ಏ.೪ ರಂದು ‘ನನ್ನ ಕವಿತೆ ಹಿಂದಿನ ಕಥನ’ ಕೃತಿ ಜನಾರ್ಪಣೆ

0
93

ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ‘ರಾಷ್ಟ್ರಕೂಟ ಪುಸ್ತಕ ಮನೆ’ ವತಿಯಿಂದ ಪ್ರಕಟಿಸಿರುವ ‘ನನ್ನ ಕವಿತೆಯ ಹಿಂದಿನ ಕಥನ’ ಎಂಬ ವಿಶಿಷ್ಟ ಮತ್ತು ವಿಭಿನ್ನ ಪ್ರಯೋಗದ ಪುಸ್ತಕದ ಲೋಕಾರ್ಪಣೆ ಸಮಾರಂಭವನ್ನು ಏಪ್ರಿಲ್ ೪ ರಂದು ಆಯೋಜಿಸಲಾಗಿದೆ.

ನಗರದ ಕಲಾಮಂಡಳ ಸಭಾಂಗಣದಲ್ಲಿ ಬೆಳಿಗ್ಗೆ ೧೦.೩೦ ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ, ಲೇಖಕ ಮಹಿಪಾಲರೆಡ್ಡಿ ಮುನ್ನೂರ್ ಸಂಪಾದಿಸಿರುವ ಈ ಅಪರೂಪದ ಕೃತಿ ಬಿಡುಗಡೆಗೊಳ್ಳಲಿದೆ.

Contact Your\'s Advertisement; 9902492681

ಮಹಿಳೆಯರ ಸ್ವಾವಲಂಬನೆ ಬದುಕಿಗೆ ಸಂಘಮಿತ್ರ ಸ್ಫೂರ್ತಿ: ಪ್ರಸಾದ್

ಕಲ್ಯಾಣ ಕರ್ನಾಟಕದ ೨೫ ಜನ ಕವಿಗಳು ತಮಗೆ ಕಾಡಿರುವ ಕವಿತೆಯನ್ನು ಮತ್ತು ಆ ಕವಿತೆಯ ಹಿಂದಿನ ಕಥನವನ್ನು ಬರೆದಿದ್ದು, ಇದೊಂದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಮೊದಲ ಪ್ರಯೋಗ ಎನ್ನಲಾಗುತ್ತಿದೆ. ಇಂತಹದ್ದೊಂದು ಪ್ರಯೋಗಾತ್ಮಕ ಪುಸ್ತಕದಲ್ಲಿ ಹಿರಿಯರಾದ ಎ.ಕೆ.ರಾಮೇಶ್ವರ, ಪ್ರೊ. ವಸಂತ ಕುಷ್ಟಗಿ, ಡಾ.ಕಾಶಿನಾಥ ಅಂಬಲಗೆ, ಡಾ.ಬಸವರಾಜ ಸಬರದ, ಡಾ.ಸ್ವಾಮಿರಾವ ಕುಲಕರ್ಣಿ, ಚಂದ್ರಕಾಂತ ಕರದಳ್ಳಿ, ಗವೀಶ ಹಿರೇಮಠ, ಲಿಂಗಾರೆಡ್ಡಿ ಶೇರಿ, ಸಂಧ್ಯಾ ಹೊನಗುಂಟಿಕರ್, ಪಿ.ಎಂ.ಮಣ್ಣೂರ, ಶಂಕರಯ್ಯ ಘಂಟಿ, ಎಸ್.ಪಿ.ಸುಳ್ಳದ್, ಪ್ರಭಾಕರ ಜೋಶಿ, ಸಿದ್ದರಾಮ ಹೊನ್ಕಲ್, ಡಾ.ಎಸ್.ಎಸ್.ಗುಬ್ಬಿ, ಪ್ರೇಮಾ ಹೂಗಾರ, ಗುರುಶಾಂತಯ್ಯ ಭಂಟನೂರು, ಗಿರೀಶ ಜಕಾಪುರೆ, ಮಂಡಲಗಿರಿ ಪ್ರಸನ್ನ, ಪರವೀನ್ ಸುಲ್ತಾನಾ, ಡಾ.ರಾಜಶೇಖರ ಮಾಂಗ್, ಡಿ.ಎಂ.ನದಾಫ್, ಬಾಬು ಜಾಧವ, ಸಾಕ್ಷಿ ಶಿವರಂಜನ್ ಸತ್ಯಂಪೇಟೆ ಮತ್ತು ಮಹಿಪಾಲರೆಡ್ಡಿ ಮುನ್ನೂರ್ ಅವರು ಕವಿತೆಗಳ ಹಿಂದಿನ ಕಥನದ ಜಾಡು ಹಿಡಿದಿದ್ದಾರೆ.

