ಅಂಬೇಡ್ಕರ್ ನಡೆದಾಡಿದ ನೆಲದಲ್ಲಿ ಸರಳ ಜಯಂತಿಗೆ ತೀರ್ಮಾನ

0
35

ವಾಡಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಭೇಟಿ ನೀಡಿರುವ ವಾಡಿ ಪಟ್ಟಣದಲ್ಲಿ ಈ ವರ್ಷ ಅದ್ಧೂರಿ ಜಯಂತಿ ಕೈಬಿಟ್ಟು ಸರಳವಾಗಿ ಆಚರಿಸಲಾಗುತ್ತಿದೆ ಎಂದು ಬೌದ್ಧ ಸಮಾಜದ ಅಧ್ಯಕ್ಷ ಟೋಪಣ್ಣ ಕೋಮಟೆ ಹೇಳಿದರು.

ಪಟ್ಟಣದ ಅಂಬೇಡ್ಕರ್ ಕಾಲೋನಿ ಭವನದಲ್ಲಿ ಶುಕ್ರವಾರ ಕರೆಯಲಾಗಿದ್ದ ಬೌದ್ಧ ಸಮಾಜದ ಪದಾಧಿಕಾರಿಗಳ ತುರ್ತು ಸಭೆಯಲ್ಲಿ ಈ ನಿರ್ಣಯ ಕೈಗೊಂಡು ಅವರು ಮಾತನಾಡಿದರು. ಅಂಬೇಡ್ಕರರು ತಮ್ಮ ಜೀವಿತವದಿಯಲ್ಲಿ ಒಮ್ಮೆ ಏ.೨೭ ಮತ್ತು ಮತ್ತೊಮ್ಮೆ ಏ.೨೮ ರಂದು ಹೈದಾರಾಬಾದಿಗೆ ಹೋಗುತ್ತಿದ್ದ ವೇಳೆ ವಾಡಿ ನಗರಕ್ಕೆ ಪ್ರವೇಶ ನೀಡಿರುವ ಇತಿಹಾಸವಿದ್ದು, ಬೌದ್ಧ ಸಮಾಜ ಕಳೆದ ಏಳು ದಶಕಗಳಿಂದ ಅದೇ ದಿನಾಂಕಗಳಂದೇ ಜಯಂತಿ ಆಚರಿಸಿಕೊಂಡು ಬರಲಾಗುತ್ತಿದೆ.

Contact Your\'s Advertisement; 9902492681

ಕಾನ್ಸ್ಟೇಬಲ್ ನೇಮಕಾತಿ ಪ್ರಕ್ರಿಯೆ ನಡೆಸಲು ಆಗ್ರಹ

ಆದರೆ ಈ ವರ್ಷ ಜಿಲ್ಲೆಯಲ್ಲಿ ಕ್ರೂರಿ ಕೊರೊನಾ ರೋಗದ ಅಟ್ಟಹಾಸ ಎಲ್ಲೆಮೀರಿದೆ. ಜನರು ಆಕ್ಸಿಜನ್ ಸಿಗದೆ ಸಾಯುತ್ತಿದ್ದಾರೆ. ಬೆಡ್‌ಗಳಿಗಾಗಿ ಪರದಾಡುತ್ತಿದ್ದಾರೆ. ಸರಕಾರ ಕೋವಿಡ್ ಹೊಸ ಕಠಿಣ ನೀತಿಗಳನ್ನು ಜಾರಿಗೆ ತಂದಿದೆ. ೧೪೪ ಸೆಕ್ಷೆನ್ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರರ ಅದ್ಧೂರಿ ಜಯಂತಿ ಆಚರಣೆ ಅಸಾಧ್ಯವಿದೆ ಎಂದರು.

ಬಾಬಾಸಾಹೇಬರು ಬಂದು ಹೋದ ದಿನವನ್ನು ಮತ್ತು ಅವರ ಜೀವಿತಾವದಿಯಿಂದ ವಾಡಿ ನಗರದಲ್ಲಿ ಆಚರಿಸಿಕೊಂಡು ಬರುತ್ತಿರುವ ಜಯಂತಿಯ ಇತಿಹಾಸವನ್ನು ಪುಸ್ತಕ ರೂಪದಲ್ಲಿ ದಾಖಲಿಸಲು ಬೌದ್ಧ ಸಮಾಜ ಕಳೆದ ವರ್ಷವೇ ಸ್ಮರಣ ಸಂಚಿಕೆ ಪ್ರಕಟಿಸಲು ಚಿಂತಿಸಿತ್ತು. ಆ ಕಾರ್ಯ ಪ್ರಗತಿಯಲ್ಲಿದೆ. ನಾಡಿನ ಅನೇಕ ಹೆಸರಾಂತ ಲೇಖಕರು ಅಂಬೇಡ್ಕರ್ ಕುರಿತು ಬರೆದ ಲೇಖನಗಳನ್ನು ಕಳಿಸಿದ್ದಾರೆ. ಪುಸ್ತಕದ ಕರಡು ಪ್ರತಿಯೂ ಸಿದ್ಧಗೊಂಡಿದೆ. ಮುದ್ರಣವೊಂದೇ ಬಾಕಿ ಉಳಿದಿದೆ.

