿ ಜರುಗುತ್ತಿರುವ ಪ್ರಥಮ ವಿಮರ್ಶ ಸಮ್ಮೇಳನದ ಸರ್ವಧ್ಯಕ್ಷ ಭಾಷಣ ಮಾಡುವ ಮೂಲಕ ಕರ್ನಾಟಕ ಸಾಹಿತ್ಯ ಅಕಾಡೆಮಿ ಈಗ ನಿಲ್ಲಿಸಿರುವ ವಿಮರ್ಶಾ ಕಮ್ಮಟಗಳನ್ನು ಈ ಭಾಗದಲ್ಲಿ ಹೆಚ್ಚು ಹೆಚ್ಚಾಗಿ ಹಮ್ಮಿಕೊಂಡು ಯುವ ವಿಮರ್ಶಕರನ್ನು ತರಬೇತುಗೊಳಿಸಬೇಕು. ವಿಮರ್ಶಾ ಅಕಾಡೆಮಿ ಸ್ಥಾಪನೆಗೆ ಒತ್ತಾಯಿಸುತ್ತೇನೆ ಹಿರಿಯ ವಿಮರ್ಶಕರ ಕೃತಿಗಳನ್ನು ಸರಕಾರವು ಪುನರ್ ಮುದ್ರಿಸಬೇಕು. ಹಿರಿಯ ವಿಮರ್ಶಕರಿಗೆ ಗೌರವಧನ ನೀಡಬೇಕು ಎಂದು ವೇದಿಕೆ ಮುಖಾಂತರ ಹಕ್ಕೊತ್ತಾಯ ಮಂಡಿಸಿದರು.

Contact Your\'s Advertisement; 9902492681

ಕುಲಪತಿಗಳ ನೇಮಕದಂತೆ ಕ.ಕ.ಕಲ್ಯಾಣಕ್ಕಾಗಿ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಆಗ್ರಹ

ಸಾವಿರಾರು ವರ್ಷಗಳ ಕನ್ನಡ ಸಾಹಿತ್ಯದಲ್ಲಿ ಕಾವ್ಯರೂಪವೇ ಹೆಚ್ಚಿನ ಸ್ಥಾನವನ್ನು ಪಡೆದಿದ್ದರೆ, ಹೆಸಗನ್ನಡ ಸಂದರ್ಭದಲ್ಲಿ ಕಾವ್ಯದ ಜೊತೆಗೆ ಸಣ್ಣಕಥೆ, ಕಾದಂಬರಿ, ನಾಟಕ, ಪ್ರಬಂಧ ಪ್ರವಾಸ, ಹರಟೆ, ಪ್ರಹಸನ, ಜೀವನ ಚರಿತ್ರೆ, ಆತ್ಮಕಥನ, ಅಮಕಣ, ವಿಚಾರ ವಿಮರ್ಶೆ ಇತ್ಯಾದಿ ಗದ್ಯರೂಪಗಳು ಪ್ರಬುದ್ಧವಾಗಿ ಸೃಜನಗೊಂಡಿವೆ. ಅಲ್ಲದೆ ಹೆಸಗನ್ನಡವು ನವೋದಯ, ಪ್ರಗತಿಶೀಲ, ನವ್ಯ ದಲಿತ-ಬಂಡಾಯ, ಬಂಡಾಯೇತರ ಎಂಬ ಕಾಲ ಘಟ್ಟಗಳ ಸನ್ನಿವೇಶಗಳನ್ನು ನಿರ್ಮಾಣ ಮಾಡಿಕೊಂಡು ಅನೇಕ ಕವಿ, ಬರಹಗಾರರನ್ನು ಕನ್ನಡಕ್ಕೆ ಕೊಡುಗೆಯಾಗಿ ನೀಡಿದ ಗಳಿಗೆ ಸ್ಮರಣೀಯವಾದುದು. ಇಷ್ಟೊಂದು ಪ್ರಮಾಣದ ಸಾಹಿತ್ಯರೂಪಗಳನ್ನು ಬರಹಗಾರರನ್ನು ಸಾಹಿತ್ಯ ಚಳವಳಿಗಳನ್ನು ಕನ್ನಡ ಸಾಹಿತ್ಯ ಚರಿತ್ರೆಯ ಮತ್ತಾವ ಸಂದರ್ಭದಲ್ಲಿ ಕಾಣಲಾರೆವು.

