ಭಗತಸಿಂಗ,ರಾಜಗುರು,ಸುಖದೇವ್ ರವರು ದೇಶ ಭಕ್ತರು: ಸಿದ್ದಾಜೀ ಪಾಟೀಲ

0
24

ಕಲಬುರಗಿ: ಇಂದಿನ ದಿನಗಳಲ್ಲಿ ಡಾಕ್ಟರ್, ಎಂಜಿನಿಯರ್ ಆಗುವುದರ ಜತೆಯಲ್ಲಿ ದೇಶ ಕಾಯುವ ಯೋಧರಾಗುವ ಹೊಣೆಗಾರಿಕೆ ನಿಭಾಯಿಸುವ ನಿಟ್ಟಿನಲ್ಲಿ ನಮ್ಮ ಯುವಕ, ಯುವತಿಯರು ಗಮನ ಹರಿಸಬೇಕು ಎಂದು ಬಿಜೆಪಿ ನಗರಾಧ್ಯಕ್ಷ ಸಿದ್ದಾಜಿ ಪಾಟೀಲ ಸಲಹೆ ನೀಡಿದರು.

ನಗರದ ಗಂಜ್‌ನಲ್ಲಿರುವ ಮಹಾಲಕ್ಷ್ಮಿ ಲೇ ಔಟ್‌ನಲ್ಲಿರುವ ಸಂಗಮ ಶಿಕ್ಷಣ ಸಂಸ್ಥೆಯ ಸಂಗಮ ವಿದ್ಯಾಮಂದಿರನಲ್ಲಿ ಮಂಗಳವಾರ ಸ್ಪೂರ್ತಿ ಯುವಕ ಸಂಘ ಹಮ್ಮಿಕೊಂಡಿದ್ದ  ಬಲಿದಾನ ದಿನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

Contact Your\'s Advertisement; 9902492681

ಕಡ್ಲೆಪ್ಪನವರ ನಿಷ್ಠಿ ವಿರಕ್ತ ಮಠದಲ್ಲಿ ವಿವಿಧ ಗಣ್ಯರಿಗೆ ಸನ್ಮಾನ

ಬ್ರಿಟಿಷರ ಆಳ್ವಿಕೆಯ ವಿರುದ್ಧ ಅಂದಿನ ಯುವಕರು ದನಿ ಎತ್ತಿ ಮನೆಗಳನ್ನು ತೊರೆದು  ಭಾರತ ಮಾತೆಗಾಗಿ ಪ್ರಾಣಗಳನ್ನೇ ಬಲಿದಾನ ಮಾಡಿದರು. ಅಂತಹವರಲ್ಲಿ ಭಗತ್‌ಸಿಂಗ್, ಸುಖದೇವ ಮತ್ತು ರಾಜಗುರು ಅವರು  ಮಾಚ್ 23ರಂದೇ ಗಲ್ಲಿಗೇರಿಸಲ್ಪಟ್ಟಿದ್ದರು. ಅದರ ಅಂಗವಾಗಿ ಇಂದಿನ ದಿನವನ್ನು ಬಲಿದಾನ ದಿನವನ್ನಾಗಿ ರಾಷ್ಟ್ರದಲ್ಲಿ ಆಚರಿಸುವ ಮೂಲಕ  ಯುವಕರಲ್ಲಿ ದೇಶ ಪ್ರೇಮದ ಜ್ವಾಲೆ ಭುಗಿಲೇಳಿಸಲು ಅವರ ತ್ಯಾಗದ, ಬಲಿದಾನದ ಸತ್ಯ ಹೇಳಲಾಗುತ್ತಿದೆ. ಆ ಕೆಲಸ ಇಂದು ಸ್ಪೂರ್ತಿ ಯುವಕ ಸಂಘ ಮಾಡಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪತ್ರಕರ್ತ ಸೂರ್ಯಕಾಂತ ಎಂ.ಜಮಾದಾರ ಮಾತನಾಡಿ, ಇಂದಿನ ಯುವಕರಲ್ಲಿ ದೇಶ ಪ್ರೇಮ ಮತ್ತು ಸಮಕಾಲೀನ ಘಟನೆಗಳಿಗೆ ಸ್ಪಂಧಿಸುವ ಪ್ಯಾಶನ್ ಬೇಕಿದೆ. ಸಿನೆಮಾ ಪ್ಯಾಶನ್‌ಗಿಂದ ಮಾನವೀಯತೆ, ಕರ್ತವ್ಯ ಬದ್ಧತೆ ಮತ್ತು ಶಿಸ್ತಿನ ಪ್ಯಾಶನ್ ಅಳವಡಿಸಿಕೊಂಡಾಗ ಮುಂದಿನ  ಜೀವನ ಮತ್ತು ದೇಶದ  ಭವಿಷ್ಯ ಎರಡೂ ಸದೃಢವಾಗಿರುತ್ತವೆ ಎಂದರು.

