ಭಗತ್‌ಸಿಂಗ್ ದೃಷ್ಠಿಯಲ್ಲಿ ಅಶುಚಿತ್ವ ಅಸ್ಪೃಶ್ಯತೆಯಲ್ಲ

0
61

ವಾಡಿ: ಗಲೀಜು ಎತ್ತುವ ಕೆಲಸ ಮಾಡುವುದೇ ಅಸ್ಪೃಶ್ಯತೆಯಾದರೆ, ಮಕ್ಕಳ ಕಕ್ಕಸ ತೊಳೆಯುವ ಪ್ರತಿಯೊಬ್ಬ ತಾಯಿಯೂ ಅಸ್ಪೃಶ್ಯಳಾಗುತ್ತಾಳೆ. ಕೀಳು ಜಾತಿ ಮತ್ತು ಅಸ್ಪೃಶ್ಯತೆ ಎಂಬುದು ಅಮಾನವೀಯ ಅನಾಗರಿಕ ಆಚರಣೆ. ಭಗತ್‌ಸಿಂಗ್ ಇದನ್ನು ಕಟುವಾಗಿ ಟೀಕಿಸಿದ್ದಾರೆ ಎಂದು ಎಸ್‌ಯುಸಿಐ (ಕಮ್ಯುನಿಸ್ಟ್) ಪಕ್ಷದ ಕಾರ್ಯದರ್ಶಿ ಕಾಮ್ರೇಡ್ ವೀರಭದ್ರಪ್ಪ ಆರ್.ಕೆ ಹೇಳಿದರು.

ಎಐಡಿಎಸ್‌ಒ ಹಾಗೂ ಎಐಡಿವೈಒ ಸಂಘಟನೆಗಳ ವತಿಯಿಂದ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಏರ್ಪಡಿಸಲಾಗಿದ್ದ ಶಹೀದ್ ಭಗತ್‌ಸಿಂಗ್ ಅವರ ೯೧ನೇ ಹುತಾತ್ಮ ದಿನಾಚರಣೆಯ ಬಹಿರಂಗ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಅಶುಚಿತ್ವದ ಬದುಕೇ ಬಡವರನ್ನು ಅಸ್ಪೃಶ್ಯರನ್ನಾಗಿ ಪರಿವರ್ತಿಸಿತು. ಎಲ್ಲಾ ಮೇಲ್ಜಾತಿಯ ಬಡವರೂ ಕೂಡಾ ಶುಚಿಯಾಗಿರುವುದಿಲ್ಲ. ಅವರನ್ನೇಕೆ ಕೀಳೆಂದು ಭಾವಿಸುವುದಿಲ್ಲ ಎಂಬುದು ಭಗತ್‌ಸಿಂಗರ ಪ್ರಶ್ನೆಯಾಗಿತ್ತು. ಜಾತಿಯತೆ ಹಾಗೂ ಧರ್ಮಾಂಧತೆ ಜನರನ್ನು ಒಗ್ಗಟ್ಟಾಗಲು ಬಿಡುತ್ತಿಲ್ಲ. ಆಳುವ ವರ್ಗ ಈ ಅಸಮಾನತೆಯನ್ನು ಪೋಷಿಸಿಕೊಂಡು ಹೋಗುತ್ತಿದೆ. ಇದೇ ಕಾರಣಕ್ಕೆ ಕ್ರಾಂತಿಕಾರಿಗಳು ಸ್ವಾತಂತ್ರ್ಯ ಚಳುವಳಿ ಸಂದರ್ಭದಲ್ಲಿ ದೇಶದ ಶೋಷಿತ ದುಡಿಯುವ ಜನರೆಲ್ಲ ಒಂದಾಗಿ ಎಂದು ಕರೆ ಕೊಟ್ಟಿದ್ದಾರೆ ಎಂದು ವಿವರಿಸಿದರು.

