ಬರೀ ಮಾತಲ್ಲೇ ಕಲ್ಯಾಣ, ಕೃತಯಲ್ಲಿ ಏನೂ ಇಲ್ಲ: ಡಾ. ಅಜಯ್ ಸಿಂಗ್ ಲೇವಡಿ

1
20

ಕಲಬುರಗಿ: ಸಿಎಂ ಯಡಿಯೂರಪ್ಪ ಮಂಡಿಸಿರುವ ಬಜೆಟ್‍ನಲ್ಲಿ ಕಲ್ಯಾಣ ನಾಡಿನಲ್ಲಿ ಬರುವ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು ಜಿಲ್ಲೆಗಳನ್ನು ಸಂಪೂರ್ಣ ಅಲಕ್ಷಿಸಲಾಗಿದೆ ಎಂದಿರುವ ಜೇವರ್ಗಿ ಶಾಸಕ ಹಾಗೂ ವಿಧಾನ ಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜ್ ಸಿಂಗ್ ಬಿಜೆಪಿ ಸರಕಾರ ಬರೀ ಬಣ್ಣದ ಮಾತುಗಳನ್ನಾಡುತ್ತದೆ, ಮಾತಲ್ಲೇ ನಾಡಿನ ಕಲ್ಯಾಣ ಮಾಡಲು ಹೊರಟಂತಿದೆ, ಕೃತಿಯಲ್ಲಿ ಏನೂ ಇಲ್ಲ, ಭಾವನಾತ್ಮಕವಾಗಿ ಕಲ್ಯಾಣ ನಾಡವರಿಗೆ ಸೆಳೆಯುತ್ತದೆಯೇ ಹೊರತು ಅಭಿವೃದ್ಧಿ ಕೆಲಸಗಳ ಮೂಲಕ ಅಲ್ಲ ಎಂದು ಟೀಕಿಸಿದ್ದಾರೆ.

ಎರಡು ವರ್ಷಗಳ ಹಿಂದೆ ಕಲ್ಯಾಣ ನಾಡೆಂದು ಮರು ನಾಮಕರಣ ಮಾಡಿದ ಸಂದರ್ಭದಲ್ಲಿ ಖುದ್ದು ಯಡಿಯೂರಪ್ಪನವರೇ ಕಲ್ಯಾಣ ನಾಡಿಗೇ ಪ್ರತ್ಯೇಕ ಸಚಿವಾಲಯದ ಭರವಸೆ ನೀಡಿದ್ದೂ ಸಹ ಈಡೇರುತ್ತಿಲ್ಲ. ಇನ್ನು ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಗೆ 2000 ಕೋಟಿ ರು ಅನುದಾನ ಬೇಕೆಂಬ ಬೇಡಿಕೆ ಇದ್ದರೂ ಅದನ್ನೂ ಈಡೇರಿಸಿಲ್ಲ.  ಹೆಸರಿಗೆ ಮಾತ್ರ ಕಲ್ಯಾಣ ಅಂತ ಹೇಳುತ್ತಾರೆ, ನಂತರ ಕಲ್ಯಾಣ ನಾಡಿನ ಜನರ, ಭಾಗದ ಕಲ್ಯಾಣವನ್ನೇ ಮರೆಯುತ್ತಾರೆಂದು ಡಾ. ಅಜಯ್ ಸಿಂಗ್ ಮಾತಿನಲ್ಲೇ ಬಿಜೆಪಿ ಸರ್ಕಾರವನ್ನು ಛೇಡಿಸಿದ್ದಾರೆ.

