ಶಹಾಬಾದ: ತಾಲೂಕಾಡಳಿತ ಹಾಗೂ ಕಲಬುರಗಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಸಂಯುಕ್ತಾಶ್ರಯದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ನೇಮಕಾತಿ ವಿರುದ್ಧ ಜಾಗೃತಿ ರಥಕ್ಕೆ ಶಹಾಬಾದ ತಹಶೀಲ್ದಾರರ ಕಚೇರಿ ಆವರಣದಲ್ಲಿ ತಹಶೀಲ್ದಾರರು ಹಾಗೂ ತಾಲೂಕು ದಂಡಾಧಿಕಾರಿಗಳಾದ ಸುರೇಶ ವರ್ಮಾ ಅವರು ಸೋಮವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ತಹಸೀಲ್ದಾರ ಸುರೇಶ ವರ್ಮಾ, ೧೪ ವ?ದೊಳಗಿನ ಮಕ್ಕಳನ್ನು ಯಾವುದೇ ಕೆಲಸಕ್ಕೆ ನೇಮಿಸಿಕೊಳ್ಳುವುದು ಹಾಗೂ ೧೮ ವ?ದೊಳಗಿನ ಕಿಶೋರಾವಸ್ಥೆ ಕಾರ್ಮಿಕರನ್ನು ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸಕ್ಕೆ ನೇಮಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದೆ. ಮಕ್ಕಳನ್ನು ನೇಮಿಸಿಕೊಂಡ ಮಾಲೀಕರಿಗೆ ೫೦,೦೦೦ ರೂ.ಗಳ ವರೆಗೆ ದಂಡ ಅಥವಾ ಎರಡು ವ?ಗಳ ಸೆರೆಮನೆ ವಾಸದ ಶಿಕ್ಷೆಗೆ ಒಳಪಡಸಲಾಗುತ್ತದೆ. ಇದಲ್ಲದೇ ತಪ್ಪಿತಸ್ಥ ಮಾಲೀಕರ ವಿರುದ್ಧ ಎಫ್.ಐ.ಆರ್. ಸಹ ದಾಖಲಿಸುವುದರ ಜೊತೆಗೆ ಕೆಲಸಕ್ಕೆ ಸೇರಿಸಿದ ಪಾಲಕರ ಮೇಲೆಯೂ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದರು.
ನಗರಸಭೆಗೆ ಜಗದೇವ ಸುಬೇದಾರ ನಾಮ ಪತ್ರ ಸಲ್ಲಿಕೆ
ಪ್ರತಿ ತಿಂಗಳು ಪತ್ತೆದಾಳಿ ನಡೆಸಿ ಬಾಲಕಾರ್ಮಿಕರನ್ನು ರಕ್ಷಿಸಿ, ತಪ್ಪಿತಸ್ಥ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಬೇಕು. ಯಾರೂ ಬಾಲಕಾರ್ಮಿಕರನ್ನು ನೇಮಿಸಿಕೊಳ್ಳಬಾರದೆಂದು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅವಶ್ಯಕವಾಗಿದೆ ಎಂದರು.
ಉಪತಹಶೀಲ್ದಾರ ವೀರಣ್ಣಗೌಡ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ ರಂಜೋಳಕರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಸ್.ಎಂ. ಪಾಟೀಲ್, ಕಲಬುರಗಿ ರಾಷ್ಟ್ರೀಯ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಸಂತೋ? ಕುಲಕರ್ಣಿ, ಸೋಮಶೇಖರ ವಿ.ಜೆ., ಶಹಾಬಾದ ವಲಯದ ಶಿಕ್ಷಣ ಸಂಯೋಜಕ ರವಿಚಂದ್ರ ರಾಠೋಡ್, ಬಸವರಾಜ ಟೆಂಗಳಿ, ಸುಂದರ, ಶ್ರೀಶೈಲ್ ಬಿರಾದಾರ್, ನೇತ್ರಾವತಿ,ಶಕುಂತಲಾ ಸಾಕ್ರೆ ಹಾಗೂ ಶಹಾಬಾದ ಶಿಶು ಅಭಿವೃದ್ಧಿ ಯೋಜನೆ ಮೇಲ್ವಿಚಾರಕ ಹಾಗೂ ಮಕ್ಕಳ ಸಹಾಯವಾಣಿ ಸಿಬ್ಬಂದಿ ಉಪಸ್ಥಿತರಿದ್ದರು.