ಕಲುಬರಗಿ: ಕರ್ನಾಟಕ ರಾಜ್ಯದ ಗ್ರಾಮೀಣ ಭಾಗದ ಹೊಲ ಗದ್ದೆಗಳಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿರುವ ನಿವಾಸಿಗಳಿಗೆ ರಾತ್ರಿ ಹೊತ್ತಿನಲ್ಲಿ ಕನಿಷ್ಟ 1 ಫೇಸ್ ವಿದ್ಯುತ್ ಪೊರೈಸಬೇಕು ಎಂದು ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರ ಪ್ರಶ್ನೆಗೆ ಮುಖ್ಯಮಂತ್ರಿಗಳಿಗೆ ಕೇಳಿದರು.
ವಿಧಾನಸಭೆ ಅಧಿವೇಶನದಲ್ಲಿ ನಿಯಮ ೭೩ರ ಅಡಿಯಲ್ಲಿ ಗಮನ ಸೆಳೆಯುವ ಪ್ರಶ್ನೆ ಕೇಳಿದ ಆಳಂದ ಶಾಸಕ ಸುಭಾಷ್ ಆರ್ ಗುತ್ತೇದಾರರು, ಹೊಲ ಗದ್ದೆಗಳಲ್ಲಿ ರಾತ್ರಿ ವಿದ್ಯುತ್ ಪೊರೈಕೆ ಇಲ್ಲದಿರುವುದಿಂದ ಹುಳ ಹುಪ್ಪಡಿಗಳು ಕಚ್ಚಿ ಅಪಾರ ಪ್ರಮಾಣದ ಸಾವು ನೋವು ಸಂಭವಿಸುತ್ತಿವೆ ಆದರಿಂದ ಇದಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಸಂಸದ ಉಮೇಶ ಜಾಧವರಿಂದ ನಿರ್ಲಕ್ಷ್ಯ: ಮಾಜಿ ಶಾಸಕ ಬಿ.ಆರ್. ಪಾಟೀಲ ಪತ್ರ
ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿಗಳು, ಪ್ರಸ್ತುತ ರಾಜ್ಯಾದ್ಯಂತ ರೈತರ ನೀರಾವರಿ ಪಂಪಸೆಟ್ ಗಳಿಗೆ ದಿನವಹಿ ೭ ಗಂಟೆಗಳ ಕಾಲ ೩ ಫೇಸ್ ವಿದ್ಯುತ್ ಪೊರೈಸಲಾಗುತ್ತಿದೆ. ಕೃಷಿ ಮತ್ತು ಕೃಷಿಯೇತರ ವಿದ್ಯುತ್ ಹೊರೆ ಬೇರ್ಪಡಿಸದ ಗ್ರಾಮೀಣ ಫೀಡರಗಳಿಗೆ ೭ ಗಂಟೆಗಳ ೩ ಫೇಸ್ ವಿದ್ಯುತ್ತನ್ನು ಬ್ಯಾಚ್‌ಗಳಲ್ಲಿ ಹಾಗೂ ಸಂಜೆ ೬ ರಿಂದ ಬೆಳಿಗ್ಗೆ ೬ರ ವರೆಗೆ ಸಿಂಗಲ್ ವಿದ್ಯುತ್ ಪೊರೈಸಲಾಗುತ್ತಿದೆ ಎಂದು ಉತ್ತರಿಸಿದರು.