ವ್ಯಾಪಾರಿಗಳ ಮೇಲೆ GST ಪರಿಣಾಮ ಕುರಿತು ವೆಬಿನಾರ್

1
54

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಚಿಂಚೋಳಿ ಯಲ್ಲಿನ ಶ್ರೀಮತಿ ಚಿನ್ನಮ್ಮ ಬಸಪ್ಪ ಪಾಟೀಲ ಪದವಿ ಮಹಾವಿದ್ಯಾಲಯದಲ್ಲಿ ಗ್ರಾಮೀಣ ಭಾರತದ ಸಣ್ಣ ವ್ಯಾಪಾರಿಗಳ ಮೇಲೆ GST ಪರಿಣಾಮ ಕುರಿತು ಒಂದು ದಿನದ ರಾಷ್ಟ್ರೀಯ ವೆಬಿನಾರ್ ವನ್ನು ಗ್ರಾಮೀಣ ಅಭಿವೃದ್ಧಿ ವಿಭಾಗ ಮತ್ತು ವಾಣಿಜ್ಯ ಶಾಸ್ತ್ರ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಜರುಗಿತು.

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಿಕ್ಷಣ ಪ್ರೇಮಿ ಡಾ ಭೀಮಾಶಂಕರ ಸಿ ಬಿಲಗುಂದಿ ಅವರು ವೆಬಿನಾರ್ ನ್ನು ಉದ್ಘಾಟಿಸಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜಿ ಎಸ್ ಟಿ ದೇಶದ ಆರ್ಥಿಕ ಅಭಿವೃದ್ಧಿಗೆ ಪೂರಕ ವಾಗಿದೆ ಸರಕು ಸಾಗಣೆ ಮತ್ತು ಮಾರಾಟ ವ್ಯವಸ್ಥೆ ಯಲ್ಲಿ ತೆರಿಗೆ ಸಂಪನ್ಮೂಲ ಕ್ರೋಡೀಕರಣದಲ್ಲಿ ತುಂಬಾ ನೆರವಾಗಿದ್ದು ಇದರಿಂದ ದೇಶದ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಗ್ರಾಮೀಣ ಪ್ರದೇಶದ ಸಣ್ಣ ವ್ಯಾಪಾರಿಗಳ ಮೇಲೆ GST ಧನಾತ್ಮಕ ಪರಿಣಾಮ ಬೀರಿದೆ ಎಂದರು.

Contact Your\'s Advertisement; 9902492681

ಸಂಸದ ಜಾಧವ್ ಗೆ ಶಾಸಕ ಖರ್ಗೆ ತಿರುಗೇಟು

ನಾಲಿಗೆಗೆ ಕಹಿಯಾದರೂ ಉದರಕ್ಕೆ ಸಿಹಿ ಎನ್ನುವಂತೆ ಜಿಎಸ್ ಟಿ ಒಂದು ಉತ್ತಮ ತೆರಿಗೆ ಪದ್ದತಿ ಆಗಿದೆ ಎಂದರು
ಆಶಯ ಭಾಷಣ ಮಾಡಿದ ಗುಲಬರ್ಗಾ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣ ಶಾಸ್ತ್ರ ದ ಡೀನ್ ರು ಡಾ ಬಸವರಾಜ ಎಸ್ ಮಠ ಅವರು GST ಜಾರಿಗೆ ಬಂದ ಬಗೆ ಅದರ ಪ್ರಾಮುಖ್ಯತೆ ಯ ಕುರಿತು ಅಂಕಿಅಂಶಗಳ ಸಮೇತ ವಿಶ್ಲೇಷಿಸಿದರು.

