‘ಆಡಾಡತ ಆಯುಷ್ಯ’ ಕಳೆದ ಕಾರ್ನಾಡ್ ರೊಂದಿಗೆ ಚುಟುಕು ಸಂದರ್ಶನ

0
218

ಶಿವರಂಜನ್ ಸತ್ಯಂಪೇಟೆ

ಕನ್ನಡದ ಮಹತ್ವದ ಲೇಖಕ, ನಾಟಕಕಾರ, ಆಡಾಡತ ಆಯುಷ್ಯ ಕಳೆದ, ಕನ್ನಡದ ಉತ್ತಮ ಅಭಿವ್ಯಕ್ತಿಕಾರ ಗಿರೀಶ ಕಾರ್ನಾಡ್  ಇಂದು ನಿಧನ ಹೊಂದಿದ್ದಾರೆ. ಹಿಂದೊಮ್ಮೆ ಅವರು ಕಲಬುರಗಿಗೆ ಬಂದಾಗ ಅವರೊಡನೆ ನಡೆಸಿದ ಚುಟುಕಾದ-ಚುರುಕಾದ ಸಂದರ್ಶನದ ಭಾಗ ಇಲ್ಲಿದೆ.

Contact Your\'s Advertisement; 9902492681

ಕಥೆಗಾರ ಎಂದು ತಾವು ಏಕೆ ಗುರುತಿಸಿಕೊಳ್ಳಲಿಲ್ಲ. ?

ಬರಿಬಹುದು. ಬರೆದಿದ್ದೆನೆ. ನಾಟಕದಲ್ಲಿಯೇ ಹಿಡಿತವಿದೆ.

ಸಾಮಾಜಿಕ ಸಮಸ್ಯೆ ಕುರಿತು ತಾವು ಏಕೆ ಬರೆಯಲಿಲ್ಲ?

ಬೇಜಾರು ಕಂಡರಿ. ಈ ಕುರಿತು ಏಷ್ಟೋ ಜನ ಬರೆದರು ಇನ್ನು ಸಮಸ್ಯೆಗಳಾಗಿಯೇ ಉಳಿದಿವೆ. ಸಮಸ್ಯೆಗಳಿಗಿಂತ ಮುಖ್ಯವಾಗಿ ಬದುಕಿನ ಸಮಸ್ಯೆಗಳು ನನ್ನನ್ನು ಬಲವಾಗಿ ಕಾಡಿವೆ.

ನೀವು ಕವಿತೆಗಳನ್ನು ಬರೆದಿಲ್ಲವೆ?

ನೀರಿನ ಮೇಲೆ ಚಿತ್ರ ಕೆತ್ತಲ್ಲಿಕ್ಕಾಗುವುದಿಲ್ಲ. ಇದು ನನ್ನ ಕವಿತೆಯಲ್ಲವೇ?

ಕಳೆದ ವರ್ಷ ಧಾರವಾಡದಲ್ಲಿ ಜರುಗಿದ ಧಾರವಾಡ ಸಾಹಿತ್ಯ ಸಂಭ್ರಮ ದಲ್ಲಿ ಪಾಲ್ಗೊಂಡಿದ್ದರು. ತಮ್ಮ ಉಸಿರಾಟದ ತೊಂದರೆಯಿಂದಾಗಿ ಮೂಗಿನಲ್ಲಿ ಅದೆಂಥದೋ ನಳಿಕೆ ಹಾಕಿಕೊಂಡು ಕೈಯಲ್ಲೊಂದು ರೇಡಿಯೊ ಥರಹದ ಮಷಿನ್ ಹಿಡಿದುಕೊಂಡು ನಾವು ಇಂತಹ ಸಂದರ್ಭದಲ್ಲೂ ಮತ್ತೆ ಮಾತನಾಡಬೇಕಿದೆ ಎಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ಸಾರಿ ಹೇಳಿದ್ದರು. ಎಂ.ಎ. ಓದುವಾಗ ಪಠ್ಯಪುಸ್ತಕ ವಾಗಿದ್ದ ಅವರ ತಲೆ ದಂಡ  ನಾಟಕವನ್ನು ಓದಿ ವಿಮರ್ಶೆ ಮಾಡಿದ ನೆನಪು ನನಗಿದೆ. ಇದಾದ ಬಳಿಕ  ಅವರ ಆಡಾಡತ ಆಯುಷ್ಯ ಆತ್ಮಕತೆ ಓದಿದ ಮೇಲೆ ಅಗ್ರಹಾರವೊಂದನ್ನು ಸುತ್ತಿ ಬಂದಂತಹ  ಅನುಭವ ಆಗಿತ್ತು ನನಗೆ. ಇದೇನೆ ಇರಲಿ ಅವರೊಬ್ಬ ಅಕ್ಷರವನ್ನು ಬದುಕಾಗಿಸಿಕೊಂಡಿದ್ದ  ಎಂದಿಗೂ ಕ್ಷರವಾಗದ ಕನ್ನಡದ ಮಹತ್ವದ ಲೇಖಕ ಎಂ ಬುದನ್ನು ಯಾರೂ ಅಲ್ಲಗಳೆಯುವಂತಿಲ್ಲ.

ನಟ-ನಿರ್ದೇಶಕನಿಗಿರುವ ವ್ಯತ್ಯಾಸವೇನು?
ಎರಡಕ್ಕೂ ನಿಕಟವಾದ ಸಂಬಂಧವಿದೆ.

