ಕಲಬುರಗಿ: ಇಲ್ಲಿನ ಗುಲ್ಬರ್ಗ ವಿವಿ ಕ್ರೀಡಾಂಗಣ ಸಮೀಪದ ಬಾಲಕರ ವಸತಿನಿಲಯದ ಎದುರು ಇರುವ ಹುಲ್ಲಿಗೆ
ಯಾರೋ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಪರಿಣಾಮ ಅಲ್ಲಿದ್ದ ಹುಲ್ಲು ಸುಟ್ಟು ಉಳಿದ ಗಿಡಗಳಿಗೆ ಬೆಂಕಿ ತನ್ನ ಕೆನ್ನಾಲಿಗೆ ಚಾಚುತ್ತಲಿತ್ತು.
ಈ ವೇಳೆಯಲ್ಲಿ ವಾಯು ವಿಹಾರಕ್ಕೆ ಹೊರಟಿದ್ದ ಭೀಮಸೇನ ರಾಠೋಡ ಹಾಗೂ ಡಾ. ಶಂಕರ ರಾಠೋಡ ಅವರು ಬೆಂಕಿ ನಂದಿಸಿ ಮುಂದಾಗುವ ಅನಾಹುತ ತಪ್ಪಿಸಿದರು.