ರಸ್ತೆಯ ಮೇಲೆ ವ್ಯಾಪಾರ ಮಾಡಿದರೆ ಕಠಿಣ ಕ್ರಮ: ತಹಸೀಲ್ದಾರ ವರ್ಮಾ

0
135

ಶಹಾಬಾದ: ನಗರದಲ್ಲಿ ಶುಕ್ರವಾರ ತಹಸೀಲ್ದಾರ ಸುರೇಶ ವರ್ಮಾ,ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ, ಆರೋಗ್ಯ ನಿರೀಕ್ಷಕ ಶಿವರಾಜಕುಮಾರ ಅವರ ತಂಡ ಶುಕ್ರವಾರ ನಗರದ ತರಕಾರಿ ಮಾರುಕಟ್ಟೆ ಪ್ರದೇಶಕ್ಕೆ ಬೇಟಿ ನೀಡಿ ರಸ್ತೆಯ ಬಂಡಿ ಇಟ್ಟು ವ್ಯಾಪಾರ ಮಾಡುವುದನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುಕೂಲ ಮಾಡಿದರು.

ತರಕಾರಿ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರಿಗೆ ನೀಡಿದ ಜಾಗದ ಮುಂಭಾಗದ ರಸ್ತೆ ಉದಕ್ಕೂ ಬಂದು ಕಲ್ಲಿನ ಕಟ್ಟೆ ಕಟ್ಟಿ , ಬಂಡಿ ಇಟ್ಟು ವ್ಯಾಪಾರ ಮಾಡುವುದನ್ನು ಕಂಡುಕೆಂಡಾಮಂಡಲರಾದರು. ತಕ್ಷಣವೇ ಎಲ್ಲವನ್ನು ತೆರವುಗೊಳಿಸಲು ನಗರಸಭೆಯ ಸಿಬ್ಬಂದಿಗಳಿಗೆ ಆದೇಶಿಸಿದರು.

Contact Your\'s Advertisement; 9902492681

ನಿಧನ ವಾರ್ತೆ: ಪಾರ್ವತಿಬಾಯಿ ಮೆಡಗುದ್ಲಿ

ಅಲ್ಲದೇ ಇಲ್ಲಿನ ವ್ಯಾಪಾರಸ್ಥರು ರಸ್ತೆಯ ಮೇಲೆ ವ್ಯಾಪಾರ ಮಾಡಿದರೇ ಜನರಿಗೆ ಸಂಚರಿಸಲು ಇಕ್ಕಟ್ಟಾಗುತ್ತದೆ.ಇದರಿಂದ ರೋಗ ಹರಡಲು ಅನುಕೂಲ ಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಇನ್ನು ಮುಂದೆ ರಸ್ತೆಯ ಮೇಲೆ ವ್ಯಾಪಾರ ಮಾಡದೇ ತಮಗೆ ನೀಡಿದ ಜಾಗದಲ್ಲೆ ವ್ಯಾಪಾರ ಮಾಡಬೇಕು.ಅಲ್ಲದೇ ಇಲ್ಲಿನ ವ್ಯಾಪಾರಸ್ಥರು ಮಾಸ್ಕ್ ಧರಿಸುತ್ತಿಲ್ಲ. ಸಾಮಾಜಿಕ ಅಂತರ ಕಾಪಾಡುತ್ತಿಲ್ಲ ಎಂದು ದೂರು ಕೇಳಿ ಬರುತ್ತಿದೆ.ಒಂದು ವೇಳೆ ಕಂಡು ಬಂದರೆ ವ್ಯಾಪಾರವನ್ನು ಇಲ್ಲಿಂದ ಬೇರೆ ಕಡೆ ವರ್ಗಾಯಿಸಲಾಗುತ್ತದೆ. ಅಲ್ಲದೇ ಅಂತಹವರಿಗೆ ದಂಡ ವಿಧಿಸಲಾಗುತ್ತದೆ ಎಚ್ಚರಿಕೆ ನೀಡಿದರು.

ನಗರಸಭೆಯ ಪೌರಾಯಕ್ತ ಡಾ.ಕೆ.ಗುರಲಿಂಗಪ್ಪ ಮಾತನಾಡಿ,ಕೊರನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮಗಳನ್ನು ತಿಳಿಸಿದರಲ್ಲದೇ, ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಅಲ್ಲದೇ ಎಲ್ಲರೂ ತಮ್ಮ ವ್ಯಯಕ್ತಿಕ ಸ್ವಚ್ಛತೆ ಕಡೆಗೆ ಗಮನಕೊಡಿ.ಮಾಸ್ಕ್ ಧರಿಸಿ. ಜನಜಂಗುಳಿ ಇರುವಂಥ ಸ್ಥಳಗಳಲ್ಲಿ ಭಾಗವಹಿಸಬೇಡಿ. ಕಸವನ್ನು ಸಂಗ್ರಹಿಸಿ.ನಂತರ ಪೌರಕಾರ್ಮಿಕರು ಬಂದಾಗ ನೀಡಿ. ಕಸ ಎಲ್ಲೆಂದರಲ್ಲಿ ಎಸೆದರೇ ನಿಮ್ಮ ಅಂಗಡಿ ಲೈಸನ್ಸ್ ರದ್ದು ಮಾಡಲಾಗುವುದು ಎಚ್ಚರಿಕೆ ನೀಡಿದರು.

ಅಂಬೇಡ್ಕರ್ ನಡೆದಾಡಿದ ನೆಲದಲ್ಲಿ ಸರಳ ಜಯಂತಿಗೆ ತೀರ್ಮಾನ

ಈ ಸಂದರ್ಭದಲ್ಲಿ ಪಿಎಸ್‍ಐ ತಿರುಮಲೇಶ, ಕಂದಾಯ ಅಧಿಕಾರಿ ಸುನೀಲಕುಮಾರ ವೀರಶೆಟ್ಟಿ, ಎಎಸ್‍ಐ ಸಾತಲಿಂಗಪ್ಪ, ಪೊಲೀಸ್ ಸಿಬ್ಬಂದಿಗಳಾದ ಹುಸೇನ ಪಾಶಾ,ವಿಶ್ವನಾಥ ಹೂಗಾರ,ಓಬಳೇಶ, ಭೀಮಣ್ಣ, ರಾಜಶೇಖರ, ನಗರಸಭೆಯ ಸಿಬ್ಬಂದಿಗಳಾದ ಹುಣೇಶ, ಅನೀಲ ಸೇರಿಂದತೆ ಅನೇಕರು ಹಾಜರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here