ಆರೋಗ್ಯವಂತ ಶಿಶು ದೇಶದ ಸಂಪತ್ತು

0
110

ಕಲಬುರಗಿ: ಆರೋಗ್ಯವಂತ ಶಿಶು ಪ್ರದರ್ಶನ ತೆಗ್ಗಳ್ಳಿ ಗ್ರಾಮದಲ್ಲಿ ತಾಲೂಕ ಪಂಚಾಯತ್ ಸದಸ್ಯರಾದ ಗುರಣ್ಣ ಜಮಾದಾರ್ ಅವರಿಂದ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಪ್ರಾಥಮಿಕ ಆರೋಗ್ಯ ಕೇಂದ್ರ ಗೊಬ್ಬುರ್ ಬಿ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಬಳೆ ಮಾತನಾಡುತ್ತಾ ಮಕ್ಕಳಿಗೆ ಲಸಿಕೆ ಮಹತ್ವ ಗರ್ಭಿಣಿ ಎಂದು ತಿಳಿದ ಕೂಡಲೇ ತಾಯಿ ಕಾಡು ಮಹತ್ವ ಅಲ್ಲದೆ ಸರಕಾರದ ಮಕ್ಕಳ ಮಕ್ಕಳ ಆರೋಗ್ಯದ ಕಾಳಜಿಯಲ್ಲಿ ಸೌಲಭ್ಯಗಳನ್ನು ಕುರಿತು ಮಾಹಿತಿಯನ್ನು ನೀಡಿದರು.

Contact Your\'s Advertisement; 9902492681

ತಾಲೂಕ ಪಂಚಾಯತ್ ಸದಸ್ಯರಾದ ಗುರಣ್ಣ ಜಮಾದಾರ್ ಅವರು ಮಾತನಾಡಿ ಸದೃಢವಾದ ತಾಯಿ ಸದೃಢವಾಗಿ ಬೆಳೆಯಲು ಸರಕಾರ ಏನೆಲ್ಲಾ ಸೌಲತ್ತುಗಳು ಮಾತನಾಡಿ ತಿಳಿಸಿದ್ದಕ್ಕಾಗಿ ಧನ್ಯವಾದಗಳನ್ನು ತಿಳಿಸಿ ತಾಯಂದಿರಿಗೆ ಅದರ ಸದುಪಯೋಗವನ್ನು ಪಡೆಯಲು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಿರಿಯ ಆರೋಗ್ಯ ಸಹಾಯಕಿ ಮಹಿಳೆ ಕವಿತಾ ಅವರು ಎದೆಹಾಲಿನ ಮಹತ್ವ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಸಹಾಯಕ, ನೇತ್ರಾಧಿಕಾರಿ ಸುರೇಶ್ ಬಂಡಗಾರ್, ಕಿರಿಯ ಆರೋಗ್ಯ ಸಹಾಯಕ ಗುರುಪ್ರಸಾದ್, ಅಂಗನವಾಡಿ ಕಾರ್ಯಕರ್ತೆ ತುಂಗಮ್ಮ, ಆಶಾ ಕಾರ್ಯಕರ್ತೆ ಸುಧಾರಾಣಿ, ಗರ್ಭಿಣಿಯರು ತಾಯಿಂದಿರು ಭಾಗವಹಿಸಿದ್ದರು ನಂತರ ವಿಜೇತ ಮಕ್ಕಳಿಗೆ ತಾಲೂಕ ಪಂಚಾಯತ್ ಸದಸ್ಯರಿಂದ ಹಾಗೂ ವೇದಿಕೆಯ ಮೇಲೆ ಅತಿಥಿಗಳಿಂದ ಬಹುಮಾನವನ್ನು ವಿತರಿಸಲಾಯಿತು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here