ಗ್ರಾಮ ಪಂಚಾಯಿತಿಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ರವರ 130ನೇ ಜಯಂತಿ

0
31
ಮಾಲೂರು: ಇಂದು ಸಂವಿಧಾನ ಶಿಲ್ಪಿ ಡಾ ಬಿ.ಆರ್.ಅಂಬೇಡ್ಕರ್ ಅವರು ಜನಿಸಿದ ದಿನ. ಅವರು 1891 ಏಪ್ರಿಲ್ 14 ರಂದು ಜನಿಸಿದರು, ಅಲ್ಲದೆ ಸಂವಿಧಾನದ ರಚನೆಯಲ್ಲಿ ಮಹತ್ವದ ಪಾತ್ರವಹಿಸಿದರು. ಇಂದು ದೇಶದೆಲ್ಲೆಡೆ ಬಿ.ಆರ್. ಅಂಬೇಡ್ಕರ್ ರವರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಮಾಲೂರು ತಾಲ್ಲೂಕಿನ ತೊರ‍್ನಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ  ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರ 130ನೇ ಜಯಂತಿಯನ್ನು ಇಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮುನಿಯಪ್ಪರವರು ಮಹಾನಾಯಕ ಬಡವರ ಏಳಿಗೆಗಾಗಿ ಶ್ರಮಿಸಿದ ಅಂಬೇಡ್ಕರ್ ಇವರು ಅಂದಿನ ಸಮಾಜದಲ್ಲಿ ಇದ್ದ ಮೇಲು ಕೀಳು ಎಂಬ ಭಾವನೆಯನ್ನು ಹೋಗಲಾಡಿಸಿ ಎಲ್ಲಾ ಸಮಾನರು ಎಂದು ತಿಳಿಸಿ ಕೊಟ್ಟಿದ್ದಾರೆ. ಇಂದು ಎಲ್ಲಾ ವರ್ಗದವರು ಕೈ ಎತ್ತಿ ಮುಗಿಯುವ ಮಹಾಚೇತನ ಡಾ.ಬಿ.ಆರ್. ಅಂಬೇಡ್ಕರ್ ಅವರ ಆದರ್ಶಗಳು ನಮಗೆ ದಾರಿದೀಪ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಎಚ್.ಜಿ. ಚೌಡರೆಡ್ಡಿ, ಅಧ್ಯಕ್ಷರಾದ ಮುನಿಯಪ್ಪ(ಮುನೆಯ), ಸದಸ್ಯರಾದ ವೆಂಕಟರಮಣಪ್ಪ.ಸಿ.ವಿ, ಬಿಲ್ ಕಲೆಕ್ಟರ್ ಎಂ.ನಾಗರಾಜ, ತಿಮ್ಮರಾಯಪ್ಪ, ಸೊಣ್ಣನಾಯಕನಹಳ್ಳಿ ನಾಗರಾಜಪ್ಪ, ವಿ.ಮುರಳಿ, ಹೆಡಗಿನಬೆಲೆ ಬೆಳ್ಳೂರಪ್ಪ, ಲೋಕೇಶ್, ಸಂತೋಷ್ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here