ಆಳಂದ: ತಾಲೂಕಿನ ಹಿತ್ತಲಶಿರೂರ ಗ್ರಾಮದ ಶಾಲೆಯಲ್ಲಿನ ಶೌಚಾಲಯ ಅವ್ಯವಸ್ಥೆ ಆಗರವಾಗಿದೆ. ಶಾಲೆಯಲ್ಲಿ ವಿಧ್ಯಾರ್ಥಿ ಮತ್ತು ವಿಧ್ಯಾರ್ಥಿನಿಯರಿಗೆ ಶೌಚಾಲಯ ನಿರ್ಮಾಣವಾಗಿದೆ. ಆದರೆ ಹಲವು ತಿಂಗಳುಗಳಿಂದ ಇದು ಸಂಪೂರ್ಣವಾಗಿ ಹಾಳಾಗಿದ್ದು, ಶೌಚಾಲಯ ಇದ್ದರೂ ಬಳಕೆಯಾಗುತ್ತಿಲ್ಲ. ಎಲ್ಲ ಬಾಗಿಲು ಮುರಿದು ಬಿದ್ದಿವೆ. ಸ್ವಚ್ಛತೆ ಕೊರತೆಯಿಂದ ಗಲಿಜಾಗಿ ಹೋಗಿದೆ. ಇದರಿಂದ ವಿಧ್ಯಾರ್ಥಿ ಮತ್ತು ವಿಧ್ಯಾರ್ಥಿನಿಯರಿಗೆ ಬಯಲೇ ಗತಿಯಾಗಿದೆ.
ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹ: ಸರ್ಕಾರ ಪ್ರತಿ ಶಾಲೆಗಳ ಶೌಚಾಲಯಕ್ಕೆ ಅನುದಾನ ನೀಡಿ ಸೌಲಭ್ಯ ಒದಗಿಸುತ್ತಿದ್ದರೂ ನಿರುಪಯುಕ್ತವಾಗುತ್ತಿದೆ ಎಂಬುದಕ್ಕೆ ಇಂಥ ಕೆಲ ಶಾಲೆಗಳಲ್ಲಿನ ಅವ್ಯವಸ್ಥೆಯೇ ನಿದರ್ಶನವಾಗಿವೆ. ಮೇಲಧಿಕಾರಿಗಳಾದರೂ ಗಮನ ಹರಿಸಿ ಈ ಶಾಲೆ ಮಕ್ಕಳಿಗೆ ಸಮರ್ಪಕ ಶೌಚಾಲಯ ನಿರ್ಮಾಣಕ್ಕೆ ಮುಂದಾಗಬೇಕೆಂದು ಹಿತ್ತಲಶರೂರ ಗ್ರಾಮದ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರಾದ ಚಂದ್ರಕಾಂತ ಅವಟೆ ಹಾಗೂ ಉಪಾಧ್ಯಕ್ಷರಾದ ಸಂತೋಷ ಪೋ.ಪಾಟೀಲ್ ಆಗ್ರಹಿಸಿದ್ದಾರೆ.