ಕಸಾಪ ಕಲಬುರಗಿ ಅಧ್ಯಕ್ಷ ಚುನಾವಣೆ: ಬಿ.ಎಚ್.ನಿರಗುಡಿ ಅವರಿಗೆ ಮತ ಯಾಕೆ ಹಾಕಬೇಕು?

0
51

ಕಲಬುರಗಿ ಜಿಲ್ಲಾ ಸಾಹಿತ್ಯ ಪರಿಷತ್ತಿನ ಚುನಾವಣೆ ಕಣ ಸಿದ್ಧವಾಗಿದೆ. ಹಲವು ಹಿರಿಯ ಕಿರಿಯರು ಕಣದಲ್ಲಿದ್ದಾರೆ. ಇತ್ತೀಚಗೆ ನಾನು ಕಣದಲ್ಲಿರುವ ಅನೇಕರನ್ನು ಉಲ್ಲೇಖಿಸುತ್ತಾ, ಸಾಹಿತಿ, ಸಂಘಟಕರಾಗಿರುವ ಬಿ.ಎಚ್.ನಿರಗುಡಿ ಅವರಿಗೆ ಮತ ಹಾಕುವುದಾಗಿ ನಮ್ಮೆಲ್ಲರ ಗೆಳೆಯರ ಬಳಗದಿಂದ ಪ್ರಕಟಿಸಿದ್ದೆ ಅದರಂತೆ ಕೆಲವು ಜನರು ಏಕೆ ನಿರಗುಡಿಯವರಿಗೆ ಮತ ಹಾಕಬೇಕು ಎಂಬ ಪ್ರಶ್ನೆ ಬಹಿರಂಗವಾಗಿ ಕೇಳಲಿಲ್ಲ, ಬದಲಿಗೆ ವಯಕ್ತಿಕವಾಗಿ ಕೇಳಿರುವ ಕಾರಣ ನಾನು ಅತ್ಯಂತ ಉತ್ಸುಕತೆಯಿಂದ ಈ ವಿಚಾರಗಳನ್ನು ನಿಮ್ಮ ಮುಂದಿಡುತ್ತಿರುವೆ.

ಕಲಬುರಗಿ ಕನ್ನಡ ಸಾಹಿತ್ಯ ಪರಿಷತ್ತು ರಾಜಕೀಯ ಸಿದ್ಧಾಂತದಿಂದ ದೂರವಾಗಿ, ಸಾಹಿತ್ಯದ ಸಿದ್ಧಾಂತಕ್ಕೆ ಅಣಿಯಾಗುವುದಕ್ಕಾಗಿ ನಿರಗುಡಿಗೆ ಮತ ಹಾಕಬೇಕು. ಈಗಾಗಲೇ ವಾಣಿಜ್ಯ ಸಂಕೀರ್ಣವಾಗಿ ಬದಲಾಗಿರುವ ಕನ್ನಡ ಭವನ ಸಾಹಿತ್ಯ ಸಂಕೀರ್ಣವಾಗಿ ಬದಲಾಯಿಸಲು ನಿರಗುಡಿಗೆ ಮತ ಹಾಕಬೇಕು. ರಾಜಕಾರಣಿಗಳಿಂದ, ಸಾಹಿತಿಗಳು ಅಲ್ಲದವರಿಂದ ತುಂಬಿ ತುಳುಕಾಡುವ ಸಾಹಿತ್ಯ ಪರಿಷತ್ತು ಜೀವಪರ ಸಾಹಿತಿಗಳಿಂದ ತುಂಬಿ ತುಳುಕಾಡುವಂತೆ ಮಾಡಲು ನಿರಗುಡಿಗೆ ಮತ ಹಾಕಬೇಕು. ಎಲ್ಲರನ್ನೂ ಕಡೆಗಣಿಸಿರುವ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ಎಲ್ಲರನ್ನು ಒಳಗೊಳ್ಳುವ ಹಾಗೆ ಮಾಡಲು ನಿರಗುಡಿ ಅವರಿಗೆ ಮತ ಹಾಕಬೇಕು.

