ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿಸಿದ ಅಧಿಕಾರಿಗಳು

0
36

ಶಹಾಬಾದ: ನಗರದಲ್ಲಿ ಕರೊನಾ ವೈರಸ್ ಹೆಚ್ಚುತ್ತಿರುವುದು ಕಂಡು ಬರುತ್ತಿರುವುದರಿಂದ ಮುಂಜಾಗೃತ ಕ್ರಮವಾಗಿ ಅಗತ್ಯ ವಸ್ತುಗಳ ಮಾರಾಟ ಬಿಟ್ಟು ಎಲ್ಲಾ ಅಂಗಡಿಗಳನ್ನು ನಡೆಸದಂತೆ ತಹಸೀಲ್ದಾರ ಸುರೇಶ ವರ್ಮಾ ಹಾಗೂ ನಗರಸಭೆಯ ಪೌರಾಯುಕ್ತ ಡಾ.ಕೆ.ಗುರಲಿಂಗಪ್ಪ ಕ್ರಮಕೈಗೊಂಡರು.

ಈಗಾಗಲೇ ನಗರದಲ್ಲಿ ಪ್ರಕರಣಗಳು ಹೆಚ್ಚುತ್ತಿವೆ.ಅಲ್ಲದೇ ಸಾವಿನ ಸಂಖ್ಯೆಯೂ ಬೆಳಕಿಗೆ ಬರುತ್ತಿದೆ.ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ತಾಲೂಕಾಢಳಿತ ಸೋಮವಾರ ಕಟ್ಟು ನಿಟ್ಟಿನ ಕ್ರಮ ಕೈಗೊಂಡ ಹಿನ್ನೆಲೆಯಲ್ಲಿ ನಗರದ ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿತ್ತು.ಪ್ರಮುಖ ಬೀದಿಗಳು ಮಾತ್ರ ಜನರು ಮತ್ತು ವಾಹನಗಳಿಲ್ಲದೇ ಬಿಕೋ ಎನ್ನುತ್ತಿದ್ದವು.

Contact Your\'s Advertisement; 9902492681

ಕೃಷಿ ಹೊಂಡಗಳು ನಿರ್ಮಿಸಿ ಮಳೆ ನೀರನ್ನು ಇಂಗಿಸುವ ಕೆಲಸ ಮಾಡಿ: ತಿಮ್ಮಪ್ಪ

ಬೆಳಿಗ್ಗೆ ೬ ರಿಂದ ೧೦ ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸಲಾಗಿತ್ತು.೧೦ ಗಂಟೆಯಾಗುತ್ತಿದ್ದಂತೆ ಕೆಲ ವ್ಯಾಪರಸ್ಥರು ಸ್ವಚ್ಛೆಯಿಂದ ತಮ್ಮ ಅಂಗಡಿಗಳನ್ನು ಬಂದ್ ಮಾಡಿಕೊಂಡು ಮನೆ ಕಡೆಗೆ ನಡೆದರೆ, ಮತ್ತೆ ಕೆಲ ಅಂಗಡಿಯವರು ಇನ್ನೂ ಸ್ವಲ್ಪ ವ್ಯಾಪಾರ ಮಾಡಿಕೊಂಡು ನಂತರ ಅಂಗಡಿ ಮುಚ್ಚಿದರಾಯಿತು ಎಂದು ವ್ಯಾಪಾರ ಮುಂದುವರಿಸಿದರು. ಆಗ ಪೊಲೀಸರು ಅಂಗಡಿಗಳನ್ನು ಗದರಿಸಿ ಅಂಗಡಿಗಳನ್ನು ಮುಚ್ಚಿಸಿದರು.ಇನ್ನು ಕೆಲವರು ಪೊಲೀಸರ ಕಣ್ಣಿಗೆ ಕಾಣದಂತೆ ಅಂಗಡಿ ಬಾಗಿಲನ್ನು ಮುಚ್ಚಿದಂತೆ ಮಾಡಿ ವ್ಯಾಪಾರ ಮಾಡಿದರು. ಇನ್ನು ಕೆಲವು ಬಟ್ಟೆ ವ್ಯಾಪಾರಸ್ಥರು ಅಂಗಡಿಗಳಿಗೆ ವ್ಯಾಪಾರ ಮಾಡಲು ಅವಕಾಶ ಇರದಿದ್ದರೂ, ಅಂಗಡಿಯ ಪಕ್ಕದ ಬಾಗಿಲು ತೆಗೆದು, ಇನ್ನೂ ಕೆಲವರು ಹೊರಗಡೆ ಒಬ್ಬರಿಗೆ ಕಾವಲಿಗೆ ಇಟ್ಟು, ಗ್ರಾಹಕರನ್ನು ಅಂಗಡಿಯ ಒಳಗೆ ಕರೆದು ಅಂಗಡಿಯ ಶೆಟರ್ ಹಾಕಿ ಕಾನೂನು ಉಲ್ಲಂಗನೆ ಮಾಡುತ್ತಿರುವುದು ಕಂಡು ಬಂದಿತು.

ಕೆಎಸ್‌ಆರ್‌ಟಿಸಿ ಬಸ್ ಸಂಚಾ ಪ್ರಾರಂಭವಾದರೂ ಬಸ್‌ಗಳ ಸಂಖ್ಯೆ ಕಡಿಮೆಯಾಗಿತ್ತು.ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯುಂಟಾಯಿತು.ಬ್ಯಾಂಕ್, ಶಿಕ್ಷಕರು, ಆರೋಗ್ಯ ಇಲಾಖೆ ಹಾಗೂ ಇತರ ಇಲಾಖೆಯ ಸಿಬ್ಬಂದಿಗಳು ಬಸ್‌ಗಾಗಿ ಪರದಾಡಿದರು.ಕಲಬುರಗಿ-ಯಾದಗಿರಿ ಬಸ್ ಸೀಟ್ ಲೆವೆಲ್ ಇದಿದ್ದರಿಂದ ಬಸ್ ನಿಲುಗಡೆ ಮಾಡದಿರುವುದರಿಂದ ನೌಕರಸ್ಥರು ರಸ್ತೆಯ ಮೇಲೆ ಗಂಟೆಗಟ್ಟಲೇ ನಿಲ್ಲುವಂತಾಯಿತು.ಅಲ್ಲದೇ ಮದುವೆಗೆ ಹೋಗಬೇಕಾದ ಜನರು ಬಸ್‌ಗಾಗಿ ಪರದಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here