ಕಲಬುರಗಿ: ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನಕೇಂದ್ರಇವರ ಸಂಯುಕ್ತಆಶ್ರಯದಲ್ಲಿ ಕಲಬುರಗಿಜಿಲ್ಲೆಯರೈತ ಸಂಪರ್ಕ ಕೇಂದ್ರಗಳಾದ ಪಟ್ಟಣ, ನರೋಣ, ಆಳಂದ, ಖಜೂರಿ, ನಿಂಬರಗಾ, ಮಾದನಹಿಪ್ಪರ್ಗಾ, ಕಲಬುರಗಿ, ಫರಹತಬಾದ್, ಅತನೂರ್, ಅಫಜಲಪೂರ, ಕರಜಗಿ, ಅವರಾದ್, ಮಹಗಾಂವ್, ಕಮಲಾಪೂರ ವ್ಯಾಪ್ತಿಯಗ್ರಾಮದರೈತರಿಗೆ ಕೃಷಿ ಸಂಜೀವಿನ ಮೊಬೈಲ್ ಪ್ರಯೋಗಾಲಯ ವಾಹನದ ಅನಕೂಲತೆಗಳ ಅರಿವುಕಾರ್ಯಕ್ರಮ ನಡೆಸಲಾಯಿತು.
ಮುಖ್ಯವಾಗಿಜಮೀನಿನ ಮಣ್ಣು ಪರೀಕ್ಷೆ, ರಸಸಾರ, ಸಾವಯವ ಇಂಗಾಲ, ಬೆಳೆ ಕೀಟ, ರೋಗಭಾದಿತ ಎಲೆಗಳ ಪರೀಕ್ಷೆಯನ್ನುರೈತರಿಗೆ ವಿವರಿಸಲಾಯಿತು.ಮುಂಗಾರು ಹಂಗಾಮಿನ ಸಿದ್ದತೆ ಹಾಗೂ ಪ್ರಸ್ತುತತಲೆದೋರಿರುವ ಮಹಾಮಾರಿಕೋವಿಡ್ರೋಗದಕುರಿತು ಮಾಹಿತಿ ನೀಡಲಾಯಿತು. ರೈತರು ಕೃಷಿ ಸಂಜೀವಿನ ಸಹಾಯವಾಣ ೧೫೫೩೧೩ ಗೆ ಕರೆ ಮಾಡಿಯೋಜನಾ ಸಿಬ್ಬಂದಿಗಳಿಂದ ಮಾಹಿತಿ ಪಡೆಯಬಹುದಾಗಿದೆಎಂದು ಕೃಷಿ ಜಂಟಿ ಕೃಷಿ ನಿರ್ದೇಶಕರು ಹಾಗೂ ಉಪನಿರ್ದೇಶಕರು ತಿಳಿಸಿದರು.
ನೈಸರ್ಗಿಕ, ಸಾವಯವ, ಶೂನ್ಯ ಬಂಡವಾಳ ಮತ್ತು ರಾಸಾಯನಿಕ ಕೃಷಿಯೂ..!
ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿಗಳಾzಡಾ.ರಾಜು ಜಿ. ತೆಗ್ಗಳ್ಳಿ ಡಾ. ವಾಸುದೇವ ನಾಯ್ಕ್, ಡಾ.ಯುಸುಫ್ ಅಲಿ, ಡಾ.ಜಹೀರ್ಅಹಮದ್, ಡಾ. ಮಂಜುನಾಥ ಪಾಟೀಲ್, ಡಾ. ಶ್ರೀನಿವಾಸ ಬಿ.ವಿಮತ್ತುರೈತ ಸಂಪರ್ಕಕೇಂದ್ರದ ಸಿಬ್ಬಂದಿಗಳು, ಕೃಷಿ ಅಧಿಕಾರಿಗಳು, ಆತ್ಮಯೋಜನೆ ಸಿಬ್ಬಂದಿ ಕ್ಷೇತ್ರ ಭೇಟಿಯಲ್ಲಿ ಉಪಸ್ಥಿರಿದ್ದರು.ಶ್ರೀಚಂದ್ರಕಾಂತಜೀವಣಗಿ, ಸಹಾಯಕ ಕೃಷಿ ನಿರ್ದೇಶಕರು,ಹಾಗೂಕೃಷಿ ಇಲಾಖೆಯಜಂಟಿ ನಿರ್ದೇಶಕರಕಛೇರಿಯತಾಂತ್ರಿಕ ಅಧಿಕಾರಿಗಳಾದ ಶ್ರೀ ಜಾಂಗೀರ್, ಶ್ರೀ ನಧಾಫ್ ಕೃಷಿ ಸಂಜೀವಿನಿ ಜಿಪಿಎಸ್ಆಧಾರಿತ ವಾಹನದ ಸೌಲಭ್ಯದ ಹಾಗೂ ಯೋಜನೆಯ ಮಾಹಿತಿಯನ್ನು ನೀಡಿದರು.
ಕೃಷಿ ಅಧಿಕಾರಿಗಳಾದ ರಾಹುಲ್ಚೌಹಾಣ, ಆನಂದ, ಸುರೇಖ, ಅಫ್ರೋಝ, ಮಲ್ಲಿಕಾರ್ಜುನ, ನೀಲಕಂಠ, ಶ್ರೀಮತಿ ವಿಜಯಲಕ್ಷ್ಮಿ, ದಿವ್ಯ, ಆಕಾಶ ರೆಡ್ಡಿ, ಪ್ರಿಯಾಂಕಾಕುಲಕರ್ಣಿ, ಸಾಕ್ಷಿ, ಸರೋಜನಿ, ಸುಷ್ಮಾ ಹಾಗೂ ಆತ್ಮಯೋಜಅಧಿಕಾರಿಗಳು ಒಂದು ವಾರಕಾಲದ ವಿವಿಧಗ್ರಾಮಕ್ಷೇತ್ರ ಭೇಟಿಕಾರ್ಯಕ್ರಮದಲ್ಲಿ ಭಾಗವಹಿಸಿದರು.