Contact Your\'s Advertisement; 9902492681

ಬೆರಳೆಣಿಕೆಯಷ್ಟು ಸಾಹಿತ್ಯ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಸಾಹಿತ್ಯ ಪರಿಷತ್ತನ್ನು ಸದಾ ಕ್ರಿಯಾಶೀಲವಾಗಿ ಸಾಹಿತ್ಯದ ಕಾರ್ಯಕ್ರಮಗಳನ್ನು ಆಯೋಜಿಸಲು ನಿರಗುಡಿಗೆ ಮತಹಾಕಬೇಕು. ಏಕಮುಖವಾಗಿ ಆಲೋಚಿಸಿ ಅದೇ ಹಳೆಯ ಆಲೋಚನೆಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಬದಲಿಗೆ ಅತ್ಯಂತ ಹೊಸತನದಿಂದ ಕೂಡಿದ ಕಾರ್ಯಕ್ರಮಗಳನ್ನು ಆಯೋಜಿಸಲು ನಿರಗುಡಿಗೆ ಮತ ಹಾಕಬೇಕು. ಸಾಹಿತ್ಯದ ಕಾರ್ಯಕ್ರಮವನ್ನು ರಾಜಕೀಯಗೊಳಿಸದೇ ಜನರ ಮದ್ಯೆ ದ್ವೇಷವನ್ನು ಬಿತ್ತದೇ ಸಾಹಿತ್ಯವನ್ನು ಬಿತ್ತಿವ ಕೆಲಸಕ್ಕಾಗಿ ನಿರಗುಡಿಗೆ ಮತ ಹಾಕಬೇಕು.

ಈ ಎಡಬಲಗಳ ತೀಕಲಾಟದ ಮಧ್ಯೆ ನೈಜವಾದ ಸಾಹಿತಿ ಮತ್ತು ಸಾಹಿತ್ಯ ಸತ್ತು ಹೋಗುತ್ತಿರುವ ಈ ದಿನಮಾನಗಳಲ್ಲಿ ಜನರ ಬದುಕಿನ ಸಾಹಿತ್ಯ ಎತ್ತಿ ಹಿಡಿಯಲು ನಿರಗುಡಿಗೆ ಮತ ಹಾಕಬೇಕು. ಸಾಹಿತ್ಯದ ಕಾರ್ಯಕ್ರಮವೆಂದರೆ ವೇದಿಕೆಯ ಮೇಲೆ ಹಾಗೂ ವೇದಿಕೆಯ ಮುಂಭಾಗದಲ್ಲಿ ಸಾಹಿತಿಗಳು ಹಾಗೂ ಸಾಹಿತ್ಯ ಆಸಕ್ತರಿಂದ ತುಂಬಿರುವಂತೆ ನೋಡಿಕೊಳ್ಳಲು ನಿರಗುಡಿಗೆ ಮತ ಹಾಕಬೇಕು.

ಕಾರ್ಯಕ್ರಮ ಉದ್ಘಾಟನೆ ಮಾಡಿ ಸ್ಟೇಜ್ ಶೋ ಮಾಡಿದರೆ ಸಾಲದು ಕಾರ್ಯಕ್ರಮದ ಸಂಪೂರ್ಣ ಲಾಭವನ್ನು ಸಾಹಿತಿಗಳು ಪಡೆಯಲು ನಿರಗುಡಿಗೆ ಮತ ಹಾಕಬೇಕು. ಜೀವಪರವಾದ, ಜನಪರವಾದ ಈ ನೆಲದ ಸಾಹಿತ್ಯವನ್ನು ಕಲಬುರಗಿ ಜಿಲ್ಲೆಯಲ್ಲಿ ಎತ್ತಿ ಹಿಡಿಯಲು ನಿರಗುಡಿಗೆ ಮತ ಹಾಕಬೇಕು. ಬದಲಾದ ಕಾಲಘಟ್ಟದಲ್ಲಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರವನ್ನು ಕೂಡ ಬದಲಾಯಿಸುತ್ತಾ ಮುನ್ನಡೆಸಲು ನಿರಗುಡಿಗೆ ಮತ ಹಾಕಬೇಕು.

