ಸುಗ್ಗಿ ಸಂಭ್ರಮ ಕವಿಗೋಷ್ಠಿ ಫಲಿತಾಂಶ ಪ್ರಕಟ

0
48

ಕಲಬುರಗಿ: ಇಂದು ಬೇಸಿಗೆ ಸುಡು ಬಿಸಿಲು ಒಂದೆಡೆಯಾದರೆ ಸುಗ್ಗಿ ಸಂಭ್ರಮದ ಸೊಬಗು ರೈತಾಪಿ ಜನರಲ್ಲಿ ಕಾಣುತ್ತೇವೆ. ಇಂಥ ಅಪರೂಪವಾದ ’ಸುಗ್ಗಿ ಸಂಭ್ರಮ’ ಎಂಬ ಆನ್ ಲೈನ್ ಕವಿಗೋಷ್ಠಿ ಸ್ಪರ್ದೆ ರವಿವಾರ ಆಯೋಜಿಸಲಾಗಿತ್ತು. ಕರ್ನಾಟಕ ರಾಜ್ಯ ಬರಹಗಾರರ ಬಳಗ ಜಿಲ್ಲಾ ಘಟಕದ ಆಶ್ರಯದಲ್ಲಿ ನಡೆದ ಆನ್‌ಲೈನ್ ಕವಿಗೋಷ್ಠಿ ಸ್ಪರ್ದೆಯ ಫಲಿತಾಂಶ ಪ್ರಕಟಿಸಲಾಗಿದೆ.

ಘಟಕದ ಜಿಲ್ಲಾದ್ಯಕ್ಷ ಮಹಾಂತೇಶ ಪಾಟೀಲ ಅವರ ನೇತೃತ್ವದಲ್ಲಿ ’ಸುಗ್ಗಿ ಸಂಭ್ರಮ’ ಎಂಬ ಶಿರ್ಷಿಕೆಯಡಿ ಆಯೋಜಿಸಿದ ಕವಿಗೋಷ್ಠಿಯಲ್ಲಿ ಜಿಲ್ಲೆಯ ಅನೇಕ ಯುವ ಕವಿಗಳು, ಹಿರಿಯರು ಭಾಗವಹಿಸಿದರು. ಇವರಲ್ಲಿ ಅತ್ಯುತ್ತಮ ಮೂರು ಕವನಗಳನ್ನು ಆಯ್ಕೆ ಮಾಡಲಾಗಿದೆ. ಹಾಗೂ ಮೂರು ಮೆಚ್ಚುಗೆ ಕವನಗಳೆಂದು ಆಯ್ಕೆ ಮಾಡಲಾಗಿದೆ.

Contact Your\'s Advertisement; 9902492681

ಶಿಕ್ಷಕ ಧರ್ಮಣ್ಣ ಎಚ್ ಧನ್ನಿ(ಪ್ರಥಮ), ಮಂಜುಶ್ರೀ ಬಿ ಹಾವಣ್ಣನವರು(ದ್ವಿತೀಯ) ಹಾಗೂ ಸಂಗಮ್ಮ ಧರ್ಮುಕರ(ತೃತೀಯ) ಆಯ್ಕೆಯಾದರು.

ಎರಡು ದಿನಗಳ ಅಂತರ್ಜಾಲ ವೆಬಿನಾರ್ ಗೆ ಚಾಲನೆ

ಹಾಗೂ ರವಿಕುಮಾರ ನಂದಗೇರಿ, ಸಿದ್ದಲಿಂಗಯ್ಯ ನಂದಕೋಲ, ನೀಲಮ್ಮ ಸಾಲಿಮಠ ಅವರ ಕವನಗಳು ತೀರ್ಪುಗಾರರ ಮೆಚ್ಚುಗೆ ಪಡೆದಿವೆ. ಉಪನ್ಯಾಸಕ ಡಾ ಅಶೋಕ ಬೇನ್ನೂರ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದ್ದರು. ನಮ್ಮ ಹಳ್ಳಿಗಳಲ್ಲಿ ಸುಗ್ಗಿ ಸಂಭ್ರಮ ನೋಡುವುದು ಒಂದು ಅಪರೂಪದ ಸನ್ನಿವೇಶ.

ಈ ಕುರಿತು ಕವಿಗಳ ದೃಷ್ಠಿಯಲ್ಲಿ ಸುಗ್ಗಿ ಬಗ್ಗೆ ಅಭಿವ್ಯಕ್ತಗೊಂಡ ಕವನಗಳು ಓದುಗರಿಗೆ ಜೀವ ಸಂಸ್ಕೃತಿ ಕಲಿಸಿತು. ಇದರಲ್ಲಿ ಕವಿ ಧರ್ಮಣ್ಣ ಧನ್ನಿ ಅವರ ’ಸುಗ್ಗಿ ನಡೆದೈತಿ ಬಾ ಗೆಳತಿ ಹೊಲದಾಗ, ಹಿಗ್ಗಿಲೇ ರಾಶಿ ಮಾಡೋಣ ಜಗದಾಗ’ ಎಂಬ ಕವನ ಸುಗ್ಗಿ ಮಾಡುವ ಹಬ್ಬದ ವಾತವರಣ ಮತ್ತು ಅದರ ಸಾಂಸ್ಕೃತಿಕ ಬದುಕನ್ನು ಅನಾವರಣಗೊಳಿಸಿದರು.

ನಗರಸಭೆಯ ಉಪಚುನಾವಣೆಯಲ್ಲಿ ಗೆಲುವು: ಶಾಸಕ ಮತ್ತಿಮಡುಗೆ ಸನ್ಮಾನ

ಕವಯತ್ರಿ ಮಂಜುಶ್ರೀ ಅವರ ’ಪಥವ ಬದಲಿಸಿದ ರವಿಯ ನೆನದು’ ಎಂಬ ಕವನ ಸುಗ್ಗಿಯ ವೈಶಿಷ್ಠತೆಯ ಚಿತ್ರಣ ಕಟ್ಟಿ ಕೊಟ್ಟಿದ್ದರು. ಎಲ್ಲಾ ಕವನಗಳು ಅರ್ಥಪೂರ್ಣವಾಗಿದ್ದವು. ಮಹಿಳೆಯರೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ವಿಶೇಷ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here