ಸಾಹಿತಿ ಗುರುಸಂಗಪ್ಪ ದೇಸಾಯಿ ನಿಧನ ಕಸಾಪ ಸಂತಾಪ

0
24

ಶಹಾಪುರ : ಶಿಕ್ಷಕ,ಸಾಹಿತಿ ಗುರುಸಂಗಪ್ಪ ದೇಸಾಯಿ (83) ಇಂದು ನಮ್ಮನ್ನಗಲಿದ್ದಾರೆ.ಆಧ್ಯಾತ್ಮಿಕ ಜೀವಿಗಳಾಗಿದ್ದ ಇವರು ದಿಗ್ಗಿ ಸಂಗಮೇಶ್ವರ ಜೀವನ ಚರಿತ್ರೆ ಕುರಿತು ಸಂಶೋಧನೆ ಮಾಡಿಪುಸ್ತಕ ರಚಿಸಿದ್ದಾರೆ.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾಗಿ,ಹಲವು ದಿನಗಳ ಕಾಲ ಗೃಹರಕ್ಷಕದಳದಲ್ಲಿ ಕೂಡ ಕಾರ್ಯ ನಿರ್ವಹಿಸಿದ್ದರು ಕೆಲವು ನಾಟಕಗಳು ರಚಿಸಿದ್ದು ಅಲ್ಲದೆ ಸ್ವತಃ ಅಭಿನಯ ಕೂಡ ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದರು ಲಂಚ,ಹೆಂಡತಿ ಪ್ರಾಣ ಹಿಂಡುತಿ,ಕೋಳೂರು ಕೊಡಗೂಸು,ಗಡಿಬಿಡಿ ಗಂಡ,ಮುಂತಾದ ನಾಟಕಗಳನ್ನು ನಿರ್ದೇಶನ ಮಾಡಿದ್ದರು.ಇವರನ್ನು ಕಳೆದುಕೊಂಡ ಸಾಹಿತ್ಯ ಲೋಕ ಬಡವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿದ್ದಲಿಂಗಣ್ಣ ಆನೆಗುಂದಿ ಹೇಳಿದರು.

Contact Your\'s Advertisement; 9902492681

ಸಂತಾಪ: ಹಿರಿಯ ಸಾಹಿತಿಗಳಾದ ಶಿವಣ್ಣ ಇಜೇರಿ,ಖ್ಯಾತ ಕಥೆಗಾರರಾದ ಸಿದ್ಧರಾಮ ಹೊನಕಲ್, ಗುರುಬಸಯ್ಯ ಗದ್ದುಗೆ,ದೊಡ್ಡಬಸಪ್ಪ ಬಳೂರಗಿ,ಡಾ. ಅಬ್ದುಲ್ ಕರೀಂ ಕನ್ಯಾಕೋಳೂರ,ವಿಶ್ವರಾಧ್ಯ ಸತ್ಯಂಪೇಟೆ,ಡಾ. ಮೋನಪ್ಪ ಶಿರವಾಳ,ಶರಣ ಸಾಹಿತಿ ಲಿಂಗಣ್ಣ ಪಡಶೆಟ್ಟಿ,ಬಸವರಾಜ್ ಜಿ,ಹಿರೇಮಠ ,ಸಣ್ಣ ನಿಂಗಪ್ಪ ನಾಯ್ಕೋಡಿ, ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಬಸವರಾಜ ಸಿನ್ನೂರ ಪಂಚಾಕ್ಷರಿ ಹಿರೇಮಠ ಹಾಗೂ ಇತರರು ಸಂತಾಪ ಸೂಚಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here