ತಾಂತ್ರಿಕವಾಗಿ ಸಾಹಿತ್ಯವನ್ನು ಕಲಬುರಗಿಯಲ್ಲಿ ಕಟ್ಟಲು, ತಂತ್ರಜ್ಞಾನ ಬಳಕೆ ಮಾಡಿ ಸಾಹಿತ್ಯದ ಕಾರ್ಯಕ್ರಮಗಳನ್ನು ಮಾಡಲು ಅವುಗಳನ್ನು ಸೂಕ್ತವಾದ ಪ್ರಮಾಣಿಕವಾದ ಅನುಷ್ಠಾನಗೊಳಿಸಲು ನಿರಗುಡಿಗೆ ಮತ ಹಾಕಬೇಕು. ಜಿಲ್ಲೆಯಲ್ಲಿ ಇನ್ನೂ ಎಲೆಮರೆಯ ಕಾಯಿಯಂತೆ ಮರೆಯಾಗಿರುವ ಯುವ ಸಾಹಿತಿಗಳನ್ನು ಬರಹಗಾರರನ್ನು ಗುರುತಿಸಿ ಸೂಕ್ತವಾದ ವೇದಿಕೆ ಕಲ್ಪಿಸಿ ಅವರಿಗೆ ಸರಿಯಾದ ಮಾರ್ಗದರ್ಶನ ಕಲ್ಪಿಸಲು ನಿರಗುಡಿಗೆ ಮತ ಹಾಕಬೇಕು.

ಜಿಲ್ಲೆಯ ಪ್ರತಿ ವಲಯದ ಸಾಹಿತ್ಯ ಪರಿಷತ್ತುಗಳು ಕೂಡ ಕ್ರಿಯಾಶೀಲವಾಗಿ ಸಾಹಿತ್ಯದ ಕೆಲಸಗಳನ್ನು ಯಾವುದೇ ಫಲಾಪೇಕ್ಷವಿಲ್ಲದೇ ಮಾಡುವುದಕ್ಕಾಗಿ ನಿರಗುಡಿಗೆ ಮತ ಹಾಕಬೇಕು.ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಕಾರ್ಯಕ್ರಮಗಳನ್ನು, ವಿಚಾರ ಸಂಕೀರ್ಣಗಳನ್ನು, ಕಮ್ಮಟಗಳನ್ನು, ಕವಿಗೋಷ್ಠಿ ಹೀಗೆ ನಾನಾ ಬಗೆಯ ಕಾರ್ಯಕ್ರಮಗಳನ್ನು ನೈಜವಾದ ಸಾಹಿತಿಗಳಿಗೆ ತಲುಪಿಸಲು ನಿರಗುಡಿಗೆ ಮತ ಹಾಕಬೇಕು.

ಪುಸ್ತಕ ಬರವಣಿಗೆ, ಪುಸ್ತಕ ಪ್ರಕಟಣೆ, ಪುಸ್ತಕ ಮುದ್ರಣ, ಮಾಸ ಪತ್ರಿಕೆ, ಸಾಹಿತ್ಯ ಪತ್ರಿಕೆ ಇವುಗಳ ಗಂಧಗಾಳಿ ತಿಳಿಯದೇಯಿರುವ ಅನೇಕ ಸ್ವಯಂಘೋಷಿತ ಸಾಹಿತಿಗಳಿಗೆ ಅವುಗಳನ್ನು ಸರಿಯಾದ ಸಮಯದಲ್ಲಿ ಅರ್ಥಮಾಡಿಸುವ ಸಾಹಿತ್ಯದ ಕಾರ್ಯಕ್ರಮ ಆಯೋಜಿಸಲು ನಿರಗುಡಿಗೆ ಮತ ಹಾಕಬೇಕು.ಜಿಲ್ಲೆ, ರಾಜ್ಯ , ರಾಷ್ಟ್ರಮಟ್ಟದ ಸಾಹಿತಿಗಳ ನೈಜ ಒಡನಾಟವಿರುವ ನಿರಗುಡಿ ರಾಜ್ಯದ ಹಿರಿಯ ಸಾಹಿತಿಗಳ ಅನುಭವಗಳನ್ನು ಕಲಬುರಗಿಗೆ ಈಗಾಗಲೇ ತಂದಿದ್ದಾರೆ ಮತ್ತು ಈ ಪ್ರಾಥಿನಿಧಕ ಸಂಸ್ಥೆಯ ಮೂಲಕ ಈ ಕೆಲಸ ಹೆಚ್ಚಾಗಲು ನಿರಗುಡಿಗೆ ಮತ ಹಾಕಬೇಕು.

