ಜೇವರ್ಗಿ ಮೋರಾರ್ಜಿ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡ: ವಿಧಾನ ಸಭೆಯಲ್ಲಿ ಡಾ. ಅಜಯ್ ಸಿಂಗ್ ಆಗ್ರಹ

0
44

ಕಲಬುರಗಿ: ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿ£ಲ್ಲಿರುವ 6  ಮೊರಾರ್ಜಿ ವಸತಿ ಶಾಲೆಗಳಿಗೆ ಸ್ವಂತ ಕಟ್ಟಡವಿಲ್ಲದ ಕಾರಣ ಉಭಯ ತಾಲೂಕಿನ ಬಡ ಮಕ್ಕಳ ಶಿಕ್ಷಣಕ್ಕೆ ಹಿನ್ನೆಡೆ ಉಂಟಾಗುತ್ತಿದೆ, ಆದಷ್ಟು ಬೇಗ ಸ್ವಂತ ಕಟ್ಟಡಗಳನ್ನು ಒದಗಿಸಬೇಕೆಂದು ಜೇವರ್ಗಿ ಮತಕ್ಷೇತ್ರದ ಶಾಸಕ ಹಾಗೂ ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ. ಅಜಯ್ ಸಿಂಗ್ ಸದನದಲ್ಲಿ ಸೋಮವಾರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಸದನದಲ್ಲಿ ತಮ್ಮ ಪ್ರಶ್ನೆಗೆ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ನೀಡಿದ್ದ ಲಿಖಿತ ಉತ್ತರದ ಹಿನ್ನೆಲೆಯಲ್ಲಿ ವಿಷಯವನ್ನು ಚರ್ಚೆಗೆ ಪ್ರಸ್ತಾಪಿಸಿದ ಡಾ. ಅಜಯ್ ಸಿಂಗ್ ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ನೆಲೋಗಿ, ಯಡ್ರಾಮಿ, ಕೋಳ್ಕೂರ್, ಬಿಳವಾರ, ಆಂದೋಲಾ ಹಾಗೂ ಅರಳ ಗುಂಡಗಿ ಊರುಗಳಲ್ಲಿ  6 ಮೊರಾರ್ಜಿ ವಸತಿ ಶಾಲೆಗಳು ಮಂಜೂರಾಗಿದ್ದವು.

Contact Your\'s Advertisement; 9902492681

ರಕ್ತದಾನ ಶಿಬಿರ, ನೂತನ ಚುನಾಯಿತರಿಗೆ ಕುಂಬಾರ ಸಮಾಜ ಸನ್ಮಾನ

ಹೀಗೆ ಮಂಜೂರಾಗಿರುವ ಶಾಲೆಗಳ ಪೈಕಿ ನೆಲೋಗಿಯಲ್ಲಿರುವ ಶಾಲೆಯ ಸ್ವಂತ ಕಟ್ಟಡ ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಉಳಿದಂತೆ ಯಡ್ರಾಮಿ ಹಾಗೂ ಕೋಳ್ಕೂರ್‍ಲ್ಲಿ ಕಾಮಗಾರಿಗಳು ನಿಧಾನಗತಿಯಲ್ಲಿ ಸಾಗಿವೆ. ಇನ್ನು ಬಿಳವಾರ, ಆಂದೋಲಾ ಹಾಗೂ ಅರಳ ಗುಂಡಗಿಗಳಲ್ಲಿ ಶಾಲೆಗಳಿಗೆ ಸ್ವಂತ ಕಟ್ಟಡವೇ ಇ್ಲ, ಬಾಡಿಗೆ ಕಟ್ಟಡಗಳಲ್ಲಿ ಈ ಶಾಲೆಗಳು ನಡೆಯುತ್ತಿವೆ. ಇದರಿಂದ ಮಕ್ಕಳ ಶಿಕ್ಷಣದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತಿದೆ, ಆದಷ್ಟು ಬೇಗ ಇವೆಲ್ಲ ಶಾಲೆಗಲಿಗೆ ಸ್ವಂತ ಕಟ್ಟಡ ಒದಗಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಡಾ. ಅಜಯ್ ಸಿಂಗ್ ಆಗ್ರಹಿಸಿದ್ದಾರೆ.

ನೆಲೋಗಿಯಲ್ಲಿ ಶಾಲಾ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಕಾಯುತ್ತಿದೆ, ಬೇಗ ಈ ಕಟ್ಟಡ ಉದ್ಘಾಟಿಸಿ ಮಕ್ಕಳಿಗೆ ಸವಲತ್ತು ನೀಡಬೇಕು ಎಂದೂ ಶಾಸಕರು ಸದನದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸಿಸಿ ರಸ್ತೆ ಕಾಮಗಾರಿಗೆ ಗ್ರಾಪಂ ಸದಸ್ಯರಿಂದ ಚಾಲನೆ

ಶಾಸಕ ಡಾ. ಅಜಯ್ ಸಿಂಗ್ ಪ್ರಸ್ತಾಪಿಸಿದ ವಸತಿ ಶಾಲೆಗಳ ಕಟ್ಟಡ ಸಮಸ್ಯೆಗೆ ಸ್ಪಂದಿಸಿದ ಸಮಾಜ ಕಲ್ಯಾಮ ಖಾತೆ ಸಚಿವಶ್ರೀ ರಾಮುಲು ಬಿಳವಾರದಲ್ಲಿ ನಿವೇಶನ ಸಮಸ್ಯೆ ಇತ್ತು, ಇದೀಗ 8 ಎಕರೆ ಜಮೀನು ದೊರಕಿದೆ ಎಂದು ಅಲ್ಲಿನ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ಬಂದಿದ್ದು ಆದಷ್ಟು ಬೇಗ ಇದಕ್ಕಾಗಿ ಹಣ ಬಿಡುಗಡೆ ಮಾಡಲಾಗುತ್ತದೆ. ಇನ್ನು ಆಂದೋಲಾ ಹಾಗೂ ಅರಳಗುಂಡಗಿ ಮೋರಾರ್ಜಿ ವಸತಿ ಶಾಲೆಗಳಿಗೂ ಸ್ವಂತ ಕಟ್ಟಡ ಹೊಂದಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ವಸತಿ ಶಾಲೆಗಳು ಸುಸಜ್ಜಿತ ಕಟ್ಟಡಗಳಿಲ್ಲದೆ ಬಾಡಿಗೆ ಕಟ್ಟಡಗಳಲಿ ನಡೆಯುತ್ತಿರುವದರಿಂದ ಅನೇಕ ಸಮಸ್ಯೆಗಳು ಕಾಡುತ್ತಿವೆ. ಇದರಿಂದ ಜೇವರ್ಗಿ ಹಾಗೂ ಯಡ್ರಾಮಿ ತಾಲೂಕಿನ ಬಡ ಮಕ್ಕಳ ಶೈಕ್ಷಣಿಕ ಭವಿಷ್ಯ ಡೋಲಾಯಮಾನವಾಗಿದೆ, ಆದಷ್ಟು ಬೇಗ ಹಣ ಮಂಜೂರು ಮಾಡುವ ಮೂಲಕ ಎಲ್ಲಾ ಶಾಲೆಗಳು ಸ್ವಂತ ಕಟ್ಟಡದಲ್ಲಿ ನಡೆಯುವಂತೆ ಸವಲತ್ತು ಒದಗಿಸಬೇಕೆಂದೂ ಡಾ. ಅಜಯ್ ಸಿಂಗ್ ಸದನದಲ್ಲಿ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here