ಅರಣ್ಯ ಇಲಾಖೆಯ ಗೋಳು ಕೇಳುವವರು ಯಾರು?

0
68

ಕಲಬುರಗಿ: ಮಳೆಗಾಲ ಬಂದಿತೆಂದರೆ ಬಹುತೇಕ ಸರಕಾರಿ ಕಚೇರಿಯ ಕಟ್ಟಡಗಳು ‘ಸೋರುತಿಹದು ಮನೆಯ ಮಾಳಿಗೆ’ ಎನ್ನುವಂತಾಗುತ್ತವೆ.

ಇದಕ್ಕೆ ತಾಜ ನಿದರ್ಶನವೆಂಬತೆ ಜೇವರ್ಗಿಯ ಅರಣ್ಯ ಇಲಾಖೆಯ ಕಚೇರಿ ಕಟ್ಟಡ ಇಂದು ಸುರಿದ ಭಾರೀಮಳೆಯಿಂದಾಗಿ ಕಟ್ಟಡದ ತುಂಬೆಲ್ಲ ನೀರು ತುಂಬಿಕೊಂಡಿದೆ.

Contact Your\'s Advertisement; 9902492681

ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಅರಣ್ಯ ಇಲಾಖೆ ಹಣೆ ಬರಹ ಇದು. ಮಳೆ ಬಂದರೆ ಸಾಕು ಕಚೇರಿಯ ಮುಂದೆ ನೀರಿ ಹೊಳೆನೆ ತುಂಬಿರುತೆ, ಕಚೇರಿ ಒಳಗೆ ಹೋಗಬೇಕೆಂದರೆ ಬಲು ಕಷ್ಟವನ್ನೆ ಪಡಬೇಕು ಇದು ಕಚೇರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿಗಳ ಗೋಳು.

ಅರಣ್ಯ ಇಲಾಖೆಯ ಮುಂದೆ ಭಾರೀಮಳೆ ಬಂದ ಕಾರಣ ಮಳೆಯ ನೀರು ಕಚೇರಿಯಲ್ಲಿ ಹೋಗಿದ್ದು ಮೇಲೆನ ಚಿತ್ರಗಳಲ್ಲಿ ವಿಕ್ಷಕರು ಗಮನಿಸಬಹುದು. ಸಮಸ್ಯೆ ಕುರಿತು ಇಲ್ಲಿನ ಮೇಲಧಿಕಾರಿಗಳಿಗೆ ಅನೇಕ ಸಲ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು,  ಕ್ಯಾರೆ ಎನ್ನುತಿಲ್ಲ ಎಂಬ ಸುದ್ದಿ ಲಭ್ಯವಾಗಿದ್ದು, ಸರಕಾರಿಯ ಇಲಾಖೆ ಈ ಪರಿಸ್ಥಿಯಿಂದ ಕಚೇರಿಯ ಕಡತಗಳು ನಾಶವಾದ್ದರೆ ಯಾರು ಜವಾಬ್ದಾರರು ಎಂಬುವುದು ಸಾರ್ವಜನಿಕರಲ್ಲಿ ಅಭಿಪ್ರಾಯ ಮೂಡುತಿದೆ. ಮಳೆಗೆ ಅಧಿಕಾರಿಗಳಲ್ಲಿ ಆತಂಕ ಸೃಷ್ಠಿಯಾಗುವಂತಿದೆ.

ಸಹಕಾರ ಬ್ಯಾಂಕ್ ಕಚೇರಿ ಕಟ್ಟಡದಲ್ಲೂ ನೀರು

ಅದೇ ರೀತಿಯಾಗಿ ಇಲ್ಲಿನ ಜೇವರ್ಗಿ ಪಟ್ಟಣದಲ್ಲಿರುವ ಕಲಬುರಗಿ, ಯಾದಗಿರಿ, ಸಹಕಾರ ಸಂಘದ ಕಚೇರಿಯ ಕಟ್ಟಡದಲ್ಲು ಸಹ ನೀರು ನುಗ್ಗಿವೆ ಎಂದು ಹೇಳಲಾಗುತ್ತಿದೆ.

ಈ ಕಟ್ಟಡದ ಮುಂಭಾಗದಲ್ಲಿಯೇ ಚರಂಡಿ ಹರಿಯುತ್ತಿರುವುದರಿಂದ ಚರಂಡಿ ನೀರು ಕಚೇರಿ ಯೊಳಗೆ ನುಗ್ಗಿದರಿಂದ ಬ್ಯಾಂಕ್ ನ ಸಿಬ್ಬಂದಿಗಳು ಕಚೇರಿ ಕಡತಗಳನ್ನು ಜುಪಾನವಾಗಿ ಎತ್ತಿಟ್ಟುಕೊಂಡು ಕಚೇರಿಗೆ ಬೀಗ ಹಾಕಿ ಮನೆಗೆ ತೆರಳಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here