ಬಿಜೆಪಿ ಕಚೆರಿಯಲ್ಲಿ ರಾಷ್ರ್ಟಿಯ ಮಹಿಳಾ ದಿನಾಚರಣೆ

0
78

ಶಹಾಬಾದ: ಮಹಿಳೆ ತನ್ನ ಹಕ್ಕನ್ನು ಪಡೆಯಲು ಹೋರಾಟ ನಡೆಸಿ ಗೆಲುವುದು ಪಡೆದ ದಿನವನ್ನೇ ಮಹಿಳಾ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ಲೇಖಕಿ ನೀಲಮ್ಮ ಕತ್ನಳ್ಳಿ ಹೇಳಿದರು.

ಅವರು ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಗರದ ಬಿಜೆಪಿ ಮಂಡಲ ಮಹಿಳಾ ಮೊರ್ಚಾದ ವತಿಯಿಂದ ಆಯೋಜಿಸಲಾದ ರಾಷ್ರ್ಟಿಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

Contact Your\'s Advertisement; 9902492681

ತಿಮ್ಮಾಪುರ ಮರಗಮ್ಮ ದೇವಿ ಜಾತ್ರೆ ಅಂಗವಾಗಿ ಕೊಂಡ ಹಾಯುವ ಆಚರಣೆ

ಮಹಿಳೆಯರ ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಇನ್ನೀತರ ಕ್ಷೇತ್ರಗಳಲ್ಲಿ ಸಾಧನೆಯ ಸಂಕೇತ ದಿನ.ಹಿಂದೆ ಮಹಿಳೆಯರು ಕೇವಲ ನಾಲ್ಕು ಗೋಡೆಗಳ ಮಧ್ಯೆ ಜೀವಿಸುವ ಕಾಲವಿತ್ತು.ಮಾತ್ರವಲ್ಲ ಮತದಾನ ಮಾಡುವ ಹಕ್ಕು ಇರಲಿಲ್ಲ. ಯಾವುದೇ ರೀತಿಯ ಸ್ವಾತಂತ್ರ್ಯ, ಸ್ವ-ನಿರ್ಧಾರ, ಇಚ್ಛೆಗಳಿಗೆ ಬೆಲೆ ಇರುತ್ತಿರಲಿಲ್ಲ.ಆಕೆಯನ್ನು ಅಬಲೆಯಾಗಿ ಪರಿಗಣಿಸಿ ಶೋಷಣೆ ಮಾಡುವ ಕಾಲವಿತ್ತು.ಮಹಿಳೆಗೆ ಎಲ್ಲಾ ಸಾಮರ್ಥ್ಯವಿದ್ದರೂ ಅವಕಾಶದಿಂದ ವಂಚಿತೆಯಾಗಿದ್ದಳು.ಆದರೆ ಇಂದು ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಬಹು ದೊಡ್ಡ ಸಾಧನೆಯನ್ನೇ ಮಾಡಿದ್ದಾರೆ. ಆದ್ದರಿಂದ ಸಮಾಜ ಮಹಿಳೆಯರನ್ನು ನೋಡುವ ದೃಷ್ಟಿಕೋನ ಬದಲಾಗಬೇಕು.ಮಹಿಳೆಯರ ಸಾಧನೆಗೆ ಪ್ರೋತ್ಸಾಹ ನೀಡಬೇಕು.ಇದಕ್ಕೆ ಪುರುಷರ ನೈತಿಕ ಬೆಂಬಲ ದೊರಕಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಹಿಳಾ ಸಾಧಕರಾದ ಲೇಖಕಿ ನೀಲಮ್ಮ ಕತ್ನಳ್ಳಿ ಹಾಗೂ ಶಿಕ್ಷಕಿ ಕಾಶಿಬಾಯಿ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಸಭೆಯಲ್ಲಿ ಮಹಿಳಾ ಮೊರ್ಚಾದ ಅಧ್ಯಕ್ಷೆ ಜಯಶ್ರಿ ಸೂಡಿ, ಜಿಲ್ಲಾ ಗ್ರಾಮಿಣ ಕಾರ್ಯದರ್ಶಿ ಜ್ಯೋತಿ ಶರ್ಮಾ, ಮಂಡಲದ ಕಾರ್ಯದರ್ಶಿ ಶಶಿಕಲಾ ಸಜ್ಜನ,  ನಗರಸಭೆ ಸದಸ್ಯರಾದ ತಿಮ್ಮಾಬಾಯಿ ಕುಸಾಳೆ, ಜಯಶ್ರಿ ಜಿಂಗಾಡೆ, ನಂದಾ, ರತ್ನ ಬಿರಾದಾರ,   ಮಹಾದೇವಿ, ಜಗು, ವಂದನಾ, ಶ್ವೇತಾ, ಪಾರ್ವತಿ, ಮಾಹಾಂತಮ್ಮ, ರೇತಾ, ಗಂಗು, ಸರಸ್ವತಿ, ಶಿಲ್ಪಾ, ಶಾಂತಾ, ಲುಕೆಶ್ವರಿ,ಕಮಲಾಬಾಯಿ, ಇಂದ್ರಾ,ಸಂಗಿತಾ, ಶಾಲಿನಿ,ಪ್ರೇಮಾ, ಅನುಪಮಾ, ಲತಾ, ಕತಾಸರ, ಪ್ರೇಮಿಲಾ, ಶಿವಲಿಲಾ, ಶಿವಲಿಲಾ, ಆರತಿ, ಅನುಸುಯಾ, ಮಾಲಾಶ್ರೀ, ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. ಲತಾ ಸಂಜೀವ ನಿರೂಪಿಸಿ, ಸ್ವಾಗತಿಸಿದರು, ನೀಲಗಂಗಮ್ಮ ಘಂಟ್ಲಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here