ಚಿಂಚೋಳಿಯಲ್ಲಿ ಬಿಜೆಪಿ ಅಭಿನಂದನಾ ಕಾರ್ಯಕ್ರಮ

0
122

ಚಿಂಚೋಳಿ: ನಮ್ಮ ಪಕ್ಷ ಹಾಗೂ ನರೇಂದ್ರ ಮೋದಿಯವರ ಮೇಲೆ ನಂಬಿಕೆ ಇಟ್ಟು ಸತತ ಎರಡನೇ ಬಾರಿಗೆ ಬಿಜೆಪಿ ಪಕ್ಷಕ್ಕೆ ಅಧಿಕಾರಕ್ಕೆ ತಂದ ಎಲ್ಲಾ ಬಿಜೆಪಿ ಕಾರ್ಯಕರ್ತರಿಗೂ, ಪಕ್ಷದ ಹಿತೈಶಿಗಳಿಗೂ ಅಭಿನಂದನೆ ಎಂದು ಬೀದರ ಸಂಸದ ಭಗವಂತ ಖುಭಾ ಹೇಳಿದರು.

ಪಟ್ಟಣದ ಗಂಗಮ್ಮ ಭೀಮಶೆಟ್ಟಿ ಪಾಟೀಲ ಕಲ್ಯಾಣ ಮಂಟಪದಲ್ಲಿ ಸೋಮುವಾರದಂದು ಬಿಜೆಪಿ ಚಿಂಚೋಳಿ ಮಂಟಲ ವತಿಯಿಂದ ಜರುಗಿದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪ್ರಥಮ ಬಾರಿಗೆ ನರೇಂದ್ರ ಮೋದಿಯವರಿಗೆ ದೇಶದ ಪ್ರಧಾನಿಯನ್ನಾಗಿ ಮಾಡಿದ ತಮ್ಮ ರಕ್ಷಣಗೆ ಮುಂದಾಗ ಮೋದಿಯವರಿಗೆ ಮತ್ತೊಮ್ಮೆ ಬೆಂಬಲಿಸಿ ಎರಡನೇಯ ಬಾರಿಗೆ ಪ್ರಧಾನಿ ಮಾಡಿದ ಎಲ್ಲಾ ಕಾರ್ಯಕರ್ತರ ಬಂಧುಗಳ ಹಾಗೂ ಪ್ರತ್ಯಕ್ಷವಾಗಿ, ಪರೋಕ್ಷವಾಗಿ ನಮ್ಮ ಗೆಲುವಿಗೆ ಶ್ರಮಿಸಿದ್ದ ಎಲ್ಲರಿಗೂ ನಾನು ರುಣಿಯಾಗಿದ್ದು, ತಮಗೆ ಯಾವುದೇ ಸಮಸ್ಯೆ ಕುಂದು ಕೊರತೆ ಇದ್ದಲ್ಲಿ ನೇರವಾಗಿ ನನಗೆ ಸಂಪರ್ಕಿಸಿ ನಿಮ್ಮ ಸೇವೆ ಮಾಡಲು ನಾನು ಸದಾ ಸಿದ್ದನಾಗಿದ್ದೇನೆ ಎಂದು ತಿಳಿಸುವುದರ ಮೂಲಕ ಅಭಿನಂದನೆ ಸಲ್ಲಿಸಿದರು.

Contact Your\'s Advertisement; 9902492681

ಕಲಬುರ್ಗಿ ಸಂಸದ ಡಾ.ಉಮೇಶ ಜಾಧವ ಮಾತನಾಡಿ, ನಾನು ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಾಗ ನನ್ನ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡಿದ ಜನರಿಗೆ ಮತದಾರರು ತಕ್ಕ ಪಾಠ ಕಲಿಸಿ ನ್ಯಾಯ ಎತ್ತು ಹಿಡಿದ್ದಿರಿ ನಿಮಗೆ ಧನ್ಯವಾದ ಎಂದರು. ದೇಶದ ರಕ್ಷಣೆಗಾಗಿ, ದೀನ ದಲಿತರ ಅಭಿವೃದ್ದಿಗಾಗಿ ದೇಶದಲ್ಲಿ ಮತ್ತೊಮ್ಮೆ ಮೋದಿಯವರು ಪ್ರಧಾನಿ ಆಗುವುದು ಅತ್ಯವಶವಾಗಿತ್ತು. ಆದ ಕಾರಣ ನಾನು ಬೇರೆ ಪಕ್ಷ ಬಿಟ್ಟು ಬಿಜೆಪಿ ಸೇರಿದ್ದೇನೆ. ತಾವು ಮತದಾರ ಪ್ರಭುಗಳು ನನಗೆ ಮತ್ತು ನನ್ನ ಮಗನಿಗೆ ಆಶಿರ್ವಾದಿಸಿ ನನ್ನ ಪುತ್ರ ಡಾ.ಅವಿನಾಶ ಜಾಧವಗೆ ಶಾಸಕ ಹಾಗೂ ನನಗೆ ಸಂಸದ ಮಾಡಿದ್ದರಿ ನಾನು ಹಗಲಿರು ನಿಮ್ಮ ಸೇವೆ ಮಾಡುವುದ ಮೂಲಕ ನಿಮ್ಮ ರುಣ ತೀರುಸುತ್ತೇನೆ ಎಂದು ಹೇಳಿದರು.

