ಜನಪದ ಕಲೆ ಸಂಸ್ಕøತಿಯಿಂದ ನೆಮ್ಮದಿ ಸಾಧ್ಯ

0
126

ಆಳಂದ: ನಮ್ಮ ಜೀವನದಲ್ಲಿ ಬೆಸದು ಕೊಂಡಿರುವ ಜಾನಪದ ಕಲೆ ಮತ್ತು ಸಂಸ್ಕøತಿಗಳು ಸಾಂಸ್ಕøತಿಕ ಬದುಕನ್ನು ಕಟ್ಟಿ ಕೊಡುತ್ತವೆ ಎಂದು ಯುವ ಮುಖಂಡ ಬಾಬು ವಾಲಿ ಹೇಳಿದರು.

ತಾಲೂಕಿನ ನರೋಣಾ ಗ್ರಾಮದ ಜೈ ಹನುಮಾನ ಮಂದಿರದ ಆವರಣದಲ್ಲಿ ಜ್ಞಾನ ಸಾಗರ ಮತ್ತು ಕಲ್ಚರ್ ಅಸೋಸಿಏಶನ್ ಕಲಬುರಗಿ ಇವರ ಆಶ್ರಯದಲ್ಲಿ ಏರ್ಪಡಿಸಿದ ಜಾನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಜನಪದ ನಮ್ಮ ಯುವ ಪೀಳಿಗೆಗೆ ಗೊತ್ತು ಪಡಿಸಿ ಅದರ ಅರಿವು ಮೂಡಿಬೇಕಾಗಿದೆ. ಕಲೆ ಉಳಿದರೆ ಕಲಾವಿದರು ಉಳಿಯುತ್ತಾರೆ. ಆ ನಿಟ್ಟಿನಲ್ಲಿ ಕಲಾವಿದರಿಗೆ ರಾಜ್ಯ ಸರ್ಕಾರ ಪ್ರೋತ್ಸಾಹಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ ಸಾಹಿತಿ ಧರ್ಮಣ್ಣ ಎಚ್ ಧನ್ನಿ ಅವರು, ವಿಜ್ಞಾನ ಮತ್ತು ತಂತ್ರಜ್ಞಾನ ವ್ಯವಸ್ಥೆಯಲ್ಲಿ ನಮ್ಮಲ್ಲಿ ಹಾಸು ಹೊಕ್ಕಾಗಿರುವ ಜನಪದ ಕಲೆಗಳನ್ನು ಉಳಿಸಿ ಬೆಳೆಸಬೇಕಾಗಿದೆ. ನಮ್ಮ ಪ್ರಾಥಮಿಕ ಪಠ್ಯಗಳಲ್ಲಿ ಜನಪದ ಸಾಹಿತ್ಯ ಇರಬೇಕು. ಯಾಂತ್ರಿಕ ಬದುಕಿನಲ್ಲಿ ಜನಪದ ಕಲೆಗಳು ನಶಿಸಿ ಹೋಗುತ್ತಿವೆ ಎಂದು ಕಳವಳ ವ್ಯಕ್ತ ಪಡಿಸಿದರು.

ಸಂಸ್ಥೆ ಕಾರ್ಯದರ್ಶಿ ಪೀರಪ್ಪ ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಜನಿಕಾಂತ ಪಾಟೀಲ, ಲಿಂಗರಾಜ ಬುಕ್ಕಾ, ಬಾಬುರಾವ ಕುಚನ್, ನಿವೃತ್ತ ಶಿಕ್ಷಕ ಗುರುಲಿಂಗಯ್ಯ ಸ್ವಾಮಿ, ಗ್ರಾಪಂ ಸದಸ್ಯ ಸಯ್ಯದ ದಸ್ತಗೀರ್ ಭಾಗವಹಿಸಿದರು.

ನಂತರ ಕಲಾವಿದರಾದ ರಾಜಕುಮಾರ ತಳವಾರ ಅವರಿಂದ ಭಜನೆ, ಮಕ್ತುಮಸಾಬ ಮುಲ್ಲಾ ಅವರ ತಂಡದಿಂದ ಮೋಹರಂ ಪದಗಳು ಹಾಗೂ ಶಂಕರ ಬೆಟ್ಟಜೇವರ್ಗಿ ಅವರಿಂದ ಹಂತಿ ಪದಗಳನ್ನು ಪ್ರಸ್ತುತ ಪಡಿಸಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here