ಯಾವುದೇ ಬರಹಗಾರನಿಂದ ಅಭಿವ್ಯಕ್ತಿಗೊಳ್ಳುವ ರಚನೆಯನ್ನು ಅನೇಕ ವಿದ್ವಾಂಸರು ’ಸೃಜನ’ ಮತ್ತು ’ಸೃಜನೇತರ’ ಎಂಬ ಎರಡು ಭಾಗಗಳಲ್ಲಿ ವಿಂಗಡಿಸಿ ನೋಡುತ್ತ ಬಂದಿರುವರು. ಇದರಲ್ಲಿ ಕವಿ ಅಥವಾ ಲೇಖಕನ ಭಾವ ಸ್ಫೂರ್ತಿಯಿಂದ ಹುಟ್ಟುವ ಕಾವ್ಯ, ಕತೆ, ಕಾದಂಬರಿ, ನಾಟಕ ಪ್ರಬಂಧ ಇತ್ಯಾದಿಗಳನ್ನು ಸೃಜನಶೀಲವೆಂದೂ, ಲೇಖಕನ ಪ್ರಜ್ಞಾ ಮೂಸೆಯಿಂದ ಹುಟ್ಟುವ ವಿಮರ್ಶೆಯನ್ನು ’ಸೃಜನೇತರ’ ಎಂದು ಕರೆದರು. ಇದನ್ನು ನಮ್ಮ ಪ್ರಾಚೀನ ಕಾವ್ಯ ಮೀಮಾಂಸಕ ನಾದ ರಾಜಶೇಖರನು ಒಂದನ್ನು ಭಾವಯತ್ರಿಯೆಂದು, ಮತ್ತೊಂದನ್ನು ಕಾರಯತ್ರಿ ಎಂದು ಕರೆದನು. ಲೇಖಕನಲ್ಲಿಯ ಪ್ರತಿಭೆ ಕೃತಿ ನಿರ್ಮಾಣಕ್ಕೆ ಕಾರಣವಾದರೆ, ಅದೇ ಲೇಖಕನಲ್ಲಿಯ ಪ್ರಜ್ಞೆ ಕೃತಿಯ ರಸಸ್ವಾದನ ಮಾಡಿಸುತ್ತದೆ. ಅಂದರೆ ಕವಿ ರಸ ಸೃಷ್ಟಿ ಮಾಡು ತ್ತಾನೆ. ವಿಮರ್ಶಕ ಸಾಹತ್ಯ ಸೃಷ್ಟಿಯ ಗುಣ ದೋಷಗಳ ಮೌಲ್ಯ ಮಾಪನ ಮಾಡಿ ಸಾಹಿತ್ಯದ ಸತ್ವ ಸ್ವರೂಪಗಳನ್ನು ನಿರ್ದೇಶಿಸಿ ಶ್ರೇಷ್ಠ ಸಾಹಿತ್ಯ ನಿರ್ಮಾಣಕ್ಕೆ ಪ್ರೇರಣೆ ನೀಡುತ್ತಾನೆ.

ಸೈದಪ್ಪ ಹೊಸಮನಿ ಎಸ್ಡಿಎಂಸಿ ಅಧ್ಯಕ್ಷರಾಗಿ ಆಯ್ಕೆ

ಒಂದರ್ಥದಲ್ಲಿ ಸಾಹಿತ್ಯದ ಉತ್ಕರ್ಷಕ್ಕೆ ವಿಮರ್ಶೆಯು ಭದ್ರವಾದ ನೆಲೆಯನ್ನು ಒದಗಿಸುತ್ತದೆ. ಸಾಹಿತ್ಯ ’ಸೃಷ್ಟಿ’ ಯಾದರೆ, ’ವಿಮರ್ಶೆ’ ಮರುಸೃಷ್ಟಿ ಯಾಗಿರುತ್ತದೆ. ಇವು ಒಂದನ್ನು ಬಿಟ್ಟು ಇನ್ನೊಂದು ಬದುಕಲಾರವು, ಬೆಳೆಯಲಾರವು. ಒಂದರಿಂದ ಮತ್ತೊಂದಕ್ಕೆ ತುಷ್ಟಿ, ಪುಷ್ಟಿಯಾಗಿವೆ. ಕನ್ನಡ ಸಾಹಿತ್ಯದುದ್ದಕ್ಕೂ ’ಸಾಹಿತ್ಯ’ ಮತ್ತು ’ವಿಮರ್ಶೆ’ ಇವು ಒಂದೇ ನಾಣ್ಯದ ಎರಡು ಮುಖಗಳಂತೆ ಬೆಳೆದು ಬಂದಿದ್ದು, ಕಾಣುತ್ತೇವೆ.

