ಕಲಬುರಗಿ: ಸೇಡಂ ಪಟ್ಟಣದ ಬಸ್ ನಿಲ್ದಾಣದ ಎದುರಿನ ಎರಡು ಲಾಡ್ಜ್ ಗಳಲ್ಲಿ ಹಾಡಹಗಲೇ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಜಾಲವನ್ನು ಬಯಲು ಮಾಡಿ ದಾಳಿ ನಡೆಸಿ ಹಲವರನ್ನು ಬಂಧಿಸುವಲ್ಲಿ ಸೇಡಂ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೊಂಕನಳ್ಳಿ ಗ್ರಾಮದ ಅಮೀನಸಾಬ ಅಲ್ಲಾವುದ್ದೀನ್, ಸ್ಟೇಷನ ತಾಂಡಾ ಚಿತ್ತಾಪೂರ ಚಂದರ ಶಂಕರ ಪವಾರ, ಕಾಶಿನಾಥ ಶಂಕರ ಪವಾರ, ಶಿವಲಿಂಗಪ್ಪ ನಾಗಪ್ಪ ರಂಜೋಳ, ಶರಣಪ್ಪ ಸಾಯಿಬಣ್ಣ ಪೂಜಾರಿ, ರಿಹಾನಾ ಉಸ್ಮಾನಮಿಯಾ, ಬಾಬು ಲಾಜ್ದ ಮಾಲಿಕ ಸೈಯದ್ ಜಿಯಾಮೋಯಿಜೋದ್ದೀನ್ ಸೈಯದ್ ಇಕ್ಬಲೋದ್ದೀನ್ (ಸಹಾರಾ ಲಾಜ್ದ ಮಾಲಿಕ), ಸೈಯದ್ ಖಾಸಿಫೋದ್ದೀನ್ ಸೈಯದ್ ಇಕ್ಬ್ಟಲೋದ್ದೀನ್, ಕಲಬುರಗಿ ಗಾಜಿಪುರ ವಿಶ್ವನಾಥ ವೆಂಕಟಪ್ಪ ಜಮಾದಾರ, ಸಾಬಣ್ಣ ಭೀಮಶಾ ಸುಬಕ್ಕನ್ಹರ, ಮಹ್ಮದ್ ಇಸೂಫ್ ಹುಸೇನ ಮಹ್ಮದ್ ಹುಸೇನ ಇವರ ಮೇಲೆ ದಾಳ ಮಾಡಿ ಆರೋಪಿತರಿಂದ ನಗದು ಹಣ ಮತ್ತು ಕಾಂಡೋಮ ಮತ್ತು ಲಾಜ್ಡಗೆ ಆಳವಡಿಸಿದ ಡಿ.ವಿ.ಆರ್ ಜಪ್ತಿ ಮಾಡಿಕೊಂಡಿದ್ದಾರೆ.
ಸಿಪಿಐ ರಾಜಶೇಖರ ಹಳಗೋದಿ, ಪಿಎಸ್ಐ ನಾನಾಗೌಡ ಮತ್ತು ಅಪರಾಧ ವಿಭಾಗದ ಪಿಎಸ್ಐ ಅಯ್ಯಪ್ಪ ಭೀಮವರಂ ನೇತೃತ್ವದ ತಂಡ ದಾಳಿ ನಡೆಸಿದ್ದಾರೆ. ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಸಾರಾ ಲಾಡ್ಜ್ ಮತ್ತು ಸವೇರಾ ಎರಡೂ ಲಾಡ್ಜ್ ಮಾಲೀಕರ ಒಳಗೊಂಡು 10 ಜನ ಪುರುಷರನ್ನು ಪೊಲೀಸರು ಬಂಧಿಸಿದ್ದು, 8 ಜನ ಮಹಿಳೆಯರಿಗೆ ರಕ್ಷಿಸಿದ್ದಾರೆ.
ವಿಚಾರಣೆ ವೇಳೆ ಬಂಧಿತರು ಕಲಬುರಗಿ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಸೇರಿದವರು ಎಂದು ತಿಳಿದು ಬಂದಿದೆ. ದಾಳಿ ವೇಳೆ ಎರಡೂ ಲಾಡ್ಜ್ಗಳಲ್ಲಿನ ಡಿವಿಆರ್ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದ್ದು, ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