ಕಲಬುರಗಿ: ಸರಿನ್ ಕಮಿಟಿ ವರದಿ ಅನ್ವಯ ೨೦೧೪ರಲ್ಲಿಯೇ ಕಲಬುರಗಿಯಲ್ಲಿ ಸ್ಥಾಪಿಸಲಾಗಿದ್ದ ರೈಲ್ವೆ ವಲಯ ಕಛೇರಿಯನ್ನು ರದ್ದು ಮಾಡಿ ಕಲ್ಯಾಣ ಕರ್ನಾಟಕದ ಕಲಬುರಗಿಗೆ ಮೋಸ ಮಾಡಿರುವ ಕೇಂದ್ರ ರೈಲ್ವೆ ಇಲಾಖೆಯ ಮೋಸದ ನೀತಿ ಖಂಡಿಸಿ ಕರ್ನಾಟಕ ನವನಿರ್ಮಾಣ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಸಲ್ಲಿಸಿದರು.
ಸೊಲ್ಲಾಪುರ ಮತ್ತು ಸಿಕಿಂದರಾಬಾದ ರೈಲ್ವೆ ವಲಯಗಳಲ್ಲಿ ಹಂಚಿ ಹೋಗಿರುವ ಕಲಬುರಗಿ ವಿಭಾಗ ಈ ಎರಡೂ ವಲಯಗಳಿಗೆ ಹೆಚ್ಚು ಆದಾಯ ತಂದುಕೊಡುವ ಕೇಂದ್ರ ಸ್ಥಾನವಾಗಿದೆ. ಕಲ್ಯಾಣ ಕರ್ನಾಟಕದ ಪ್ರಮುಖ ಆರ್ಥಿಕ ಮತ್ತು ವಾಣಿಜ್ಯ ನಗರಿ ಯಾಗಿರುವ ಕಲಬುರಗಿಗೆ ತನ್ನದೇ ಆದ ಸ್ವತಂತ್ರ ಸಾಮರ್ಥ್ಯವಿದೆ. ತೊಗರಿ, ಸಿಮೆಂಟ್ ಸೇರಿದಂತೆ ಹಲವು ವಾಣಿಜ್ಯ ವ್ಯಾಪಾರ ಮಾರುಕಟ್ಟೆಗಳಿವೆ. ಸಂವಿಧಾನದ ೩೭೧ಜೇ ವಿಧಿ ಅಡಿ ಮೀಸಲಾತಿ ನೀಡಿದ್ದರೂ ಸರಕಾರ ಮತ್ತು ಜನ ಪ್ರತಿನಿಧಿಗಳ ನಿರ್ಲಕ್ಷ್ಯದಿಂಂದ ರೇಲ್ವೆ ವಲಯ ರದ್ದುಪಡಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಯುಕೆಯಲ್ಲಿ ಮನಸೂರೆಗೊಂಡ ’ಇರುಳು ಹಗಲಾಗುವುದರೊಳಗೆ’ ನಾಟಕ
ರೈಲ್ವೆ ವಲಯ ಕಛೇರಿಗೆ ಅಡಿಗಲ್ಲು ಸಮಾರಂಭ ಮಾಡಿದ ಮೇಲೂ ಅದನ್ನು ರದ್ದು ಮಾಡಿದ್ದು ಯಾವ ಪುರುಷಾರ್ಥಕ್ಕೆ ಎಂದು ಕೇಂದ್ರ ಸರಕಾರ ಈ ಭಾಗದ ಜನರಿಗೆ ಸ್ಪಷ್ಟಪಡಿಸಬೇಕು. ಹಿಂದುಳಿದ ಹೆಸರಿನ ಹಣೆ ಪಟ್ಟಿಯಿಂದ ಈ ಭಾಗ ಹೊರ ತರುವ ಬದಲು ಹಣೆ ಪಟ್ಟಿಯ ಮೇಲೆ ಮೊಳೆ ಹೊಡೆದು ಶಾಶ್ವತ ಹಿಂದುಳಿಯುವಂತೆ ಮಾಡುತ್ತಿರುವ ರಾಜಕೀಯ ವ್ಯವಸ್ಥೆಯ ವಿರುದ್ಧ ಘೋಷಣೆ ಕೂಗಿದರು.
ಈ ಭಾಗದ ಅನೇಕ ರೈಲ್ವೆ ಯೋಜನೆಗಳಿಗೆ ದಶಮಾನಗಳೇ ಕಳೆಯುತ್ತಾ ಬಂದರೂ ಮುಕ್ತಿ ಸಿಕ್ಕಿಲ್ಲ. ಸ್ವಾರ್ಥ ರಾಜಕೀಯ ಕಾರಣಗಳಿಗಾಗಿ ಈ ಯೋಜನೆ ಬಲಿಯಾಗಲು ನಾವು ಬಿಡುವುದಿಲ್ಲ. ಒಂದು ತಿಂಗಳೋಳಗಾಗಿ ರದ್ದು ಮಾಡಿರುವ ಆದೇಶ ಮರಳಿಪಡೆಯದಿದ್ದರೆ ರಾಜ್ಯಾದ್ಯಂತ ರೈಲು ತಡೆದು ಪ್ರತಿಭಟನೆ ನಡೆಸಲಾಗುವುದು ಎಂದರು.
ಹೆಸರಿಗೆ ಸೀಮಿತವಾದ ಕಲ್ಯಾಣ ಕರ್ನಾಟಕ: ಅಟ್ಟೂರ
ಕರ್ನಾಟಕ ನವನಿರ್ಮಾಣ ಸೇನೆಯ ಜಿಲ್ಲಾಧ್ಯಕ್ಷ ರವಿ ದೇಗಾಂವ, ಪ್ರಶಾಂತ್ ಮಠಪತಿ, ದಿಲೀಪ್ ಕಿರಸಾಳಗಿ, ಸಂತೋಷ್ ಪಾಟೀಲ್, ಮಾಂತೇಶ್ ಹರವಾಳ, ಋಷಿ ಬೆನಕನಹಳ್ಳಿ, ಕವಿತಾ ದೇಗಾಂವ, ಶ್ರಿಶ್ರೈಲ ಕನ್ನಡಗಿ, ರವಿಂದ್ರ ಜಮಾದಾರ, ಭೀಮಾಶಂಕರ ಕೊರವಿ ಇದ್ದರು.