ಕೆಂಭಾವಿ: ಸಮೀಪದ ಬೈಚಬಾಳ ಗ್ರಾಮದಲ್ಲಿ ವಿದ್ಯುತ್ ಕಂಬ ಉರುಳಿ ವಿದ್ಯಾರ್ಥಿಯೋರ್ವ ಸಾವನಪ್ಪಿದ ಘಟನೆ ಇಂದು ರವಿವಾರ ಸಂಜೆ 7 ಗಂಟೆ ಸುಮಾರಿಗೆ ಜರುಗಿದೆ.
ತಿರುಪತಿ ತಂದೆ ಚಂದ್ರಕಾಂತ ಗೊಂಬೆ (14) ಮೃತ ದುರ್ದೈವಿಯಾಗಿರುತ್ತಾನೆ. ಮೃತ ಬಾಲಕ ತಿರುಪತಿ 9 ನೇ ತರಗತಿ ಓದುತಿದ್ದು ಸಂಜೆ 7 ಗಂಟೆ ಸುಮಾರಿಗೆ ಗ್ರಾಮದ ಹೊರವಲದಲ್ಲಿ ಬಹಿರ್ದೆಸೆಗೆ ಕುಳಿತಾದ ವೈಯರ್ ಇಲ್ಲದ ಹಳೆ ವಿದ್ಯುತ್ ಕಂಬ ನೇರವಾಗಿ ಬಾಲಕನ ಮೇಲೆ ಉರುಳಿಬಿದ್ದ ಪರಿಣಾಮ ತಲೆಗೆ ಬಲವಾದ ಪೆಟ್ಟಾಗಿ ಬಾಲಕನನ್ನು ಕೆಂಭಾವಿಯ ಸರಕಾರಿ ಆಸ್ಪತ್ರೆಗೆ ತರುವಾಗ ಮಾರ್ಗ ಮದ್ಯ ಮೃತಪಟ್ಟಿದ್ದು ತಿಳಿದುಬಂದಿದೆ. ಕೆಂಭಾವಿ ಪೋಲಿಸರು ವರದಿ ಪಡೆದುಕೊಂಡಿರುತ್ತಾರೆ.