‘ಗಿರೀಶ ಕಾರ್ನಾಡರದ್ದು ಬಹುಮುಖ ಪ್ರತಿಭೆ: ಸಿದ್ದರಾಮ ಹೊನಕಲ್

0
58

ಶಹಾಪುರ: ಗಿರೀಶ್ ಕಾರ್ನಾಡ್ ಅವರು ನಟರಾಗಿ, ನಿರ್ದೇಶಕರಾಗಿ, ಸಾಹಿತಿಗಳಾಗಿ, ರಂಗಭೂಮಿ ಕಲಾವಿದರಾಗಿ, ಎಲ್ಲ ಕ್ಷೇತ್ರಗಳಲ್ಲೂ ಕ್ರಿಯಾಶೀಲರಾಗಿ ಕೆಲಸ ಮಾಡಿ ಬಾಳಿ ಬದುಕಿದವರು ಎಂದು ಖ್ಯಾತ ಕಥೆಗಾರರಾದ ಸಿದ್ದರಾಮ ಹೊನ್ಕಲ್ ಅವರು ಹೇಳಿದರು.

ಸಾಹಿತಿ ಸಂಶೋಧಕರಾದ ಡಾ. ಮೊನಪ್ಪ ಶಿರವಾಳ ಮಾತನಾಡಿ ಒಬ್ಬ ಸಾಹಿತಿಯ ಬದುಕು ಮತ್ತು ಬರಹ ಒಂದೇ ನೆಲೆಗಟ್ಟಿನಲ್ಲಿರಬೇಕು ಎಂಬುದನ್ನು ತೋರಿಸಿಕೊಟ್ಟವರು ಗಿರೀಶ್ ಕಾರ್ನಾಡ್ ಅವರು ಎಂದು ಹೇಳಿದರು.

Contact Your\'s Advertisement; 9902492681

ಹಿರಿಯ ಜೀವಿ ಶರಣ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ ಸಿನಿಮಾ ರಂಗದಲ್ಲೂ ಅವರು ಗುರುತಿಸಿಕೊಂಡು ಬಹುಭಾಷಾ ಸಿನಿಮಾಗಳನ್ನು ನಿರ್ದೇಶಿಸಿ ಕಥೆ ಸಂಭಾಷಣೆಯನ್ನು ನೀಡಿದ್ದಾರೆ ಸಂಸ್ಕಾರ ಎಂಬ ಅವರ ಚಲನಚಿತ್ರ ಬಹಳ ಅದ್ಭುತವಾಗಿ ಮೂಡಿ ಬಂದಿದೆ ಎಂದು ಈ ಸಂದರ್ಭದಲ್ಲಿ  ನೆನಪಿಸಿಕೊಂಡರು.

ಕಾರ್ಯಕ್ರಮದ ಪ್ರಾರಂಭದಲ್ಲಿ   ಗಿರೀಶ್ ಕಾರ್ನಾಡ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಒಂದು ನಿಮಿಷಗಳ ಕಾಲ ಮೌನಾಚರಣೆ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೆಗುಂದಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಲಿಂಗಣ್ಣ ಪಡಶೆಟ್ಟಿ, ಮುಖಂಡರಾದ ಬಸನಗೌಡ ಮಾಲಿ ಪಾಟೀಲ್ ಸಗರ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಗುಂಡಣ್ಣ ತುಂಬಿಗಿ,ಬಸವರಾಜ ಅರುಣಿ, ಗುಂಡಪ್ಪ ನಿವೃತ್ತ ಆರ್. ಐ.ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here