ಸುರಪುರ: ನಮ್ಮ ಗ್ರಾಮದ ಅನೇಕ ಕೇರಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ,ಬೇಸಿಗೆ ಬರುತ್ತಿದೆ ಕೂಡಲೆ ಕುಡಿಯುವ ನೀರಿನ ವ್ಯವಸ್ಥೆ ಕೈಗೊಳ್ಳುವಂತೆ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವೆಂಕಟೇಶ ಬೇಟೆಗಾರ ಆಗ್ರಹಿಸಿದರು.
ದೇವರಗೋನಾಲ ಗ್ರಾಮದ ಪಂಚಾಯತಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ,ಗ್ರಾಮದಲ್ಲಿ ಶುಧ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲಾಗಿದೆ,ಆದರೆ ಇದುವರೆಗೂ ಆರಂಭಗೊಂಡಿಲ್ಲ. ಪಂಚಾಯತಿ ಮುಂದೆ ಹೊಸ ಬೋರವೆಲ್ ಕೊರೆಯಲಾಗಿದ್ದು ಅದಕ್ಕೆ ಇನ್ನೂ ಕೈಪಂಪು ಅಳವಡಿಸಿಲ್ಲ,ಎರಡನೇ ವಾರ್ಡಿಲ್ಲಿ ಶುಧ್ಧ ಕುಡಿಯುವ ನೀರಿನ ಗಟಕ ನಿರ್ಮಿಸುವುದು ಮತ್ತು ಪ್ರತಿ ಮನೆಗಳಿಗೆ ನಲ್ಲಿಯ ಕಲೆಕ್ಷನ್ ನೀಡಬೇಕು.ಗುರಿಕಾರ ತೋಟದ ಓಣಿಯಲ್ಲಿ ಬೋರವೆಲ್ ಹಾಕಬೇಕು,ಹೊಸ ಸಿದ್ದಾಪುರ ಮತ್ತು ವಾರಿ ಸಿದ್ದಾಪುರದಲ್ಲಿ ವಾಟರ್ ಟ್ಯಾಂಕ್ ಗುಮ್ಮಿಗಳನ್ನು ನಿಮೀಸಬೇಕು ನಮ್ಮ ಗ್ರಾಮದ ಕೆಂಚಮ್ಮ ಗುಡಿಯ ಹತ್ತಿರ ಕೊಳವೆಬಾವಿ ಕೊರೆಯಿಸಬೇಕೆಂದು ಆಗ್ರಹಿಸಿದರು.
ಹಿರಿಯ ಪತ್ರಕರ್ತ ಶಿವರಾಮ್ ಅಸೂಂಡಿ ವರ್ಗಾವಣೆ: ಬಿಳ್ಕೊಡಿಗೆ
ನಂತರ ಸ್ಥಳಕ್ಕೆ ಆಗಮಿಸಿದ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹಣಮಂತಪ್ಪ ಅಂಬ್ಲಿಗೆ ಮನವಿ ಸಲ್ಲಿಸಿದರು.ಮನವಿ ಸ್ವೀಕರಿಸಿದ ಎಇಇ ಹಣಮಂತಪ್ಪ ಅಂಬ್ಲಿ ಎಲ್ಲಾ ಬೇಡಿಕೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ ನಂತರ ಪ್ರತಿಭಟನೆಯನ್ನು ನಿಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಭೀಮಣ್ಣ ದೀವಳಗುಡ್ಡ ಮುಖಂಡರಾದ ನಾಗಪ್ಪ ಕನ್ನೆಳ್ಳಿ ಮಾರ್ಥಂಡಪ್ಪ ದೊರೆ ಶಿವಮೋನಯ್ಯ ಎಲ್.ಡಿ.ನಾಯಕ ದೇವಿಂದ್ರಪ್ಪ ಚಿಕ್ಕನಳ್ಳಿ ಹಣಮಂತ್ರಾಯಗೌಡ ಬಸನಗೌಡ ನಿಂಗು ಕಿರದಹಳ್ಳಿ ಸೇರಿದಂತೆ ಅನೇಕರಿದ್ದರು.