ಮೂರನೇ ಮಹಾಯುದ್ಧಕ್ಕೆ ಮುಹೂರ್ತ ಫಿಕ್ಸೂ..!? ಮ್ಯಾನ್ಮಾರ್ ವಿರುದ್ಧ ಅಮೆರಿಕ ಸಾರಿದ ಯುದ್ಧವೂ.!!?

ಪುಸ್ತಕ ಜನಾರ್ಪಣೆ ಕಾರ್ಯಕ್ರಮವೂ ಸಹ ಹೊಸತನದೊಂದಿಗೆ ಕೂಡಿರಲಿದೆ. ಕವಿತೆ ಹಿಂದಿನ ಕಥನ ಬರೆದಿರುವ ಎಲ್ಲಾ ೨೩ ಜನ ಲೇಖಕರು ವೇದಿಕೆಯಲ್ಲಿ ಪುಸ್ತಕ ಲೋಕಾರ್ಪಣೆ ಮಾಡಲಿದ್ದಾರೆ. ಕೆಲವರು ತಮ್ಮ ಕವಿತೆ ಹಿಂದಿನ ಕಥನ ಮತ್ತು ಕೃತಿ ಕುರಿತು ಕೆಲವೇ ಮಾತುಗಳನ್ನಾಡಲಿದ್ದಾರೆ. ಉದ್ಘಾಟಕರು, ಮುಖ್ಯ ಅತಿಥಿಗಳು, ಪುಸ್ತಕ ಬಿಡುಗಡೆ ಮಾಡುವವರು, ಕೃತಿ ಬಗ್ಗೆ ಮಾತಾಡುವವರು, ಸಮಾರಂಭದ ಅಧ್ಯಕ್ಷತೆ ವಹಿಸುವವರು ಇರುವುದಿಲ್ಲ. ಇದ್ಯಾವುದಿಲ್ಲದೇ, ವಿನೂತನವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಪ್ರಕಾಶನ ಸಂಸ್ಥೆ ತಿಳಿಸಿದೆ.

ವಿಭಿನ್ನ ಆಮಂತ್ರಣ: ರಾಷ್ಟ್ರಕೂಟ ಪುಸ್ತಕ ಮನೆ ಪ್ರಕಟಿಸಿರುವ ‘ನನ್ನ ಕವಿತೆ ಹಿಂದಿನ ಕಥನ’ ಕೃತಿಯ ಆಹ್ವಾನ ಪತ್ರಿಕೆಯು ತುಂಬಾ ವಿಶಿಷ್ಟವಾಗಿ ರೂಪಿಸಲಾಗಿದೆ. ಕೃತಿಯ ಸಂಪಾದಕ ಮಹಿಪಾಲರೆಡ್ಡಿ ಮುನ್ನೂರ್ ಅವರ ಕ್ರಿಯಾಶೀಲತೆಯಲ್ಲಿ ಈ ಆಮಂತ್ರಣ ಮೂಡಿದೆ. ಬಿಡುಗಡೆ ಆಗಿರುವ ಸಂಕಲನದಲ್ಲಿರುವ ಎಲ್ಲಾ ೨೫ ಜನ ಕವಿಗಳ ಫೋಟೋಗಳನ್ನು ಬಳಸಲಾಗಿದೆ. ಕನ್ನಡ ಬರಹಲೋಕದಲ್ಲಿ ವಿಭಿನ್ನ ಪ್ರಯೋಗ, ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕಲಬುರಗಿ ನೆಲದಿಂದ ವಿಶಿಷ್ಟ ಕೊಡುಗೆ ಮತ್ತು ಕಲ್ಯಾಣ ಕರ್ನಾಟಕದ ೨೫ ಜನ ಕವಿಗಳು ತಮಗೆ ಕಾಡಿರುವ ಕವಿತೆಯ ಜಾಡು ಹಿಡಿದು ಹೊರಟ ಕಥನ ಇದು ಎಂಬ ಸಾಲುಗಳೊಂದಿಗೆ ಪ್ರಕಟವಾಗಿರುವ ಈ ಆಮಂತ್ರಣ ತುಂಬ ವಿಶೇಷತೆಯಿಂದ ಕೂಡಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here