ಅಪಘಾತದಲ್ಲಿ ಗಾಯಗೊಂಡ ಮಗುವಿಗೆ ವೆಂಟಿಲೇಟರ್‌ ಸಿಗದೇ ಸಾವು

0
37

ಕಲಬುರಗಿ: ನಗರದ ಐತಿಹಾಸಿಕ ಶರಣಬಸವೇಶ್ವರ ದರ್ಶನಕ್ಕಾಗಿ ಬಳ್ಳಾರಿಯಿಂದ ಕಲಬುರಗಿಗೆ ಬಂದಿದ್ದ ಕುಟುಂಬ ದರ್ಶನ ಮುಗಿಸಿ ಮರಳುವಾಗ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ಆರು ವರ್ಷದ ಬಾಲಕನಿಗೆ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ ಸಿಗದೇ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಬಾಲಕ ಪ್ರಜ್ವಲ್‌ (6) ಮೃತಪಟ್ಟ ಬಾಲಕ. ಜಿಲ್ಲೆಯ ಹೊರವಲಯದ ಕೇಂದ್ರ ಕಾರಾಗೃಹ ಬಳಿ ಬಾಲಕನಿಗೆ ಮೂತ್ರ ವಿಸರ್ಜನೆಗಾಗಿ ವಾಹನ ನಿಲ್ಲಿಸಿದ ವೇಳೆಯಲ್ಲಿ ರಸ್ತೆ ಬದಿ ನಿಂತಿದ್ದ ಬಾಲಕನಿಗೆ ಎದುರಿನಿಂದ ಬಂದ ಕಾರೊಂದು ಡಿಕ್ಕಿ ಹೊಡೆದಿದ್ದರಿಂದ ಬಾಲಕ ಗಂಭೀರವಾಗಿ ಗಾಯಗೊಂಡದ ಎಂದು ತಿಳಿದುಬಂದಿದೆ.

Contact Your\'s Advertisement; 9902492681

ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲು ನಗರಕ್ಕೆ ಆಗಮಿಸಿದ ಕುಟುಂಬಸ್ಥರು, ವೆಂಟಿಲೇಟರ್‌ ಸಿಗದೇ ನಗರದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರು. ಆದರೆ ವೆಂಟಿಲೇಟರ್‌ ಸೌಲಭ್ಯ ದೊರಕಲಿಲ್ಲ. ಚಿಕಿತ್ಸೆ ತೀರಾ ವಿಳಂಬವಾಗಿದ್ದರಿಂದ ಬಾಲಕ ಸಾವನ್ನಪ್ಪಲು ಕಾರಣ ಎಂದು ಪೋಷಕರು ಅಳಲು ತೋಡಿಕೊಂಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here