’ನಮಸ್ತೆ ಟ್ರಂಪ್’ ಭಾರತೀಯರನ್ನು ಬೀದಿಪಾಲು ಮಾಡಿದೆ: ಆರ್.ಕೆ.ವೀರಭದ್ರಪ್ಪ

0
39

ವಾಡಿ: ದೇಶದಲ್ಲಿ ಕೊರೊನಾ ಮೊದಲ ಅಲೆ ಆರಂಭವಾದಾಗ ಪ್ರಧಾನಮಂತ್ರಿಗಳು ನಮಸ್ತೆ ಟ್ರಂಪ್ ಎಂಬ ಅದ್ಧೂರಿ ಕಾರ್ಯಕ್ರಮದಲ್ಲಿ ಮಗ್ನರಾಗಿದ್ದರು. ಏಕಾಏಕಿ ಲಾಕ್ಡೌನ್ ಹೇರಿದ್ದರಿಂದ ಭಾರತೀಯ ದುಡಿಯುವ ಜನರು ಅಕ್ಷರಶಃ ಬೀದಿಪಾಲಾದರು. ಲಕ್ಷಗಟ್ಟಲೇ ಗುಳೆ ಕಾರ್ಮಿಕರು ಬೀದಿ ಭಿಕಾರಿಗಳಾದರು. ಇದೆಲ್ಲ ನಿರ್ಧಯಿ ಬಿಜೆಪಿ ಸರಕಾರದ ಕೊಡುಗೆ ಎಂದು ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ) ಕಮ್ಯುನಿಸ್ಟ್ ಪಕ್ಷದ ನಗರ ಸಮಿತಿ ಕಾರ್ಯದರ್ಶಿ ಕಾಮ್ರೇಡ್ ಆರ್.ಕೆ.ವೀರಭದ್ರಪ್ಪ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಕಾಮ್ರೇಡ್ ವೀರಭದ್ರಪ್ಪ, ಕೇಂದ್ರ ಬಿಜೆಪಿ ಸರಕಾರದ ಕೊರೊನಾ ನಿಯಂತ್ರಣ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅದೇ ಪ್ರಧಾನಿ ಈಗ ಎಲ್ಲರಿಗೂ ಉಚಿತ ಲಸಿಕೆ ನೀಡಲಾಗುವುದು ಮತ್ತು ಅದಕ್ಕೆ ಹಣಕಾಸಿನ ಕೊರತೆಯಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ೪೫ ವರ್ಷಕಿಂತ ಕೆಳಗಿನ ದೇಶವಾಸಿಗಳು ಕೋವಿಡ್ ಲಸಿಕೆಯ ದುಬಾರಿ ದರವನ್ನು ಭರಿಸಬೇಕು ಎಂದು ಹೊರಡಿಸಲಾಗಿರುವ ಸರಕಾರದ ಘೋಷಣೆ ಆಘಾತಕಾರಿಯಾಗಿದೆ. ಬಡ ಪ್ರಜೆಗಳನ್ನು ಸರಕಾರವೇ ಸಾಯಲು ಬಿಡುತ್ತಿದೆ ಎಂದು ದೂರಿದ್ದಾರೆ.

Contact Your\'s Advertisement; 9902492681

ಕೋವಿಡ್ ರೋಗಿಗಳಿಗೆ ಚಿಕಿತ್ಸಾ ಸೌಲಭ್ಯ ನೆರವು

೧೮ ವರ್ಷಕಿಂತ ಮೇಲ್ಪಟ್ಟವರೆಲ್ಲರೂ ಲಸಿಕೆಗೆ ಅರ್ಹರು ಎಂದು ಘೋಷಿಸುವ ಜತೆಗೆ ಲಸಿಕೆ ಉತ್ಪಾದನಾ ಸಂಸ್ಥೆ ಸೀರಂ ಇನ್ಸ್‌ಟ್ಯೂಟ್ ಆಫ್ ಇಂಡಿಯಾ, ಪ್ರತಿ ಡೋಸಿನ ಬೆಲೆಯನ್ನು ರಾಜ್ಯ ಸರಕಾರಗಳಿಗೆ ರೂ.೪೦೦ ಮತ್ತು ಮುಕ್ತ ಮಾರುಕಟ್ಟೆಗೆ ರೂ.೬೦೦ ಎಂದು ನಿಗದಿಪಡಿಸಿದೆ. ಮೊದಲ ಅಲೆಯ ನಂತರ ವೈದ್ಯಕೀಯ ಸೌಕರ್ಯಗಳ ಕೊರತೆಯನ್ನು ಸರಿಪಡಿಸಲು ಸರಕಾರದ ಮುಂದೆ ಸಾಕಷ್ಟು ಕಾಲಾವಕಾಶವಿದ್ದರೂ ಏನೂ ಮಾಡಲಿಲ್ಲ. ಮಿಲಿಯಾಂತರ ಬಡವರು ಎರಡು ತುತ್ತಿನ ಊಟಕ್ಕೂ ಒದ್ದಾಡುವ ಭಾರತದಂತಹ ದೇಶದಲ್ಲಿ ಹೀಗೆ ಲಸಿಕೆ ದರ ನೀತಿಯ ಘೋಷಣೆ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

ಕೋವಿಡ್ 19 ರೋಗಿಗಳ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ನೋಂದಾವಣೆ ಮಾಡಲು ಮನವಿ

ಕೊರೊನಾ ಮಹಾಮಾರಿಯಿಂದಾಗಿ ದೇಶದ ಪ್ರಜೆಗಳು ಅದರಲ್ಲೂ ದುಡಿಯುವ ಜನತೆ ಅತ್ಯಂತ ಸಂಕಷ್ಟದಲ್ಲಿದ್ದಾರೆ. ಪ್ರಧಾನಿಗಳೂ ಸೇರಿದಂತೆ ಕೇಂದ್ರ ಸಚಿವರುಗಳು ಪ್ರತಿನಿತ್ಯ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಚುನಾವಣಾ ಪ್ರಚಾರ ಮಾಡಲು ಹೇಗೆ ಸಾಧ್ಯ ಎಂಬುದೇ ಅರ್ಥವಾಗದ ವಿಷಯವಾಗಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಕೈಗೊಳ್ಳಬೇಕಾಗಿದ್ದ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಬಿಟ್ಟು ಸರಕಾರ ಈಗ ಜನರ ಜೀವದ ಕಾಳಜಿ ಪ್ರದರ್ಶಿಸುತ್ತಿದೆ. ನಾಚಿಕೆಯಿಲ್ಲದ ಬೇಜವಾಬ್ದಾರಿ ಪ್ರಧಾನಮಂತ್ರಿ ಜನರನ್ನು ಉಳಿಸುವ ಜವಾಬ್ದಾರಿಯನ್ನು ಈಗ ಜನರ ತಲೆಗೇ ಕಟ್ಟಿದ್ದಾರೆ ಎಂದು ಗಂಭೀರವಾಗಿ ಟೀಕಿಸಿರುವ   ಕಾಮ್ರೇಡ್ ವೀರಭದ್ರಪ್ಪ, ಸಾರ್ವತ್ರಿಕವಾಗಿ ಉಚಿತ ಲಸಿಕೆ ವಿತರಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here