ಮಹಿಳಾ ಸ್ವಾವಲಂಬನೆಯಿಂದಲೇ ದೇಶದ ಅಭಿವೃದ್ಧಿ

0
51

ಆಳಂದ: ಮಹಿಳೆಯರು ಸಮಾಜದ ಮುಖ್ಯ ವಾಹಿನಿಯಲ್ಲಿ ಬಂದು ಪುರುಷನಂತೆ ದುಡಿದು ಸ್ವಾವಲಂಬನೆಯಿಂದ ಜೀವನ ಸಾಧಿಸಿದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಎಸ್‌ಆರ್‌ಜಿ ಫೌಂಡೇಶನ್‌ನ ಆಡಳಿತಾಧಿಕಾರಿ ಡಾ. ರಾಘವೇಂದ್ರ ಚಿಂಚನಸೂರ ಅಭಿಪ್ರಾಯಪಟ್ಟರು.

ಆಳಂದ ಪಟ್ಟಣದ ಪ್ರತಿಷ್ಟಿತ ಎಸ್‌ಆರ್‌ಜಿ ಫೌಂಡೇಶನ್ ಅಡಿಯಲ್ಲಿ ನಡೆಯುತ್ತಿರುವ ವೆಂಕಯ್ಯ ಕೂಸಯ್ಯ ಗುತ್ತೇದಾರ ಸ್ಮಾರಕ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಶೈಕ್ಷಣಿಕ ಸಾಲಿನ ಸಾಂಸ್ಕೃತಿಕ, ಕ್ರೀಡೆ ಮತ್ತು ರಾಷ್ಟ್ರೀಯ ಸೇವಾ ಯೋಜನೆಯ ಚಟುವಟಿಕೆಗಳ ಉದ್ಘಾಟನೆ ನೇರವೇರಿಸಿ ಮಾತನಾಡಿದರು.

Contact Your\'s Advertisement; 9902492681

ಬರೀ ಮಾತಲ್ಲೇ ಕಲ್ಯಾಣ, ಕೃತಯಲ್ಲಿ ಏನೂ ಇಲ್ಲ: ಡಾ. ಅಜಯ್ ಸಿಂಗ್ ಲೇವಡಿ

ಸಧ್ಯ ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಶೇ ೩೩ ರಷ್ಟು ಮೀಸಲಾತಿ ನೀಡಲಾಗಿದೆ ಈ ಅವಕಾಶಗಳನ್ನು ಬಳಸಿಕೊಂಡು ಮಹಿಳೆಯರು ಮುಂದೆ ಬರಬೇಕು ಪ್ರಸ್ತುತ ಮಹಿಳೆಯರಿಗೂ ಸಮಾನ ಅವಕಾಶಗಳನ್ನು ಎಲ್ಲ ಕ್ಷೇತ್ರದಲ್ಲಿ ಕೊಡಲಾಗುತ್ತಿದೆ ಅದನ್ನು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು.

ಪದವಿ ಹಂತವು ಪಕ್ವತೆಯ ಹಂತವಾಗಿದ್ದು ಇಲ್ಲಿ ವಿದ್ಯಾರ್ಥಿಗಳು ಎಲ್ಲ ರೀತಿಯಿಂದ ಪ್ರಬುದ್ಧರಾಗುತ್ತಾರೆ ಅವರಿಗೆ ಈ ಹಂತದಲ್ಲಿ ಸೂಕ್ತ ಮಾರ್ಗದರ್ಶನದ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಕೂಡ ಸ್ವಪ್ರಯತ್ನ, ಸತತ ಅಧ್ಯಯನಶೀಲರಾಗಿ ಗುರಿ ಮುಟ್ಟುವ ಎದೆಗಾರಿಕೆ ಹೊಂದಬೇಕು ಎಂದು ಹೇಳಿದರು.

ಸರ್ವರ ಕಲ್ಯಾಣಕ್ಕೆ ಬಜೆಟ್: ಸ್ವಾಗತಾರ್ಹ

ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮಹಾದೇವ ವಡಗಾಂವ ಅವರು, ಈ ಭಾಗದ ಹೆಚ್ಚು ಹೆಚ್ಚು ವಿದ್ಯಾರ್ಥಿಗಳು ಉನ್ನತ ಅಧ್ಯಯನ ಕೈಗೊಂಡು ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಬೇಕು ಅಂದಾಗ ಮಾತ್ರ ಈ ಭಾಗದ ನಿಜವಾದ ಅಭಿವೃದ್ಧಿ ಸಾಧಿಸಿದಂತಾಗುತ್ತದೆ. ಮಾನವ ಅಭಿವೃದ್ಧಿ ಸೂಚ್ಯಾಂಕದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶವು ತೀರ ಹಿಂದೆ ಇದೆ ಈ ಹಣೆಪಟ್ಟಿ ಹೋಗಬೇಕಾದರೆ ನಾವು ಎಲ್ಲ ಕ್ಷೇತ್ರಗಳಲ್ಲಿ ಸುಸ್ಥಿರ ಅಭಿವೃದ್ಧಿ ಸಾಧಿಸಬೇಕಿದೆ ಎಂದರು.

ಬಿ.ಎಡ್ ಕಾಲೇಜ್ ಪ್ರಾಚಾರ್ಯ ಅಶೋಕರೆಡ್ಡಿ, ಎಂಎಆರ್‌ಜಿ ಕಾಲೇಜಿನ ಪ್ರಾಚಾರ್ಯ ಡಾ. ಅಪ್ಪಾಸಾಬ ಬಿರಾದಾರ ಮಾತನಾಡಿದರು. ವೇದಿಕೆಯ ಮೇಲೆ ಎಸ್ ಎನ್ ಕೋರೆ, ಎಸ್‌ಆರ್‌ಜಿ ಆಂಗ್ಲ್ ಮಾಧ್ಯಮ ಶಾಲೆಯ ಮುಖ್ಯಗುರು ಜ್ಯೋತಿ ವಿಶಾಖ್, ವಿದ್ಯಾರ್ಥಿ ಪ್ರತಿನಿಧಿ ವಿನೋದ ರಾಠೋಡ ಇದ್ದರು.

ರಾಷ್ಟ್ರೀಯ ಶಿಕ್ಷಣ ನೀತಿ 2020ರಲ್ಲಿ ನ್ಯಾಯ ಮತ್ತು ಒಗ್ಗೂಡುವಿಕೆ ಕಾರ್ಯಕ್ರಮ

ಶಿವಶರಣಪ್ಪ ಪೂಜಾರಿ ಪ್ರಾರ್ಥಿಸಿದರು. ಆಯೇಶಾ ಅಂಜುಮ್ ಸ್ವಾಗತಿಸಿದರು. ಖಂಡಪ್ಪ ವಗ್ಗಿ ನಿರೂಪಿಸಿದರೆ, ರಾಜಕುಮಾರ ಸುತಾರ ವಂದಿಸಿದರು. ಪ್ರಾಚಾರ್ಯ ಕಲ್ಯಾಣಿ ಸಾವಳಗಿ ಅಧ್ಯಕ್ಷತೆ ವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here