ಕಲಬುರಗಿಯಲ್ಲಿ ಮಾ.26 ರಂದು ಕ್ಯಾಂಪಸ್ ಸಂದರ್ಶನ

ಇನ್ನೋರ್ವ ಅತಿಥಿ ಡಿಆರ್‌ಯುಸಿಸಿ ಮಾಜಿ ಸದಸ್ಯ ಪ್ರಲ್ಹಾದ ಎಂ.ಮಟಮಾರಿ ಮಾತನಾಡಿದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸ್ಪೂರ್ತಿ ಯುವಕ ಸಂಘದ ಅಧ್ಯಕ್ಷ ಮಂಜುನಾಥ ನಾಲವಾರಕರ್, ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ತಮ್ಮ ಜೀವವೇ ಬಲಿ ನೀಡಿ ನಮಗೆ ಉತ್ತಮ ಭವಿಷ್ಯ ರೂಪಿಸಿಕೊಟ್ಟಿರುವ ಭಗತ್‌ಸಿಂಗ್, ಸುಖದೇವ ಮತ್ತು ರಾಜಗುರು ಅವರು ಇದೇ ಮಾಚ್ 23ರಂದೇ ಗಲ್ಲಿಗೇರಿಸಲ್ಪಟ್ಟಿದ್ದರು. ಅವರ ಸ್ಮರಣೆ ಹಿನ್ನೆಲೆಯಲ್ಲಿ  ಬಲಿದಾನ ದಿನ ಆಚರಣೆ ಮಾಡುತ್ತಿರುವುದಾಗಿ ಹೇಳಿದರು.

ಸಂಗಮ ಶಿಕ್ಷಣ ಸಂಸ್ಥೆಯ ಜಂಟಿ ಕಾರ್ಯದರ್ಶಿ ಜ್ಯೋತಿ ಬಿ. ಇಮಾದಾಪುರ ಅಧ್ಯಕ್ಷತೆವಹಿಸಿದ್ದರು. ಸೇವಾದಳದ ಚಂದ್ರಕಾಂತ ಜಮಾದಾರ ನಿರೂಪಿಸಿ, ವಂದಿಸಿದರು. ಸುಷ್ಮಾ ಸಂಗಡಿಗರು ಪ್ರಾರ್ಥನೆ ಹಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಆರೋಗ್ಯಕರವಾದ ಹಠ ಇರಬೇಕು. ಕಂಡ ಕನಸು ನನಸು ಮಾಡಿ ಹೆತ್ತವರ ಶ್ರಮ ಗೌರವಿಸಬೇಕು. ಅಂದು ಸ್ವಾತಂತ್ರ್ಯಕ್ಕಾಗಿ ಯುವ ಶಕ್ತಿ ಹೋರಾಟ ಮಾಡಿತ್ತುಘಿ. ಇಂದು ಸಮಸ್ಯೆಗಳ, ದೇಶ ವಿರೋಧಿಗಳ ವಿರುದ್ಧ ಹೋರಾಟ ಮಾಡಬೇಕಾಗಿದೆ. ಅದಕ್ಕಾಗಿ ತ್ಯಾಗ, ಬಲಿದಾನದ ಯಶೋಗಾಥೆ ತಿಳಿಯಬೇಕು. -ಜ್ಯೋತಿ ಬಿ. ಇಮದಾಪುರ ಜಂಟಿ ಕಾರ್ಯದರ್ಶಿ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here