ಕಲಬುರಗಿ: ನಗರದ ಹೊರವಲಯಗಳಲ್ಲಿ ಭಾರಿ ವಾಹನಗಳು ಓಡಾಡುತ್ತಿದ್ದು, ಇವುಗಳಿಂದ ರಸ್ತೆ ಹಾಳಾಗುತ್ತಿದೆ. ಹೀಗಾಗಿ ಅಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಬಿಯಿಂಗ್ ಹ್ಯುಮೆನ್ ಸಂಘಟನೆ ಪದಾಧಿಕಾರಿಗಳು ಆರ್‌ಟಿಒ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಆರ್‌ಟಿಒ ನಿಯಮಗಳನ್ನು ಉಲ್ಲಂಘಿಸಿ ಸಾಮರ್ಥ್ಯಕಿಂತ ಹೆಚ್ಚು ಭಾರ ಹೇರಿ ಸಾಗಣೆ ಮಾಡುತ್ತಿವೆ. ಈ ಬಗ್ಗೆ ಉಪ ಸಾರಿಗೆ ಇಲಾಖೆ ಅಧಿಕಾರಿಗಳು ಕಂಡು ಕಾಣದಂತೆ ಜಾಣ ಕುರುಡುತನ ಪ್ರದರ್ಶನ ಮಾಡುತ್ತಿದ್ದಾರೆ. ಹೆಚ್ಚು ಭಾರ ಹೇರಿ ಸಾಗಣೆ ಮಾಡುತ್ತಿರುವುದರಿಂದ ರಸ್ತೆಗಳು ಬೇಗ ಹಾಳಾಗುತ್ತಿವೆ. ನಗರದ ಹೊರ ವಲಯದಲ್ಲಿ ಆರ್‌ಟಿಒ ಅಧಿಕಾರಿಗಳು ಹಣ ವಸೂಲಿ ಮಾಡುತ್ತಿರುವ ಗುಮಾನಿಯೂ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿದೆ ಎಂದು ದೂರಿದ್ದಾರೆ.
ಬೋರ್‌ವೆಲ್ ದುರಸ್ಥಿಗೆ ಪಾಲಿಕೆ ಆಯುಕ್ತರಿಗೆ ಒತ್ತಾಯ
ಕೂಡಲಢ ಈ ಕುರಿತು ಗಮನ ಹರಿಸಿ, ಅಕ್ರಮ ಹಣ ವಸೂಲಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕು. ಮತ್ತು ಸಾಮರ್ಥ್ಯಕಿಂತ ಹೆಚ್ಚು ಭಾರ ಹೊತ್ತು ಸಾಗಣೆ ಮಾಡುವ ವಾಹನಗಳ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಸಂಬಂಧಿಸಿದ ಅಧಿಕಾರಿಗಳು ಒಂದು ವಾರದಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಹಂತ ಹಂತವಾಗಿ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಬಿಯಿಂಗ್ ಹ್ಯುಮೆನ್ ಸಂಘಟನೆ ಅಧ್ಯಕ್ಷ ಸಾದಿಕ್ ಅಲಿ ದೇಶಮುಖ್, ಅಬ್ದುಲ್ ಕರೀಮ, ಸೈಯದ್ ಅಹೆಮದ್, ಮಹಮದ್ ರಫೀಕ್, ಆಸಾದ್, ಇರ್ಶಾದ್ ಇದ್ದರು.