ಶಹಾಬಾದ: ಕ್ಷಯ ರೋಗಿಯ ಕಫ ಪರೀಕ್ಷೆ ಮಾಡಿಸಿ ಪತ್ತೆ ಹಚ್ಚಬಹುದಲ್ಲದೇ, ಸೂಕ್ತ ಚಿಕಿತ್ಸೆಯಿಂದ ಬೇಗ ಗುಣಮುಖರಾಗಬಹುದು ಜಿಲ್ಲಾ ಹಿರಿಯ ಟಿಬಿ ಮೇಲ್ವಿಚಾರಕ ಸಂತೋಷ ಕಾಳಗಿ ಹೇಳಿದರು.
ಅವರು ನಗರದ ಸಮುದಾಯ ಆರೋಗ್ಯ ಕೇಂದ್ರದ ಸಭಾಂಗಣದಲ್ಲಿ.ಜಿಪಂ ಕಲಬುರಗಿ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ಜಿಲ್ಲಾ ಕ್ಷಯ ರೋಗ ನಿರ್ಮೂಲನ ಕೇಂದ್ರ ಕಲಬುರಗಿ ಇವರ ಸಂಯುಕ್ತಶ್ರಾಯದಲ್ಲಿ ಆಯೋಜಿಸಲಾದ ಕ್ಷಯ ರೋಗದಿಂದ ಗುಣಮುಖರಾದವರಿಗೆ ಸನ್ಮಾನ ಮತ್ತು ಟಿಬಿ ಚಾಂಪಿಯನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೊಟ್ಟೆ ನೋವಿಗೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ
ಕ್ಷಯ ರೋಗಿಗಳು ಸೂಕ್ತ ಚಿಕಿತ್ಸೆಯಿಂದ ಗುಣಮುಖರಾದವರು ಸಮುದಾಯದ ಜೊತೆಗೆ ಕೈ ಜೋಡಿಸಿ. ಟಿಬಿ ಬಹಳ ದೊಡ್ಡ ಕಾಯಿಲೆಯಲ್ಲ. ಸಮುದಾಯದ ಜನರಿಗೆ ಹಾಗೆ ಸದ್ಯ ಚಿಕಿತ್ಸೆ ಪಡೆದು ಕೊಳ್ಳುವವರಿಗೆ ನಿಮ್ಮ ಸಲಹೆ ಅತ್ಯಮೂಲ್ಯವಾಗಿದೆ. ಅವರು ಸೂಕ್ತ ಚಿಕಿತ್ಸೆ ಪಡೆದು ಬೇರೆಯ ಕ್ಷಯ ರೋಗಿಗಳಿಗೆ ಮಾದರಿ ಆಗಬೇಕು.ಟಿಬಿ ಚಾಂಪಿಯನ್ಸ ಕ್ರಮದ ಉದ್ದೇಶ ನಿಮ್ಮ ಕುಟುಂಬದ ಸದಸ್ಯರಿಗೆ ಇಂತಹುದೇ ಕ್ಷಯ ರೋಗದ ಲಕ್ಷಣ ಕಂಡು ಬಂದರೆ ಸೂಕ್ತ ಚಿಕಿತ್ಸೆ ನೀಡಿ ಟಿಬಿ ಚಿಕಿತ್ಸೆ ಸಂಪೂರ್ಣ ಉಚಿತವಾಗಿ ಎಲ್ಲಾ ಸರ್ಕಾರಿ ಆಸ್ಪತ್ರೆ ಡಿಎಂಸಿ ಯಲ್ಲಿ ಮಾತ್ರೆ ಉಚಿತವಾಗಿ ನೀಡಲಾಗುತ್ತದೆ. ಶಹಾಬಾದ ನಗರವನ್ನು ಕ್ಷಯ ಮುಕ್ತ ಮಾಡಲು ಪಣ ತೋಡೊಣ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಗರದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಅಬ್ದುಲ್ ರಹೀಮ್ ಮಾತನಾಡಿ, ಕ್ಷಯ ರೋಗಿಗಳು ಸಕಾಲಕ್ಕೆ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಕೊಂಡ ಆರು ತಿಂಗಳಿಂದ ಹದಿನೆಂಟು ತಿಂಗಳು ಮಾತ್ರೆ ತೆಗೆದುಕೊಂಡರೆ ರೋಗ ಬೇಗನೆ ವಾಸಿಯಾಗುತ್ತದೆ. ನಮ್ಮ ಇಲಾಖೆಯ ಜೊತೆಗೆ ಕೈ ಜೋಡಿಸಿ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರಿಂದ ಮಾ 15ಕ್ಕೆ ಉಪವಾಸ ಸತ್ಯಾಗ್ರಹ
ಜಿಲ್ಲಾ ಡಿಆರ್‌ಟಿಬಿ ಸಕ್ಷಮ ಪರ್ವ ಟೀಸ್ ಅಪ್ತ ಸಮಾಲೋಚಕ ಮಂಜುನಾಥ ಕಂಬಳಿಮಠ ಮಾತನಾಡಿ, ಇದೇ ಮಾರ್ಚ ೨೪ರಂದು ವಿಶ್ವ ಕ್ಷಯ ರೋಗದಿನವನ್ನಾಗಿ ಆಚರಿಸಲಾಗುತ್ತದೆ. ಎರಡೂ ವಾರಕಿಂತ ಹೆಚ್ಚು ಕೆಮ್ಮು, ಜ್ವರ, ತೂಕ ಕಡಿಮೆ ಆಗುವ ಲಕ್ಷಣ ಕಂಡು ಬಂದಲ್ಲಿ, ಹತ್ತಿರದ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಚಿಕಿತ್ಸೆ ಪಡೆದುಕೊಳ್ಳಿ ಎಂದರು.
ಇದೆ ಸಂದರ್ಭದಲ್ಲಿ ಗುಣಮುಖರಾದ ಟಿಬಿ ಚಾಂಪಿಯನ್‌ಗಳಿಗೆ ಸನ್ಮಾನಿಸಲಾಯಿತು. ಕಛೇರಿ ಅಧಿಕ್ಷಕರು ಮೋಹನ್ ಗಾಯಕವಾಡ,ಹಿರಿಯ ಟಿಬಿ ಚಿಕಿತ್ಸಾ ಮೇಲ್ವಿಚಾರಕಿ ರಜನಿ ಟಿಳ್ಳೆ , ಕಿರಿಯ ಆರೋಗ್ಯ ಸಹಾಯಕ ಯುಸೂಫ್,ಆಕಾಶ ಉಪಸ್ಥಿತರಿದ್ದರು.