ಉದ್ಯೋಗ ಖಾತ್ರಿಯಲ್ಲಿ ಉತ್ತಮ ಸಾಧನೆ ಮಾಡಿದ ಪಿಡಿಓ ರಾಜಕುಮಾರಗೆ ಸನ್ಮಾನ

ಈ ವರ್ಷ ೧೩೦ನೇ ಜಯಂತಿಯನ್ನು ಸರಕಾರದ ನೀತಿ ನೀಯಮಗಳನುಸಾರ ಏ.೨೭ ಹಾಗೂ ೨೮ ರಂದು ಏರಡು ದಿನ ಸೀಮಿತಿ ಮುಖಂಡರ ಉಪಸ್ಥಿತಿಯಲ್ಲಿ ಬಾಬಾಸಾಹೇಬರಿಗೆ ಪುಷ್ಪಮಾಲೆ ಅರ್ಪಿಸುವ ಮೂಲಕ ಗೌರವ ಸಲ್ಲಿಸಲಾಗುವುದು. ಮುಂದಿನ ವರ್ಷದ ೧೩೧ ಜಯಂತಿಯನ್ನು ಹಬ್ಬದಂತೆ ಅದ್ಧೂರಿಯಾಗಿ ಆಚರಿಸುವ ಜತೆಗೆ ಸ್ಮರಣ ಸಂಚಿಕೆಯೂ ಬಿಡುಗಡೆ ಮಾಡಲಾಗುವುದು. ಬೌದ್ಧ ಸಮಾಜದ ಬಂಧುಗಳು ಮತ್ತು ವಿವಿಧ ತರುಣ ಸಂಘಗಳ ಪದಾಧಿಕಾರಿಗಳು, ಬೌದ್ಧ ಸಮಾಜದ ಈ ತೀರ್ಮಾನವನ್ನು ಸ್ವೀಕರಿಸಿ ಸಹಕಾರ ನೀಡಬೇಕು ಎಂದು ಹೇಳಿದರು.

ಬೌದ್ಧ ಸಮಾಜದ ಉಪಾಧ್ಯಕ್ಷ ಮಲ್ಲೇಶಪ್ಪ ಚುಕ್ಕೇರ, ಕಾರ್ಯಾಧ್ಯಕ್ಷ ಇಂದ್ರಜೀತ ಸಿಂಗೆ, ಖಜಾಂಚಿ ಚಂದ್ರಸೇನ ಮೇನಗಾರ, ಸಹ ಕಾರ್ಯದರ್ಶಿ ಶರಣಬಸು ಸಿರೂರಕರ, ಸೂರ್ಯಕಾಂತ ರದ್ದೇವಾಡಿ, ಮಲ್ಲಿಕಾರ್ಜುನ ಕಟ್ಟಿ, ಸತೀಶ ಭಟ್ಟರ್ಕಿ, ಶರಣು ನಾಟೀಕಾರ, ರಮೇಶ ಬಡಿಗೇರ, ವಿಜಯಕುಮಾರ ಸಿಂಗೆ, ಸಂದೀಪ ಕಟ್ಟಿ, ರಂಜೀತ ಕಾನಳ್ಳಿ, ನಾಗರಾಜ ವಿ.ಬನಸೋಡೆ, ವಿಕ್ರಮ ನಿಂಬರ್ಗಾ, ಖೇಮಲಿಂಗ ಬೆಳಮಗಿ, ರಾಹುಲ ಮೇನಗಾರ, ಉದಯಕುಮಾರ ಯಾದಗಿರಿ, ಕಿಶೋರಕುಮಾರ ಸಿಂಗೆ, ಸಂದೀಪ ಚಿತ್ತಾರೆ ಪಾಲ್ಗೊಂಡಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here