ಪಾಶ್ಚಿಮಾತ್ಯ ದೇಶದ ಹಿಂದಿನ ಅನುಭವ, ಇವತ್ತಿನ ಸಂದರ್ಭದಲ್ಲಿ ಹೇಗೆನಿಸುತ್ತದೆ?
ನಮ್ಮ ತಾರುಣ್ಯವನ್ನು ಇನ್ನೊಬ್ಬರ ಮೇಲೆ ಆರೋಪಿಸುವುದು ತಪ್ಪು. ನಮ್ಮ ಅನುಭವಗಳೇ ನಮ್ಮನ್ನು ಬೆಳೆಸುತ್ತವೆ.

ತುಘಲಕ ನಾಟಕದ ತಳಮಳವನ್ನು ನೀವು ಅನುಭವಿಸಲಿಲ್ಲವೇ?

ತಳಮಳ ಅನುಭವಿಸಲಿಲ್ಲ ಎಲ್ಲಾ ಪಾತ್ರಗಳು ನನಗೆ ಮಹತ್ವದ ಪಾತ್ರಗಳು ಅನಿಸಿದವು.

ಗೋಕಾಕ್ ಮತ್ತು ಶಾಸ್ತ್ರೀಯ ಭಾಷಾ ಚಳುವಳಿಯಲ್ಲಿ ತಾವು ಯಾಕೆ ಭಾಗವಹಿಸಲಿಲ್ಲ?
ಆಸಕ್ತಿ ಇತ್ತು. ಆದರೆ ಭಾಗವಹಿಸಲಿಲ್ಲ. ಬರಹಗಾರರಿಗೆ ತಮ್ಮ ವಯಕ್ತಿಕ ಜೀವನವೂ ಇದೆ.

ಸಾಹಿತಿಗಳಿಗೆ ಸಾಮಾಜಿಕ ಬದ್ಧತೆ ಇರಬಾರದೆ?

ಸಾಮಾಜಿಕ ಸಮಸ್ಯೆಗಳ ಜೊತೆಗೆ ಸಾಮಾಜಿಕ ಪರಿಸರವನ್ನು ನೋಡಿಕೊಳ್ಳಬೇಕು. ಅದೇ ರೀತಿಯಾಗಿ ಕುಟುಂಬದ ಪರಿಸರದಲ್ಲಾಗುವ ಬದಲಾವಣೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ಭಾವಾನಾತ್ಮಕ ಸಂದರ್ಭಗಳಲ್ಲಿ ಕೂಡ ನೋಡಿಕೊಳ್ಳಬೇಕಿದೆ.

ಕಂಬಾರರಿಗೆ ಪ್ರಶಸ್ತಿ ಬಂದಾಗ ಅಪಸ್ವರ ಕೇಳಿ ಬಂದವು?

ಇದು ಪ್ರಜಾಪ್ರಭುತ್ವದ ಸಂಕೇತ. ಆರೋಗ್ಯವಂತ ಸಮಾಜದ ಲಕ್ಷಣ.

ಜಾಗತೀಕರಣವನ್ನು ಹೇಗೆ ಅರ್ಥೈಸುವಿರಿ?

ಎಲ್ಲವೂ ಸರಿ ಅನ್ನುವುದು ಮೂರ್ಖತನವಾಗುತ್ತದೆ ಅಧ್ಯಯನ ಮಾಡಬೇಕು. ಪರಿಹಾರ ಕೊಂಡುಕೊಳ್ಳಬೇಕು. ಹಾಗೆ ನೋಡಿದರೆ ನಮ್ಮಲ್ಲಿ ಇನ್ನು ನಗರ ಕೇಂದ್ರಿತ ಸಾಹಿತ್ಯವೇ ಮೂಡಿ ಬಂದಿಲ್ಲ. ಬದಲಾದ ಬೆಂಗಳೂರಿನ ಬಗ್ಗೆ ಬರೆಯಲೇಬೇಕು.

ಯಯಾತಿ ಹುಟ್ಟಿಕೊಂಡ ಸಂದರ್ಭ?

ಜೀವನದ ಅಭದ್ರ ಸ್ಥಿತಿಯಲ್ಲಿ ನನಗೂ ಹೇಳದೆ ಕೇಳದೆ ಹುಟ್ಟಿಕೊಂಡದ್ದು ಯಯಾತಿ ನಾಟಕ. ಕವಿಯಾಗಬೇಕೆಂಬ ಹಂಬಲವುಳ್ಳ ನಾನು ನಾಟಕಕಾರನಾಗಿ ಗುರುತಿಸಿಕೊಂಡದ್ದು ನಿರಾಸೆಯೆನಿಸಿದೆ.
ಹೀಗೆ ಚುಟುಕಾದ ಪ್ರಶ್ನೆಗಳಿಗೆ ಅಷ್ಟೇ ಚೊಕ್ಕಟವಾಗಿ ಉತ್ತರ ಕೊಟ್ಟು ಕಾರ್ಯಕ್ರಮವೊಂದಕ್ಕೆ ತೆರಳಿದರು.

(ಲೇಖಕರ ಮುಖಾಮುಖಿ ಪುಸ್ತಕದಿಂದ ಆಯ್ದ ಸಂದರ್ಶನ)

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here