ಚಿತ್ತಾಪುರ: ಕೊರೋನ್ ಸೋಂಕು ಬರದಂತೆ ತಡೆಗಟ್ಟುವುದು ನಮ್ಮ ಕೈಯಲ್ಲಿದೆ. ನಾವು ಎಚ್ಚರಿಕೆಯಿಂದ ಇದ್ದು ಕೊರೋನ್ ನಿಯಮಗಳನ್ನು ಪಾಲಿಸಿದರೆ ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ ಎಂದು ತಹಸೀಲ್ದಾರ್ ಉಮಾಕಾಂತ್ ಹಳ್ಳೆ ಹೇಳಿದರು.
ಪಟ್ಟಣದ ತರಕಾರಿ ಮಾರುಕಟ್ಟೆಯಲ್ಲಿ ಬ್ಯಾಡ್ಮಿಂಟನ್ ಅಸೋಸಿಯೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಕೊರೋನ್ ಸೋಂಕು ತಡೆಗಟ್ಟಲು ಜನಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿ ಅವರು ಸಭೆ, ಸಮಾರಂಭ, ಕಾರ್ಯಕ್ರಮಗಳಿಗಿಂತ ಬದುಕು ಮತ್ತು ಆರೋಗ್ಯ ಮುಖ್ಯ. ನಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕಿದೆ. ಸದ್ಯದ ಪರಿಸ್ಥಿತಿಯಲ್ಲಿ ಎರಡನೇ ಕೊರೋನ್ ಅಲೆ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ತಾಲೂಕಿನಾದ್ಯಂತ ನಗರ ಪ್ರದೇಶ ಹಾಗೂ ಗ್ರಾಮೀಣ ಪ್ರದೇಶಗಳಲ್ಲೂ ಹರಡುತ್ತಿದೆ. ಇದರಿಂದ ತಪ್ಪಿಸಿಕೊಳ್ಳಲು ಕೊರೋನ್ ಲಸಿಕೆ ಹಾಕಿಸಿಕೊಳ್ಳುವುದು, ಕೊರೋನ್ ನಿಯಮ ಪಾಲನೆ ಮಾಡುವುದೊಂದೇ ಪರಿಹಾರ ಎಂದರು.
ಬೈಕ್ ಕ್ರೂಸರ್ ಡಿಕ್ಕಿ ಸ್ಥಳದಲ್ಲೆ ಸಾವು
ತಾಲೂಕು ವೈದ್ಯಾಧಿಕಾರಿ ಡಾ. ದೀಪಕ್ ಪಾಟೀಲ್ ಮಾತನಾಡಿ ಮಾಸ್ಕ್ ಹಾಕದಿದ್ದರೆ ಪುರಸಭೆ, ಪೊಲೀಸರು ದಂಡ ವಿಧಿಸುತ್ತಾರೆ ಎಂಬ ಭಯದಿಂದ ಮಾಸ್ಕ್ ಹಾಕಬೇಡಿ. ಸೋಂಕು ಹರಡದಂತೆ ತಡೆಗಟ್ಟಲು ನಿಮ್ಮ ಆರೋಗ್ಯಕ್ಕಾಗಿ ಮಾಸ್ಕ್ ಧರಿಸಬೇಕು. ನಾವು ಧರಿಸುವ ಮಾಸ್ಕ್ ಅನ್ನು ಸ್ವಚ್ಛಗೊಳಿಸಿ ಬಳಸಬೇಕು, ಇಲ್ಲವೇ ಮಾಸ್ಕ್ ಬದಲಾಯಿಸಬೇಕು. ಒಂದೆಡೆ ಜಾಸ್ತಿ ಜನರು ಸೇರುವಾಗ ಸಾಮಾಜಿಕ ಅಂತರ ಕಾಪಾಡಿಕೊಂಡು ಕೈಗಳನ್ನು ಆಗ ಆಗ ಸ್ವಚ್ಛಗೊಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ತರಕಾರಿ ಮಾರುಕಟ್ಟೆಯಲ್ಲಿ ಕೊರೋನ್ ಜನಜಾಗೃತಿ ಹಮ್ಮಿಕೊಂಡು ಮಾಸ್ಕ್ ಇಲ್ಲದವರಿಗೆ ಮಾಸ್ಕ್ ವಿತರಣೆ ಮಾಡಲಾಯಿತ್ತು ಹಾಗೂ ಜನ ಸ್ವಯಂ ಪ್ರೇರಿತವಾಗಿ ಕೊರೋನ್ ಪರೀಕ್ಷೆ ಮಾಡಿಸಿಕೊಂಡರು.
ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಮನೋಜ್ ಕುಮಾರ್ ಗುರಿಕಾರ್, ಪಿಎಸ್ಐ ಮಂಜುನಾಥ್ ರೆಡ್ಡಿ, ಗುರುರಾಜ್ ಮುಗಳಿ, ಸುಜ್ಞಾನಿ, ಸುನಂದ, ತಾಲೂಕು ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಸಾಬಣ್ಣ ಕಾಶಿ, ಉಪಾಧ್ಯಕ್ಷ ಸಂತೋಷ್ ಕಲಾಲ್, ಕಾರ್ಯದರ್ಶಿ ಬಾಬು ಕಾಶಿ, ರಾಜು ಬುಳ್ಳ, ಗುರು ಮುತ್ಯ, ಸಾಗರ್ ಜಿತೂರೆ, ಸಚಿನ್ ಕಾಶಿ, ವಿಜಯ್, ರೋಹಿತ್ ಕುಮಾರ್, ಸೇರಿದಂತೆ ಇತರರಿದ್ದರು.