ಸಾರಿಗೆ ನೌಕರರ ಮುಷ್ಕರ್: ಬಸ್ ಸಂಚಾರವಿಲ್ಲದೇ ಪ್ರಯಾಣಿಕರು ಪರದಾಟ

0
45

ಶಹಾಬಾದ: ಆರನೇ ವೇತನ ಆಯೋಗ ಶಿಫಾರಸ್ಸಿಗೆ ಸಂಬಂಧಿಸಿದಂತೆ ಸರ್ಕಾರ ಹಾಗೂ ಸಾರಿಗೆ ನೌಕರರ ಸಂಘಟನೆಯ ಮಧ್ಯೆ ನಡೆದಿರುವ ಹಗ್ಗಾ-ಜಗ್ಗಾಟಕ್ಕೆ ಪ್ರಯಾಣಿಕರು ಹೈರಾಣುವಾಗುವಂತಾಗಿದೆ.

ಸಾರಿಗೆ ನೌಕರರನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ೬ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ಸರ್ಕಾರ ಖಡಾಖಂಡಿತವಾಗಿ ಹೇಳಿದ ಬೆನ್ನಲ್ಲೇ ಸಾರಿಗೆ ನೌಕರರು ಬುಧವಾರ ಮು?ರ ನಡೆಸಿರುವುದರಿಂದ ಬಸ್ ಸಂಚಾರವಿಲ್ಲದೆ ಜನರು ಪರದಾಡುವಂತಾಗಿದೆ.

Contact Your\'s Advertisement; 9902492681

ಸುರಪುರ ವಕೀಲರಿಗೆ ಕೊರೊನಾ ಲಸಿಕೆ

ಯಾವುದೇ ಖಾಸಗಿ ಬಸ್ ವ್ಯವಸ್ಥೆ ಇಲ್ಲದ ಪರಿಣಾಮ ಜನರಿಗೆ ಸಾಕಷ್ಟು ತೊಂದರೆಯಾಯಿತು.ಖಾಸಗಿ ಕ್ರೂಸರ್ ಓಡಾಟವಿದ್ದರೂ, ಪ್ರಯಾಣಿಕರಿಗೆ ಕುರಿಹಿಂಡಿನಂತೆ ತುಂಬುತ್ತಿರುವುದರಿಂದ ಪ್ರಾಯಾಣಿಕರಿಗೆ ಎಲ್ಲಿಲ್ಲದ ತೊಂದರೆ ಅನುಭವಿಸಬೇಕಾಯಿತು. ಪ್ರಯಾನಿಕರಿಗೆ ಬಸ್ ಇಲ್ಲದ ಪರಿಣಾಮ ಅನಿವಾರ್ಯವಾಗಿ ಹೋಗಲೇಬೇಕಾದ ಪ್ರಸಂಗ ಎದುರಾಯಿತು.ಅಲ್ಲದೇ ಬಹುತೇಖರು ಮಾಸ್ಕ್ ಧರಿಸದೇ ಕುಳಿತಿರುವುದು ಕಂಡು ಬಂದಿತು.

ಮು?ರದ ಪರಿಣಾಮ ನಗರದಲ್ಲಿ ಬಸ್‌ಗಳು ರಸ್ತೆಗಿಳಿಯದ ಕಾರಣ ದಿನನಿತ್ಯ ಕೆಲಸ ಕಾರ್ಯಗಳಿಗೆ ಬಸ್‌ಗಳನ್ನೇ ನೆಚ್ಚಿಕೊಂಡ ಜನ ಬೇರೆ ವ್ಯವಸ್ಥೆ ಹುಡುಕಿಕೊಳ್ಳಲು ಪರದಾಡಿದರು.

ಮಳೆಯಿಂದ ಹಾನಿಗೀಡಾದ ರೈತರಿಗೆ ಪರಿಹಾರ ನೀಡಿ: ಆರ್.ಕೆ.ನಾಯಕ

ಬಸ್ ಸಂಚಾರ ಸ್ಥಗಿತದಿಂದ ನಗರದ ಬಸ್ ನಿಲ್ದಾಣ ಬಿಕೋ ಎನ್ನುತ್ತಿದ್ದು ಮೌನ ಆವರಿಸಿತ್ತು. ಬಸ್ ನಿಲ್ದಾಣವೂ ಖಾಲಿ ಖಾಲಿಯಾಗಿದ್ದು ಬೆಳಗ್ಗೆ ಬೇಗ ಬಂದರೆ ಬಸ್ ಸಿಗಬಹುದೆಂಬ ನಿರೀಕ್ಷೆಯಲ್ಲಿ ಆಗಮಿಸಿದ್ದ ಜನ ನಿರಾಶರಾದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here