ಮಾಜಿ ಸಚಿವ ಸುನೀಲ್ ವಲ್ಯಾಪೂರ ಮಾತನಾಡಿ, ಚಿಂಚೋಳಿ ಮತಕ್ಷೇತ್ರದಲ್ಲಿ ಪ್ರಜ್ಙಾವಂತ ಮತದಾರರಿದ್ದಾರೆ ಅವರಿಗೆ ನೋವು ಉಂಟು ಮಾಡದೆ ಅವರ ಸೇವೆ ಮಾಡಬೇಕು ಎಂದು ನೂತನ ಸಂಸದ ಹಾಗೂ ಶಾಸಕರಿಗೆ ಕಿವಿ ಮಾತು ಹೇಳಿದರು. ಚಿಂಚೋಳಿಯಲ್ಲಿ ಬಿಜೆಪಿ ಅಧಿಕಾರದಲ್ಲಿರದಿದ್ದರೂ ೧೫ ವರ್ಷ ಬಿಜೆಪಿ ಕಾರ್ಯಕರ್ತರ ಕುಂದು ಕೊರತೆಗೆ ನಾನು ಶ್ರಮಿಸಿದ್ದೇನೆ. ಇತ್ತಿಚಿಗೆ ಜರುಗಿದ ಉಪ ಚುನಾವಣೆಯಲ್ಲಿ ನಾನು ನನ್ನ ಕ್ಷೇತ್ರ ತಮಗೆ ಬಿಟ್ಟುಕೊಟ್ಟಿದ್ದೇನೆ. ಅಧಿಕಾರದಲ್ಲಿದ್ದ ಶಾಸಕರು, ಸಂಸದರು ಬಿಜೆಪಿ ಕಾರ್ಯಕರ್ತರಿಗೆ ನೋವು ಉಂಟು ಮಾಡದಂತೆ ಆಡಳಿತ ನಡೆಸಬೇಕು ಎಂದು ಮನವಿ ಮಾಡಿದರು.

ಬಿಜೆಪಿ ರಾಜ್ಯ ಕಾರ್ಯದರ್ಶೀ ಎನ್ ರವಿಕುಮಾರ, ಶಾಸಕ ಡಾ.ಅವಿನಾಶ ಜಾಧವ, ಮಾಜಿ ಶಾಸಕ ವಿಶ್ವನಾಥ ಪಾಟೀಲ ಹೆಬ್ಬಾಳ, ಎಮ್‌ಎಲ್‌ಸಿ ಬಿಸಿ ಪಾಟೀಲ, ಮಾಜಿ ಎಮ್ ಎಲ್ ಸಿ ಅಮರನಾಥ ಪಾಟೀಲ, ಶಶೀಲ್ ನಮೋಶಿ, ಮಾಜಿ ಶಾಸಕ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ದೊಡ್ಡಪಗೌಡ ಪಾಟೀಲ ನರಿಬೋಳ, ಮಾಜಿ ಶಾಸಕ ಮಾಲಿಕಯ್ಯ ಗುತ್ತೇದಾರ ಮಾತನಾಡಿದರು.

ಎಂ ಎಸ್ ಐಲ್ ಮಾಜಿ ಅಧ್ಯಕ್ಷ ಡಾ.ವಿಕ್ರಮ ಪಾಟೀಲ, ವಿದ್ಯಾಸಾಗರ ಕುಲಕರ್ಣಿ, ಶಶಿಕಲಾ ಟೆಂಗಳಿ, ಮುಕುಂದ ದೇಶಪಾಂಡೆ, ಬಾಬುರಾವ ಪಾಟೀಲ, ಡಾ.ಸೈಲೇಂದ್ರ ಬೆಲದಾಳೆ, ಲಕ್ಷ್ಮಣ ಅವಂಟಿ, ವಿಷ್ಣುಕಾಂತ ಮೂಲಗಿ, ಗಿರಿರಾಜ ನಾಟಿಕಾರ, ಅಲ್ಲಂಪ್ರಭು ಹುಲಿ, ಜಗದೀಶಸಿಂಗ್ ಠಾಕೂರ, ಪುರಸಭೆ ರಾಜು ಪವಾರ, ತಾಲೂಕಾ ಪಂಚಾಯತ ಸದಸ್ಯ ಪ್ರೇಮಸಿಂಗ್ ಜಾಧವ, ಶ್ರೀನಿವಾಸ ಚಿಂಚೋಳಿ, ಶರಣಗೌಡ ಸುಂಕದ್, ಶಶಿಧರ ಸೂಗೂರ, ಸಂಗಾರೆಡ್ಡಿ ಅನಂತರೆಡ್ಡಿ, ಸುನೀಲ್ ಹಳ್ಳಿ, ಶಿವರಾಜ ಸಿಂದೂಳ, ಅಜೀತ ಪಾಟೀಲ, ಸುನೀಲ್‌ಗೌಳಿ, ಸಂತೋಷ ಗಡಂತಿ, ಶೇಖಭಕ್ತಿಯಾರ ಜಾಗಿರದಾರ, ಶ್ರೀಮಂತ ಕಟ್ಟಿಮನಿ, ರವಿಕಾಂತ ಹೊಸೆಬಾವಿ, ಶ್ರೀಕಾಂತ ಜಾನಕಿ, ಹಣಮಂರ ಕೊರಿ ಸೇರಿದಂತೆ ಮುಂತಾದವರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here