ಇಂದು ಕನ್ನಡ ಸಾಹಿತ್ಯದಲ್ಲಿ ಇಂಗ್ಲಿಷನ ’ಕ್ರಿಟಿಕ್’ಗೆ ಸಂವಾದಿ ಪದವಾಗಿ ’ವಿಮರ್ಶೆ’ ಯನ್ನು ಬಳಸಿಕೊಂಡು ಬರಲಾಗಿದೆ. ’ವಿಮರ್ಶೆ’ಯ ನಿಷ್ಪತ್ತಿಯನ್ನು ಇನ್ನೊಂದು ಮೂಲದಿಂದ ಹೀಗೆ ಹೇಳುವುದಿದೆ. ಅದೆಂದರೆ. ’ವಿ+ಮೃಶ್’ಎಂದು ’ಮೃಶ್’ ಎಂದರೆ ಉಜ್ಜು ಒರೆಗಲ್ಲಿಗೆ ಹಚ್ಚು, ತಿಕ್ಕು ಸಾಣೆ ಹಿಡಿ ಎಂದಾಗುತ್ತದೆ. ’ಮೃಶ್ ಎಂಬ ಧಾತು’ ಪದಕ್ಕೆ ’ವಿ’ ಎಂಬ ಉಪಸರ್ಗ ಸೇರಿ ’ವಿಮರ್ಶೆ’ ಪದವಾಗಿದೆ. ಡಾ. ಬಸವರಾಜ ಸಬರದ ಅವರು ’ಈ ರೀತಿಯ ಕಾರ್ಯಗಳು ಸಾಹಿತ್ಯ ವಿಮರ್ಶೆ ಯಲ್ಲಿಯೂ ನಡೆಯುವುದರಿಂದ ಮೃಶ್’ ಪದದ ಅರ್ಥ ಬಳಕೆ ಔಚಿತ್ಯವಾದುದಾಗಿದೆ ಎನ್ನುತ್ತಾರೆ. ಕೃತಿಯನ್ನು ’ಪೃಥಕ್ಕರಣ’ ಮಾಡಿ ಅದರಲ್ಲಿನ ಸತ್ವ ಸ್ವರೂಪಗಳನ್ನು ನಿರ್ದೇಶಿಸಿ ಕೃತಿಯ ಮೌಲ್ಯ ಅಥವಾ ಬೆಲೆ ನಿರ್ಣಯಿಸುವುದು ವಿಮರ್ಶೆಯ ಮೂಲ ತತ್ವವಾಗಿದೆ ಎಂದು ಹೇಳಬೇಕಾಗುತ್ತದೆ.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಮಂಜಮ್ಮ ಜೋಗುತಿಗೆ ಅವ್ವ ಪ್ರಶಸ್ತಿ

ದಲಿತ – ಬಂಡಾಯ ಸಂದರ್ಭದಲ್ಲೇ ಮುಂಚೂಣಿಗೆ ಬಂದ ಸ್ತ್ರೀವಾದಿ ವಿಮರ್ಶೆಯು ಕೂಡ ಅತ್ಯಂತ ಪ್ರಮುಖವೆನಿಸಿದೆ. ಪಾಶ್ಚಾತ್ಯ ದೇಶಗಳಲ್ಲಿ ಸ್ತ್ರೀವಾದಿ ಚಳವಳಿ ಮಹಿಳಾ ಸ್ವಾತಂತ್ರ್ಯ, ಸಮಾನತೆ ಅಭಿವ್ಯಕ್ತಿಯ ಸಾಧ್ಯತೆಗಳಿಗೆ, ಹಕ್ಕುಗಳಿಗೆ ಹೆರಾಟ ನಡೆಸಿದ ಅಲೆಯ ಪರಿಣಾಮವು ಕನ್ನಡ ವಿಮರ್ಶೆಯ ಮೇಲೂ ಆದುದ್ದನ್ನು ನಾವು ನೋಡುತ್ತೇವೆ.

ಈ ಹಿಂದೆಯೂ ಕನ್ನಡ ಸಾಹಿತ್ಯ ಪರಂಪರೆಯ ಜೊತೆಯಲ್ಲಿಯೇ ಮಹಿಳೆ ಸಾಹಿತ್ಯ ರಚನೆ ಮಾಡುತ್ತ ಬಂದಿದ್ದರೂ ಅದನ್ನು ಸಾಹಿಯ ವಿಮರ್ಶಕರು ಸರಿಯಾದ ಚಿಂತನೆಗೆ ಒಳಪಡಿಸ ದೆಯಿರುವ ಕಾರಣ ಸ್ತ್ರೀ ಸಾಹಿತ್ಯವನ್ನು ಸ್ತ್ರೀವಾದಿ ವಿಮರ್ಶೆ ನೆಲೆಯಲ್ಲಿ ನೋಡಬೇಕೆಂಬ ದೋರಣೆ ಹುಟ್ಟಕೊಂಡಿದ್ದರ ಪರಿಣಾಮವಾಗಿ ಸ್ತ್ರೀವಾಗಿ ಸಾಹಿತ್ಯ ವಿಮರ್ಶೆ ಸೃಷ್ಟಿಯಾಯಿತು.

ಈಗಾಗಲೇ ತಮ್ಮ ಇತರೆ ಬರವಣಿಗೆಗಳಿಂದ ಹೆಸರಾಗಿದ್ದ ವಿಜಯಾ ದಬ್ಬೆ, ಮಲಿಕಾ ಘಂಟಿ, ಸುಮಿತ್ರಾ ದೇವಿ, ಎಂ.ಎಸ್. ಆಶದೇವಿ ಎಚ್.ಎಸ್. ಆರ್. ಪೂರ್ಣಿಮಾ ಮೊದಲಾದವರು ಕನ್ನಡ ಸಾಹಿತ್ಯ ವಿಮರ್ಶೆಯಲ್ಲಿ ಕೃಷಿ ಮಾಡಿದ್ದಾರೆ ಎಂದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here