Contact Your\'s Advertisement; 9902492681

ನಗರ ಸಭೆಗೆ ಆಯ್ಕೆಯಾದ ಜಗದೇವ ಸುಬೇದಾರಗೆ ಚುನಾವಣಾಧಿಕಾರಿಯಿಂದ ಪ್ರಮಾಣ ಪತ್ರ

ಎಐಡಿಎಸ್‌ಒ ನಗರ ಸಮಿತಿ ಕಾರ್ಯದರ್ಶಿ ವೆಂಕಟೇಶ ದೇವದುರ್ಗ ಮಾತನಾಡಿ, ಅಸಮಾನತೆ, ಭ್ರಷ್ಟಾಚಾರ, ಅನೈತಿಕತೆ, ಮೌಢ್ಯಾಚರಣೆ ಹಾಗೂ ಶೋಷಣೆಯಿಂದ ಕೂಡಿರುವ ವ್ಯವಸ್ಥೆಯನ್ನು ಕೊತ್ತೊಗೆಯಬೇಕು. ಅದುವೇ ನಮ್ಮ ನಿಜವಾದ ಸ್ವಾತಂತ್ರ್ಯ ಎಂದು ಭಗತ್‌ಸಿಂಗ್ ನಂಬಿದ್ದರು. ಜನ ಸಮೂಹದ ಬಂಡಾಯ, ರೈತರು ಮತ್ತು ಕಾರ್ಮಿಕರ ಮುಂದಾಳತ್ವದಲ್ಲಿ ಕ್ರಾಂತಿ ನಡೆದು ಆಡಳಿತವನ್ನು ಶೋಷಕರಿಂದ ಕಸಿದುಕೊಂಡು ಸಮಾಜವಾದಿ ವ್ಯವಸ್ಥೆಯ ನಿರ್ಮಾಣವಾಗಬೇಕು. ದೇಶದ ರಾಜಕೀಯ ವ್ಯವಸ್ಥೆ ಜನ ಚಳುವಳಿಗಳನ್ನು ಹತ್ತಿಡುತ್ತಿದೆ. ಆನಾಭಿಪ್ರಾಯ ಕೇಳದೆ ಜನವಿರೋಧಿ ನೀತಿಗಳು ಜಾರಿಗೆ ತರುವ ಸರ್ವಾಧಿಕಾರಿ ಆಡಳಿತ ಜಾರಿಯಲ್ಲಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೂ ಹೋರಾಟಗರರನ್ನು ಆಂದೋಲನ್ ಜೀವಿ ಎಂದು ಪ್ರಧಾನಿಯೇ ಟೀಕಿಸಿದ್ದಾರೆ. ಇದನ್ನು ಈಗಲೇ ಖಂಡಿಸದಿದ್ದರೆ ಮುಂದಿನ ದಿನಗಳಲ್ಲಿ ಚಳುವಳಿಗೆ ಕರೆ ನೀಡುವುದೇ ಅಪರಾಧ ಎಂಬ ಕಾನೂನು ಜಾರಿಯಾಗುವ ದಿನಗಳು ದೂರವಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಭಗತ್‌ಸಿಂಗ್ ಕರೆ ನೀಡಿದ ಕ್ರಾಂತಿಯನ್ನು ಸಂಘಟಿಸಲು ವಿದ್ಯಾರ್ಥಿ ಯುವಜನರು ಸಜ್ಜಾಗಬೇಕು ಎಂದರು.

ಶಹಾಬಾದ: ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಜಗದೇವ ಸುಬೇದಾರ ಗೆಲುವು

ಎಐಡಿಎಸ್‌ಒ ಮುಖಂಡ ಗೋವಿಂದ ಯಳವಾರ ಪ್ರಾಸ್ತಾವಿಕ ನುಡಿದರು. ದತ್ತಾತ್ರೇಯ ಹುಡೇಕರ ಅಧ್ಯಕ್ಷತೆ ವಹಿಸಿದ್ದರು. ಎಐಡಿಎಸ್‌ಒ ಅಧ್ಯಕ್ಷ ಗೌತಮ ಪರತೂರಕರ, ಶರಣು ಹೇರೂರ, ವಿಠ್ಠಲ ರಾಠೋಡ ಸೇರಿದಂತೆ ದಿನಗೂಲಿ ಕರ್ಮಿಕರು, ವಿದ್ಯಾರ್ಥಿ, ಯುವಕರು ಪಾಲ್ಗೊಂಡಿದ್ದರು. ಸಂಘಟಕರು ಭಗತ್‌ಸಿಂಗ್ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸುವ ಮೂಲಕ ಕ್ರಾಂತಿಕಾರಿ ಘೋಷಣೆಗಳನ್ನು ಕೂಗಿ ಸಾರ್ವಜನಿಕರ ಗಮನ ಸೆಳೆದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here