ವೆಬಿನಾರದ ಸಂಪನ್ಮೂಲ ವ್ಯಕ್ತಿಯಾಗಿ ನವದೆಹಲಿ ಯ ದೆಹಲಿ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ರು ಡಾ ಅಜಯಕಮಾರ ಗರ್ಗ ಅವರು ಮಾತನಾಡಿ GST ಎಂದರೇನು ಅದರ ಅರ್ಥ ನೊಂದಣಾ ಪದ್ದತಿ ಗ್ರಾಮೀಣ ಭಾರತದ ಸಣ್ಣ ವ್ಯಾಪಾರಿಗಳು ಮತ್ತು ಅವುಗಳ ಮೇಲೆ GST ಯ ಧನಾತ್ಮಕ ಹಾಗೂ ಋಣಾತ್ಮಕ ಪರಿಣಾ ಮ ಕುರಿತು ಮಾತನಾಡಿದರು.

ಘತ್ತರಗಾ ಗ್ರಾಮದಲ್ಲಿ ಶಾಲೆ, ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯಕ್ಕೆ ಒತ್ತಾಯ

ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳು ಕಲಬುರಗಿ ಯ ಖ್ಯಾತ ಚಾರ್ಟೆಡ್ ಅಕೌಂಟೆಂಟ್ ರಾದ ಶ್ರೀ ಶ್ರೀಶೈಲ ವೀರಣ್ಣ ಮಾಂತಗೋಳ ಅವರು ತಮ್ಮ ಪ್ರಬಂಧ ಮಂಡನೆ ಮಾಡಿ GST ಅಡಿಯಲ್ಲಿ ಮೌಲ್ಯ ಮಾಪನ ಮತ್ತು ಲೆಕ್ಕ ಪರಿಶೋಧನೆ ಕುರಿತು ವಿಶ್ಲೇಷಣೆ ಮಾಡಿದರಲ್ಲದೆ ವೆಬಿನರಲ್ಲಿ ಹುಟ್ಟಿಕೊಂಡ ಅನೇಕ ಪ್ರಶ್ನೆಗಳಿಗೆ ಸಂದೇಹಗಳಿಗೆ ಸಮರ್ಪಕವಾಗಿ ಉತ್ತರಿಸಿದರು.

ಅರ್ಥ ಶಾಸ್ತ್ರ ಉಪನ್ಯಾಸಕಿ ಶ್ರೀಮತಿ ದೀಪಾ ಕಟ್ಟಿ ಅವರ ಪ್ರಾರ್ಥನೆ ಯೊಂದಿಗೆ ಕಾರ್ಯಕ್ರಮ ಆರಂಭವಾಯಿತು ಮಹಾವಿದ್ಯಾಲಯ ಪ್ರಾಚಾರ್ಯರು ಬಾ ಶ್ರೀಶೈಲ ನಾಗರಾಳ ಅವರು ಸರ್ವರನ್ನು ಸ್ವಾಗತಿಸಿ ವೆಬಿನಾರ ಉದ್ದೇಶ ವಿಷಯ ಕುರಿತು ಪ್ರಾಸ್ತಾವಿಕ ಮಾತನಾಡಿದರು.

ಕಾಲೇಜಿನ ನ್ಯಾಕ್ ನಾ ಸಂಯೋಜಕರು ಡಾ.ಸಿ ವಿ ಕಲಬುರ್ಗಿ ಅವರು ಕಾರ್ಯಕ್ರಮ ನಿರೂಪಿಸಿದರು. ಆಯ್ ಕ್ಯೂ ಎ ಸಿ ಸಂಯೋಜಕರು ಡಾ ಮಾಡಿಕೊಳ್ಳಿ ಸುಲ್ತಾನಪುರ ಡಾ.ಸಿದ್ದಣ್ಣ ಕೊಳ್ಳಿ ಪ್ರೊ. ಶಿವರಾಜ ಜಿ ಮಠ ದೀಪಾ ಕಟ್ಟಿ ಸುಧಾ ಆಫೀಸ್ ಸಿಬ್ಬಂದಿ ಎಂ ಎನ್ ಪಾಟೀಲ, ಶಿವರಾಜ ಹೀರಣ್ಣ, ಶ್ರೀನಿವಾಸ ಎಸ್ ಆರ್ ಬಡಾ ನೆರವಾದರು ಎಂದು ಮಹಾವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here