ನೈಜವಾದ ಸಾಹಿತಿಗಳ ಬಗ್ಗೆ ಪ್ರೀತಿ ಗೌರವ ಅಭಿಮಾನ ಹೊಂದಿರುವ ನಿರಗುಡಿ ಎಂತಹ ಸಾಹಿತ್ಯದ ಕಾರ್ಯಕ್ರಮದಲ್ಲಿ ಎಂತಹ ಮತ್ತು ಯಾವ ಮಟ್ಟದ ಸಾಹಿತಿಗಳು ಇದ್ದರೆ ಚಂದ ಎಂಬುವುದನ್ನು ಅರೆತಿದ್ದಾರೆ ಆ ಆಲೋಚನೆಯನ್ನು ತಮ್ಮ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಈಗಾಗಲೇ ಅಳವಡಿಸಿದ್ದಾರೆ ಅದಕ್ಕಾಗಿ ಅವರಿಗೆ ಮತ ಹಾಕಬೇಕು.

ಕಲಬುರಗಿ ಕಸಾಪ ತನ್ನ ಅಸ್ತಿತ್ವವನ್ನು, ಘನತೆಯನ್ನು ಉಳಿಸಿಕೊಂಡು ಎಲ್ಲರೊಳಗು ಒಡಗೂಡಿ ಸಾಹಿತ್ಯದ ವಾತಾವರಣ ಹೆಚ್ಚಾಗಿ ಜನಪರ ಜೀವಪರ ಈ ಕಲಬುರಗಿ ನೆಲದ ನೈಜ ಸಾಹಿತ್ಯ ಮತ್ತು ಸಾಹಿತಿಗಳನ್ನು ಮುಂಚುಣಿಗೆ ತರಲು ಸಂಘಟಕ, ಕ್ರಿಯಾಶೀಲ ವ್ಯಕ್ತಿ, ಸಾಹಿತಿ,ಉಪನ್ಯಾಸಕರು ಆಗಿರುವ ಬಿ.ಎಚ್.ನಿರಗುಡಿ ಅವರಿಗೆ ಮತ ಹಾಕಿ ಪರಿಷತ್ತನ್ನು ಸಾಹಿತ್ಯಕವಾಗಿ ಉಳಿಸಿಕೊಳ್ಳಲು ಪ್ರಯತ್ನಿಸಿ.

ಕೊನೆಯದಾಗಿ ನಿರಗುಡಿಯವರಿಗೆ ಒಂದು ಕಿವಿಮಾತು: ತಾವು ಅಧ್ಯಕ್ಷರಾದರೆ, ಇನ್ನಷ್ಟು ಕ್ರಿಯಾಶೀಲವಾಗಿ ಯೋಚಿಸಿ ಕಾರ್ಯಕ್ರಮ ಆಯೋಜಿಸಿ. ವಲಯ ಸಾಹಿತ್ಯ ಪರಿಷತ್ತಿನಿಂದ ತಾಲೂಕ ಜಿಲ್ಲಾ ಸಾಹಿತ್ಯ ಪರಿಷತ್ತಿನ ತಂಡವನ್ನು ಕಡ್ಡಾಯವಾಗಿ ಹೊಸಬರಿಗೆ ಅವಕಾಶ ಕಲ್ಪಿಸಿ. ಹೊಸ ತಂಡದೊಂದಿಗೆ ಹೊಸ ಹುಮ್ಮಸ್ಸಿನಿಂದ ಕನ್ನಡ ಸಾಹಿತ್ಯವನ್ನು ಕಟ್ಟುವ ಕೆಲಸ ಮಾಡಿ ಎಂದು ಮನವಿ ಮಾಡುವೆ.

-ಕೆ.ಎಂ.ವಿಶ್ವನಾಥ ಮರತೂರ.
ಯುವ ಬರಹಗಾರರು, ಕಲಬುರಗಿ.
9686714046

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here