ಫ್ಲಿಪ್ ಕಾರ್ಟ್ ನಿಂದ ಕ್ಲಿಯರ್ ಟ್ರಿಪ್ ಸ್ವಾಧೀನ

0
27

ಬೆಂಗಳೂರು: ದೇಶೀಯ ಇ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಇಂದು ದೇಶದ ಪ್ರಮುಖ ಆನ್ ಲೈನ್ ಟ್ರಾವೆಲ್ ಟೆಕ್ನಾಲಜಿ ಕಂಪನಿಯಾಗಿರುವ ಕ್ಲಿಯರ್ ಟ್ರಿಪ್ ಅನ್ನು ಸ್ವಾಧೀನಪಡಿಸಿಕೊಳ್ಳುವುದಾಗಿ ಪ್ರಕಟಿಸಿದೆ. ಕ್ಲಿಯರ್ ಟ್ರಿಪ್ ನ ಶೇ.100 ರಷ್ಟು ಷೇರುಗಳನ್ನು ಫ್ಲಿಪ್ ಕಾರ್ಟ್ ಪಡೆದುಕೊಳ್ಳಲಿದೆ. ಈ ಮೂಲಕ ಕಂಪನಿಯು ಇನ್ನಷ್ಟು ಬಂಡವಾಳ ಹೂಡಿಕೆ ಮಾಡುವುದರೊಂದಿಗೆ ತನ್ನ ಡಿಜಿಟಲ್ ಕಾಮರ್ಸ್ ವಿಭಾಗವನ್ನು ಮತ್ತಷ್ಟು ಮೇಲ್ಮಟ್ಟಕ್ಕೆ ಏರಿಸಲಿದೆ ಹಾಗೂ ಗ್ರಾಹಕರಿಗೆ ಉತ್ತಮ ರೀತಿಯ ಸೇವೆಗಳನ್ನು ನೀಡಲಿದೆ.

ಒಪ್ಪಂದದ ಪ್ರಕಾರ ಕ್ಲಿಯರ್ ಟ್ರಿಪ್ ಅನ್ನು ಫ್ಲಿಪ್ ಕಾರ್ಟ್ ಸ್ವಾಧೀನಪಡಿಸಿಕೊಳ್ಳಲಿದೆ ಮತ್ತು ಕ್ಲಿಯರ್ ಟ್ರಿಪ್ ಪ್ರತ್ಯೇಕ ಬ್ರ್ಯಾಂಡ್ ಆಗಿ ಕಾರ್ಯನಿರ್ವಹಣೆ ಮಾಡಲಿದೆ. ಅಲ್ಲದೇ, ಎಲ್ಲಾ ಸಿಬ್ಬಂದಿಯನ್ನು ಹಾಗೆಯೇ ಉಳಿಸಿಕೊಂಡು ಫ್ಲಿಪ್ ಕಾರ್ಟ್ ಜತೆಯಲ್ಲಿ ಸೇರಿಕೊಂಡು ಗ್ರಾಹಕರ ಪ್ರಯಾಣವನ್ನು ಸರಳ ಮತ್ತು ಆರಾಮದಾಯಕವಾಗುವಂತೆ ಮಾಡುವ ನಿಟ್ಟಿನಲ್ಲಿ ತಂತ್ರಜ್ಞಾನ ಪರಿಹಾರಗಳನ್ನು ಕಂಡುಕೊಳ್ಳಲಿದೆ.

