ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ನಾಟಕಗಳ ಪಾತ್ರ ಬಹಳ ಮುಖ್ಯ

0
28

ಕಲಬುರಗಿ: ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಲ್ಲಿ ನಾಟಕಗಳ ಪಾತ್ರ ಬಹಳ ಪ್ರಮುಖವಾಗಿದೆ ಎಂದು ಪತ್ರಕರ್ತ-ಲೇಖಕ ಡಾ. ಶಿವರಂಜನ್ ಸತ್ಯಂಪೇಟೆ ತಿಳಿಸಿದರು.

ನಗರದ ರಂಗಾಯಣ ಆವರಣದಲ್ಲಿ ಕಲಬುರಗಿ ರಂಗಾಯಣ ಆಯೋಜಿಸಿದ್ದ ನಗೆ ಬಣ್ಣ ನಾಟಕೋತ್ಸವದ ಕೊನೆಯ ದಿನವಾದ ಶುಕ್ರವಾರ ಸಂಜೆ ಆಯೋಜಿಸಿದ್ದ “ಹುಚ್ಚರ ಸಂತೆ” ನಾಟಕೋತ್ಸವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಇಂದು ನಮ್ಮ ನಡುವೆ ನಡೆಯುತ್ತಿರುವ ಅತ್ಯಾಚಾರ, ಅನ್ಯಾಯ, ಅನಾಚಾರ, ಭ್ರಷ್ಟಾಚಾರ ಈ ಮುಂತಾದವುಗಳನ್ನು ನೋಡಿದರೆ ನಾವು ಮನುಷ್ಯರೇ? ಎಂಬ ಪ್ರಶ್ನೆ ಕಾಡುತ್ತಿದೆ. ಮನುಷ್ಯರನ್ನು ಮನುಷ್ಯತ್ವವನ್ನು ಹುಡುಕುವ ಪ್ರಯತ್ನ ನಾಟಕ ಪ್ರದರ್ಶನಗಳ ಮೂಲಕ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

Contact Your\'s Advertisement; 9902492681

ಕಲಬುರಗಿಗೆ ಬಿಜೆಪಿ ರಾಜ್ಯ ಅಧ್ಯಕ್ಷ ನಳಿನಕುಮಾರ್ ಕಟೀಲ್: ಅಸ್ಟಗಿ‌ ಸನ್ಮಾನ

ನಾವಿಂದು ಗಮನಾರ್ಹ ಅಭಿವೃದ್ಧಿಯನ್ನು ಸಾಧಿಸಿದ್ದೇವೆ ನಿಜ! ಆದರೆ ನಾವು ಏನಾಗಿದ್ದೇವೆ? ಲೋಕ ನೆಮ್ಮದಿಗೆ ಬದುಕಬೇಕಾದವರೇ ಲೋಕ ವಿನಾಶದಲ್ಲಿ ತೊಡಗಿರುವುದು ಬದುಕಿನ ದುರಂತ. ಕುಸಿದ ಬದುಕಿನ ನೆಲೆ, ಅಸ್ಥಿರತೆಯಿಂದಾಗಿ ಬದುಕು ಇಂದು ಅಯೋಮಯವಾಗಿದೆ. ಗೊಂದಲಗಳಿಂದ ಕೂಡಿದೆ. ಇವುಗಳಿಂದ ಹೊರಬರಲು ಪ್ರದರ್ಶನ ಕಲೆಯಾದ ನಾಟಕ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

ರಾಜ್ಯ ಪ್ರಶಸ್ತಿ ಪುರಸ್ಕøತ ಬಾಬುರಾವ ಕೋಬಾಳ ಉದ್ಘಾಟಿಸಿದರು. ಜ್ಯೂನಿಯರ್ ರಾಜಕುಮಾರ ಖ್ಯಾತಿಯ ಹೇಮಂತ ಮಾಲಗತ್ತಿ ಅತಿಥಿಯಾಗಿದ್ದರು. ರಂಗಾಯಣ ನಿರ್ದೇಶಕ ಪ್ರಭಾಕರ ಜೋಶಿ ಅಧ್ಯಕ್ಷತೆ ವಹಿಸಿದ್ದರು.

ರಂಗಾಯಣ ಆಡಳಿತಾಧಿಕಾರಿ ದತ್ತಪ್ಪ ಸಾಗನೂರ ಸ್ವಾಗತಿಸಿದರು. ನಂತರ ಧಾರವಾಡದ ಟೂರಿಂಗ್ ಟಾಕೀಜ್ ತಂಡ ನಟಸಿದ ಉಮೇಶ ತೇಲಿ ರಚನೆ-ನಿರ್ದೇಸನದ ಹುಚ್ಚರ ಸಂತೆ ನಾಟಕ ಪ್ರದರ್ಶನಗೊಂಡಿತು.ಮರಿಯಮ್ಮ ಪ್ರಾರ್ಥಿಸಿದರು.

ರೈತ ಮುಖಂಡ, ಸಮಾಜ ಸೇವಕ, ಕಾಯಕಯೋಗಿ ಲಿಂ.ಮಲ್ಕಣ್ಣಗೌಡರ ಪುಣ್ಯೆಸ್ಮರಣೆ ದಿನ

ಮಾಜಿ ಶಾಸಕ ಬಿ.ಆರ್. ಪಾಟೀಲ, ಶಂಕ್ರಯ್ಯ ಘಂಟಿ, ಬಸವರಾಜ ಪಾಸ್ವಾನ್, ಶಿವಕುಮಾರ ಸಾವಳಗಿ, ಶ್ರಾವಣಯೋಗಿ ಹಿರೇಮಠ, ಸಂದೀಪ, ವಿಶ್ವರಾಜ್, ಗುರುಬಸಪ್ಪ ಪಾಟೀಲ ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here