Contact Your\'s Advertisement; 9902492681

ಕ್ಷಯಮುಕ್ತ ಶಹಾಬಾದ ಮಾಡಲು ಪಣ ತೊಡೋಣ‌: ಸಂತೋಷ ಕಾಳಗಿ

ಹಿಂದುಲಿದ 116 ತಾಲೂಕುಗಳ ಪ್ರಗತಿಗೆ 3 ಸಾವಿರ ಕೋರು ಅನುದಾನದ ಮಾತನ್ನಾಡಿದ್ದಾರೆ. ಇದು ರಾಜ್ಯದ ಎಲ್ಲಾ ತಾಲೂಕುಗಳಿಗೆ ಅನ್ವಯವಾಗಲಿದೆಯೇ ಹೊರತು ಕಲ್ಯಾಣ ನಾಡಿನ ಅತೀ ಹಿಂದುಳಿದ ತಾಲೂಕುಗಳ ಪ್ರಗತಿಗೆಂದೇ ಪ್ರತ್ಯೇಕ ಅನುದಾನ ಘೋಷಣೆ ಮಾಡಿಲ್ಲ. ಇದರಿಂದಾಗಿ ಮೊದಲೇ ಹಿಂದುಳಿದ ನೆಲದ ಪ್ರಗತಿಗೆ ಮತ್ತಷ್ಟೂ ಹೊಡೆತ ಬೀಳಲಿದೆ ಎಂಬ ಆತಂಕ ಡಾ. ಅಜಯ್ ಸಿಂಗ್ ಹೊರಹಾಕಿದ್ದಾರೆ.

ಕಲಬುರಗಿ ಜಿಮ್ಸ್‍ನಲ್ಲಿ ಸುಟ್ಟಗಾಯಗಳ ಚಿಕಿತ್ಸಾ ವಿಭಾಗ ಸ್ಥಾಪನೆ ವಿಚಾರ ಹೇಳಿದ್ದಾರೆ. ಈ ವಿಭಾಗ ಆಗಲೇ ಇಲ್ಲಿದೆ, ಮೇಲ್ದರ್ಜೆ ಅಗತ್ಯವಿದೆ. ಇದಕ್ಕಿಂತ ಮಿಗಿಲಾಗಿ ನಮಗೆ ಇಲ್ಲಿ ತಾಯಿ- ಮಕ್ಕಳ ಆಸ್ಪತ್ರೆ ಬೇಕಿದೆ. ಇದನ್ನು ಘೋಷಿಸಬಹುದಾಗಿತ್ತು. ಅದು ಬಿಟ್ಟು ಹಳೆಯ ಪ್ರಸ್ತಾವನೆಯನ್ನೇ ಪುನರುಚ್ಚರಿಸಿದ್ದಾರೆ. ಇನ್ನು ಫಿರೋಜಾಬಾದ್ ಬಲಿ 500 ಮೆವ್ಯಾ ಸೌರಶಕ್ತಿ ಘಟಕದ ಮಾತು ಹೇಳಲಾಗಿದೆ. ಇದೂ ಬರೀ ಹೇಳಿಕೆಯಾಗುತ್ತದೆಯೇ ಹೊರತು ಅಆನುಷ್ಠಾನ ಕಷ್ಟ ಎಂದು ಡಾ. ಅಜಯ್ ಶಂಕೆ ಹೊರಹಾಕಿದ್ದಾರೆ.

ಸರ್ವರ ಕಲ್ಯಾಣಕ್ಕೆ ಬಜೆಟ್: ಸ್ವಾಗತಾರ್ಹ

ಕಲ್ಯಾಣ ನಾಡಿನ ಪ್ರಗತಿ ಬಗ್ಗೆ ಬಿಜೆಪಿ ಸರಕಾರಕ್ಕೆ ಅದೆಷ್ಟು ಕಾಳಜಿ ಇದೆ ಎಂಬುದನ್ನ ಈ ಬಜೆಟ್ ಕನ್ನಡಿ ರೂಪದಲ್ಲಿ ಹಿಡಿದು ನಾಡಿನ ಜನತೆಗೇ ಎತ್ತಿ ತೋರಿಸಿದಂತಿದೆ. ಈ ಸರ್ಕಾರಕ್ಕೆ ಹಿಂದುಳಿದವರ ಬೆಂಬಲ ಮತ ರೂಪದಲ್ಲಿ ಬೇಕೇ ಹೊರತು ಈ ಹಿಂದುಳಿದವರು ವಾಸವಿರುವ ಜಿಲ್ಲೆಗಳ, ಭೂಭಾಗದ ಪ್ರಗತಿ ಎಲ್ಲಷ್ಟೂ ಬೇಕಾಗಿಲ್ಲ ಎಂಬುದಕ್ಕೆ ಯಡಿಯೂರಪ್ಪನವರು ಮಂಡಿಸಿದ ಈ ಬಜೆಟ್ಟೇ ಸಾಕ್ಷಿ ಎಂದು ಡಾ. ಅಜಯ್ ಸಿಂಗ್ ಮಾತಿನಲ್ಲೇ ಬಿಜೆಪಿಯನ್ನು ತಿವಿದಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here