ಫರಹತಾಬಾದ: ತಾಲೂಕಿಮ ಹೊನ್ನಕಿರಣಗಿ ಗ್ರಾಮದ ಶ್ರೀ ಶಿವಯೋಗಪ್ಪ ವಗ್ದರ್ಗಿ ಸರಕಾರಿ ಪ್ರೌಢ ಶಾಲೆಯಲ್ಲಿ ವಿಶ್ವ ಜಲ ದಿನಾಚಾರಣೆ ಅಂಗಿವಾಗ ಸಾಲು ಮರದ ತಿಮ್ಮಕ್ಕ ಇಕೋ ಕ್ಲಬ ನಿಂದ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಎಸ್.ಡಿ.ಎಮ್.ಸಿ ಅಧ್ಯಕ್ಷರು ರಿಂದ ಗ್ರಾಮದಲ್ಲಿ ಪ್ರಭಾತ ಪೇರಿ ಮುಖಾಂತರ ಪರಿಸರ ರಕ್ಷಣೆ ಪ್ರತಿಯೊಬ್ಬ ಕೈ ಜೋಡಿಸಿ, ಮನೆಗೊಂದು ಮರ ಊರಿಗೊಂದು ವನ , ಅಂತರ್ಜಲ ನೀರು ಉಳಿಸಿ, ನೀರಿನ ಹಿತ ಮಿತ ಬಳೆಕೆ ಮಾಡಿ , ಸೆವ್ ದ ವಾಟರ ಎಂದು ಘೊಷಣೆ ಕೂಗುತ್ತ ಜನರಲ್ಲಿ ನೀರಿನ ಮಹತ್ವ ತಿಳಿಸಿದರು.
ಶುದ್ಧ ಕುಡಿಯುವ ನೀರನ್ನು ಶಾಲೆಗೆ ಒದಗಿಸಬೇಕು ಎಂದು ಗ್ರಾಮ ಪಂಚಾಯತಿಗೆ ಮನವಿ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಅಧ್ಯಕ್ಷ ಗುರುಬಸಪ್ಪ ಸಜ್ಜನಶೆಟ್ಟಿ , ಮುಖ್ಯ ಗುರುಗಳಾದ ಬಸಪ್ಪ ಬಿರಾದರ , ಶಿಕ್ಷಕರಾದ ಶಿವಪುತ್ರ ವಿಶ್ವಕರ್ಮ, ಮೊಹಮ್ಮದ್ ಅಫ್ಜಲ, ಮಧುಮತಿ, ಶಹಜಾನ ಬೇಗಂ, ಇನ್ನಿತರರು ಇದ್ದರು .