Contact Your\'s Advertisement; 9902492681

ಫ್ಲಿಪ್ ಕಾರ್ಟ್ ಗ್ರೂಪ್ ನ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಅವರು ಈ ಸ್ವಾಧೀನದ ಬಗ್ಗೆ ಮಾತನಾಡಿ, “ಡಿಜಿಟಲ್ ಕಾಮರ್ಸ್ ಮೂಲಕ ಗ್ರಾಹಕರ ಅನುಭವವನ್ನು ರೂಪಾಂತರಗೊಳಿಸಲು ಫ್ಲಿಪ್ ಕಾರ್ಟ್ ಗ್ರೂಪ್ ಬದ್ಧವಾಗಿದೆ. ಕ್ಲಿಯರ್ ಟ್ರಿಪ್ ಅನೇಕ ಗ್ರಾಹಕರ ಪ್ರಯಾಣದ ಸಂಗಾತಿಯಾಗಿದೆ ಹಾಗೂ ನಾವು ಬೆಳವಣಿಗೆಯ ಹೊಸ ಕ್ಷೇತ್ರಗಳನ್ನು ವೈವಿಧ್ಯಮಯಗೊಳಿಸುವತ್ತ ಗಮನಹರಿಸಲಿದ್ದೇವೆ. ಕ್ಲಿಯರ್ ಟ್ರಿಪ್ ತಂಡವನ್ನು ಅವರ ಉತ್ತಮವಾದ ಉದ್ಯಮ ಜ್ಞಾನ ಮತ್ತು ತಂತ್ರಜ್ಞಾನ ಸಾಮರ್ಥ್ಯಗಳೊಂದಿಗೆ ಫ್ಲಿಪ್ ಕಾರ್ಟ್ ಸಮೂಹಕ್ಕೆ ಸ್ವಾಗತವನ್ನು ಕೋರುತ್ತೇವೆ. ಈ ಮೂಲಕ ನಾವು ಒಟ್ಟಾಗಿ ಸೇರಿ ಗ್ರಾಹಕರಿಗೆ ಮೌಲ್ಯಯುತವಾದ ಸೇವೆಗಳು ಮತ್ತು ಅನುಭವವಗಳನ್ನು ನೀಡಲಿದ್ದೇವೆ’’ ಎಂದರು.

ಕ್ಲಿಯರ್ ಟ್ರಿಪ್ ನ ಸಿಇಒ ಮತ್ತು ಸಹ-ಸಂಸ್ಥಾಪಕ ಸ್ಟುವರ್ಟ್ ಕ್ರಿಗ್ಟನ್ ಅವರು ಮಾತನಾಡಿ, “ಕ್ಲಿಯರ್ ಟ್ರಿಪ್ ನಮ್ಮ ಗ್ರಾಹಕರಿಗೆ ಪ್ರಯಾಣದ ಅನುಭವವನ್ನು ಸರಳೀಕರಣಗೊಳಿಸಲು ತಂತ್ರಜ್ಞಾನವನ್ನು ಬಂಡವಾಳ ಮಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿದೆ. ಈ ಉತ್ಪನ್ನಚಾಲಿತ ಆದ್ಯತೆಯು ಈ ಕ್ಷೇತ್ರದ ವ್ಯಾಪಕ ಶ್ರೇಣಿಯ ಮಾರುಕಟ್ಟೆಗಳಲ್ಲಿ ಗ್ರಾಹಕರಿಗೆ ಆಯ್ಕೆಯ ಆದ್ಯತೆಯ ಪ್ರಯಾಣದ ಪಾಲುದಾರರಾಗಲು ನಮಗೆ ಸಹಾಯ ಮಾಡುತ್ತಿದೆ. ನಾವು ಫ್ಲಿಪ್ ಕಾರ್ಟ್ ಕುಟುಂಬಕ್ಕೆ ಸೇರಿಕೊಳ್ಳಲು ನಮಗೆ ಸಂತಸವೆನಿಸುತ್ತಿದೆ. ಈ ಸಹಯೋಗವು ನಮ್ಮ ಗ್ರಾಹಕರಿಗೆ ಮತ್ತು ಸಾಮಾನ್ಯವಾಗಿ ಪ್ರವಾಸೋದ್ಯಮಕ್ಕೆ ಉಂಟು ಮಾಡುವ ಸಕಾರಾತ್ಮಕ ಪರಿಣಾಮದ ಬಗ್ಗೆ ಉತ್ಸುಕರಾಗಿದ್ದಾರೆ’’ ಎಂದು ತಿಳಿಸಿದರು.

ಈ ಒಪ್ಪಂದವು ಎಲ್ಲಾ ನಿಯಂತ್ರಕ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here