ಶಹಾಪುರ : ತಮ್ಮ ಬದುಕನ್ನೇ ರೈತಪರ ಹೋರಾಟಕ್ಕೆ ಮುಡುಪಾಗಿಟ್ಟು,ಕ್ರಾಂತಿಕಾರಿ ರಂಗಗೀತೆಗಳ ಮೂಲಕ ಮೈಲಾರಪ್ಪ ಸಗರ ಅವರು ಮನೆಮಾತಾಗಿದ್ದರು ಎಂದು ಪ್ರಗತಿಪರ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಂಡಿರುವ ರೈತ ಹೋರಾಟಗಾರ ಮೈಲಾರಪ್ಪ ಸಗರ ಹಾಗೂ ಖ್ಯಾತ ನಾಟಕಕಾರರಾದ ಎಲ್.ಬಿ.ಕೆ ಆಲ್ದಾಳ ಅವರ ಭಾವಪೂರ್ಣ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ ಕಡು ಬಡತನದಲ್ಲಿ ಜನಿಸಿ ಅಲ್ಪಸ್ವಲ್ಪ ಶಿಕ್ಷಣ ಪಡೆದು ಅಗಾಧ ಸಾಧನೆಯನ್ನು ಮಾಡಿ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ನುಡಿದರು.
ಕೋವಿಡ್ ನಿರ್ವಹಣೆಗಾಗಿ ರಾಜ್ಯಪಾಲ ವಾಜುಭಾಯಿ ವಾಲಾ ತುರ್ತು ಸಭೆ
ಖ್ಯಾತ ಕತೆಗಾರ ಸಿದ್ಧರಾಮ ಹೊನ್ಕಲ್ ಮಾತನಾಡಿ ನಾಟಕಕಾರ ರಂಗಕರ್ಮಿ ಎಲ್.ಬಿ.ಕೆ.ಆಲ್ದಾಳ ಅವರು ಸಾಹಿತಿಗಳಾಗಿ, ಬರಹಗಾರರಾಗಿ,ಬಹುಮುಖ ಪ್ರತಿಭೆಯಾಗಿದ್ದರು ಇವರು ಕೇವಲ ಏಳನೇ ತರಗತಿ ವ್ಯಾಸಂಗ ಮಾಡಿದ್ದು.೧೨೫ ಕ್ಕೂ ಹೆಚ್ಚು ಕೃತಿಗಳನ್ನು ಈ ನಾಡಿಗೆ ನೀಡಿದ ಕೀರ್ತಿ ಇವರಿಗೆ ಸಲ್ಲುತ್ತದೆ ಅಲ್ಲದೆ ನೂರಾರು ನಾಟಕಗಳಿಗೆ ನಿರ್ದೇಶನ ಮಾಡಿದ್ದಾರೆ ಸ್ವತಃ ನಾಟಕಗಳಲ್ಲಿ ಪಾತ್ರ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಹುಟ್ಟು ಇಸ್ಲಾಮ್ ಧರ್ಮವಾಗಿದ್ದರೂ ಶರಣ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಅಷ್ಟೇ ಬದುಕಲಿ ಸಾರ್ಥಕತೆ ಕಂಡವರು ಎಂದು ಹೇಳಿದರು.
ಗುಬ್ಬಿ ವೀರಣ್ಣ ಪ್ರಶಸ್ತಿ,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,ಹೀಗೆ ಹಲವಾರು ಪ್ರಶಸ್ತಿಗಳು ತಮ್ಮ ಮುಡಿಗೇರಿಸಿಕೊಂಡವರು ಅಲ್ಲದೆ ಕರ್ನಾಟಕ ನಾಟಕ ಅಕಾಡೆಮಿ ಅಧ್ಯಕ್ಷರಾಗಿಯೂ ಕೂಡ ಕಾರ್ಯ ನಿರ್ವಹಿಸಿದ್ದಾರೆ .ಇಷ್ಟೆಲ್ಲಾ ಮಾಡಿದ ಎಲ್.ಬಿ.ಕೆ.ಅಲ್ದಾಳ ಹಾಗೂ ಮೈಲಾರಪ್ಪ ಸಗರ ಅವರನ್ನು ಕಳೆದುಕೊಂಡ ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ದುಃಖ ವ್ಯಕ್ತಪಡಿಸಿದರು.
ಇಸ್ಲಾಂ ಮತ್ತು ಅಂಬೇಡ್ಕರ್ ಬಗೆಗೆ ಸೂಲಿಬೆಲೆ ಸುಳ್ಳುಗಳು
ನೀಲಕಂಠ ಬಡಿಗೇರ ಅವರು ಮೈಲಾರಪ್ಪ ಸಗರ ರಚಿಸಿರುವ ಹಲವಾರು ಜಾನಪದ ಗೀತೆಗಳನ್ನು ಹಾಡಿ ಅವರ ನೆನಪನ್ನು ಮೆಲುಕು ಹಾಕಿದರು ಈ ಸಂದರ್ಭದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಲಿಂಗಣ್ಣ ಆನೇಗುಂದಿ,ಸಾಹಿತಿಗಳಾದ ಶಿವಣ್ಣ ಇಜೇರಿ,ಡಾ. ಎಂ.ಎಸ್.ಶಿರವಾಳ ಗುರುಬಸಯ್ಯ ಗದ್ದುಗೆ,ಲಿಂಗಣ್ಣ ಪಡಶೆಟ್ಟಿ,ಮಡಿವಾಳಪ್ಪ ಪಾಟೀಲ, ಸಣ್ಣ ನಿಂಗಪ್ಪ ನಾಯ್ಕೋಡಿ,ದುರ್ಗಪ್ಪ ನಾಯಕ,ಶರಣಪ್ಪ ಮುಂಡಾಸ, ಪಂಚಾಕ್ಷರಿ ಹಿರೇಮಠ,ಮಾನಪ್ಪ ವಠಾರ,ದೇವಿಂದ್ರಪ್ಪ ಕನ್ಯಕೋಳುರು,ಹೊನ್ನಾರೆಡ್ಡಿ ಬೈರೆಡ್ಡಿ,ಸಾಯಿಬಣ್ಣ ಪುರ್ಲೆ ಹಾಗೂ ಇತರರು ಉಪಸ್ಥಿತರಿದ್ದರು.