ಸಿದ್ದಗಂಗಾ ಶ್ರೀಗಳನ್ನು ನಿತ್ಯ ಸ್ಮರಣೆ ಮಾಡಬೇಕು: ಮಂಜುನಾಥ ಜಾಲಹಳ್ಳಿ

0
32

ಸುರಪುರ: ನಡೆದಾಡಿದ ನಿಜ ಜಂಗಮರಾಗಿದ್ದ ತ್ರಿವಿಧ ದಾಸೋಹಿ ಸಿದ್ದಗಂಗಾದ ಶಿವಕುಮಾರ ಸ್ವಾಮೀಜಿಯವರನ್ನು ನಿತ್ಯವು ಸ್ಮರಿಸಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಅಧ್ಯಕ್ಷ ಮಂಜುನಾಥ ಜಾಲಹಳ್ಳಿ ಮಾತನಾಡಿದರು.

ನಗರದ ಬಸವ ಭವನದಲ್ಲಿನ ಅಖಿಲ ಭಾರತ ವೀರಶೈವ ಮಹಾಸಭಾದ ತಾಲೂಕು ಕಚೇರಿಯಲ್ಲಿ ನಡೆದ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳ ೧೧೪ನೇ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಶಿವಕುಮಾರ ಸ್ವಾಮೀಜಿಗಳು ಈ ನಾಡು ಕಂಡ ಮಹಾನ್ ಪೂಜ್ಯರು,ಲಕ್ಷಾಂತರ ಮಕ್ಕಳಿಗೆ ಅನ್ನ ಅರಿವು ಆಶ್ರಯ ಮತ್ತು ಅಕ್ಷರದ ಮೂಲಕ ಬದುಕು ಬೆಳಗಿದ ಶ್ರೀಗಳು,ಶತಾಯುಷಿಗಳಾಗಿ ಲೋಕ ಕಲ್ಯಾಣಕ್ಕಾಗಿ ತಮ್ಮ ಕೊನೆಯ ದಿನದವರೆಗೂ ಜಂಗಮ ಸೇವೆಯನ್ನು ಮಾಡಿದ ಮಹಾಸ್ವಾಮೀಜಿಯವರನ್ನು ನೆನೆದರೆ ಎಲ್ಲರ ಜನ್ಮ ಪಾವನವಾಗಲಿದೆ ಎಂದರು.ಇದೇ ಸಂದರ್ಭದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಶ್ರೀಗಳ ಬದುಕು ಮತ್ತು ಸಾಧನೆ ಕುರಿತು ಮಾತನಾಡಿದರು.

Contact Your\'s Advertisement; 9902492681

ಇದಕ್ಕೂ ಮುನ್ನ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಹಿರಿಯರಾದ ಶಾಂತಪ್ಪ ಬೂದಿಹಾಳ ಶಿವರಾಜಪ್ಪ ಗೋಲಗೇರಿ ಸೋಮಶೇಖರ ಶಹಾಬಾದಿ ಶರಣಪ್ಪ ಕಲಕೇರಿ ಜಯಲಲಿತಾ ಪಾಟೀಲ್ ಬಸವರಾಜ ಬೂದಿಹಾಳ ಸಂಗಣ್ಣ ಎಕ್ಕೆಳ್ಳಿ ಸಿದ್ದನಗೌಡ ಹೆಬ್ಬಾಳ ಜಗದೀಶ ಪಾಟೀಲ್ ರವಿಕುಮಾರ ಹೆಮನೂರ ಪ್ರಕಾಶ ಅಂಗಡಿ ಹೆಮ್ಮಡಗಿ ಹಾಗು ಬಸವೇಶ್ವರ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕಿ ಅನ್ನಪೂರ್ಣ ಸೇರಿದಂತೆ ಅನೇಕ ಜನ ಸಿಬ್ಬಂದಿಗಳಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here