ಶಹಾಬಾದ: ಆಧುನಿಕ ವಿದ್ಯಾಮಾನದಲ್ಲಿ ಬದಲಾದ ಆಹಾರ ಕ್ರಮ ಹಾಗೂ ಜೀವನ ಶೈಲಿ ಮತ್ತು ದೇಹಕ್ಕೆ ನಿಯಮಿತ ವ್ಯಾಯಾಮವಿಲ್ಲದಿದ್ದಲ್ಲಿ ಹದಿಹರೆಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗುತ್ತದೆ ಎಂದು ಹದಿಹರೆಯದ ಆಪ್ತ ಸಮಾಲೋಚಕ ಅಮರೇಶ ಇಟಗಿ ಹೇಳಿದರು.
ಅವರು ನಗರದ ಮಿನಿರೋಸ್ ಶಾಲೆಯಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಲಬುರಗಿ,ಸಮುದಾಯ ಆರೋಗ್ಯ ಕೇಂದ್ರ ಶಹಾಬಾದ ಮತ್ತು ಮಿನಿರೋಸ ಪ್ರೌಢಶಾಲೆ ಸಂಯುಕ್ತಾಶ್ರಯದಲ್ಲಿ ಹದಿಹರೆಯ ಆರೋಗ್ಯ ಮತ್ತು ಕ್ಷೇಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಹಿಳಾ ದೌರ್ಜನ್ಯ ತಡೆಗಟ್ಟಲು ಪಿಎಸ್‌ಐ ಯಶೋಧಾ ಕರೆ
ತಾರುಣ್ಯ ಎಂಬುದು ವಿದ್ಯಾರ್ಥಿನಿಯರಲ್ಲಿ ಉಲ್ಲಾಸವೆನಿಸುವ ಘಳಿಗೆಯಾಗಿದೆ.ಈ ತಾರುಣ್ಯ ಹಂತದಲ್ಲಿ ದೇಹದಲ್ಲಿರುವ ಹಾರ್ಮೋನುಗಳಿಂದ ವಿದ್ಯಾರ್ಥಿನಿಯರ ಮೇಲೆ ಶಾರೀರಿಕ ಮತ್ತು ಮಾನಸಿಕ ಬದಲಾವಣೆ ನಡೆಯುತ್ತದೆ. ಈ ಸಮಯದಲ್ಲಿ ನಿಯಮಿತ ಆಹಾರ,ವ್ಯಾಯಾಮ ಹಾಗೂ ನಿದ್ರೆ ಇವುಗಳು ವ್ಯಕ್ತಿಯ ಜೀವನದ ಮೂರು ಸ್ತಂಭಗಳು.ಜಂಕ್ ಫುಡ್ ಸೇವಿಸುವುದನ್ನು ಕಡಿಮೆ ಮಾಡಿ ವಿಟಮಿನಯುಕ್ತ ಸೊಪ್ಪು ತರಕಾರಿಗಳನ್ನು ಹೆಚ್ಚೆಚ್ಚು ಸೇವಿಸುವಂತಾಗಬೇಕು ಹೇಳಿದರಲ್ಲದೇ ಹದಿಹರೆಯದ ಆರೋಗ್ಯ ಆಹಾರಶೈಲಿಯ ಬಗ್ಗೆ ಅವರು ವಿದ್ಯಾರ್ಥಿಗಳು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದೆಂಬ ಮಾಹಿತಿಯನ್ನು ವಿವರಿಸಿದರು.
ಶ್ರೀಸಿದ್ಧರಾಮೇಶ್ವರ ಹಿರೇಮಠದ ಶಿಖರ ಕಟ್ಟಡದ ಪ್ರಾರಂಭೋತ್ಸವ
ಕಾರ್ಯಕ್ರಮವನ್ನು ಡಾ ಸಂದ್ಯಾ ಕಾನೇಕರ ಮುಖ್ಯ ದಂತ ಆರೋಗ್ಯ ಅಧಿಕಾರಿಗಳು ಉದ್ಘಾಟಿಸಿದರು. ಮೀನಿರೋಸ ಪ್ರೌಢಶಾಲೆಯ ಅಧ್ಯಕ್ಷ ಶಬ್ಬಿರ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ ಶಂಕರ ರಾಠೋಡ,ಡಾ ದಶರಥ ಜಿಂಗಾಡೆ, ಕ್ಷಯರೋಗದ ಮೇಲ್ವಿಚಾರಕಿ ರಜನಿ ಟೀಲೆ ,ಶಂಕರ ವಾಲಿಕಾರ ಹಾಗೂ ಆರೋಗ್ಯ ಸಹಾಯಕಿ ಶರಣಮ್ಮ ಇದ್ದರು. ಶಾಲೆಯ ಮುಖ್ಯ ಗುರುಗಳಾದ ಪರಶುರಾಮ ಬಿ.ಎಮ್, ಎಲ್ಲಾ ಶಿಕ್ಷಕರು ಹಾಗೂ ಮಕ್ಕಳು ಭಾಗವಹಿಸಿದ್ದರು.