16 ರಂದು ಶೇಖರೋಜಾ ಮಠದ ಶ್ರೀ ವೀರತಪಸ್ವಿ ವೀರಭದ್ರ ಶಿವಾಚಾರ್ಯರು ಇವರಿಗೆ ‘ಪಂಚಾಚಾರ್ಯ ಶ್ರೀ’ ಪ್ರಶಸ್ತಿ ಪ್ರದಾನ

0
45

ಕಲಬುರಗಿ: ಲಿಂಗಪೂಜಾ ನಿಷ್ಠರು ಹಾಗೂ ಸಾಹಿತ್ಯ, ಸಮಾಜಮುಖಿಯಾಗಿ, ಆಧ್ಯಾತ್ಮಿಕವಾಗಿ ತಮ್ಮ ಕಾರ್ಯಗಳ ಮೂಲಕ ನಾಡಿಗೆ ಹೆಸರುವಾಸಿಯಾದ ಕಡಗಂಚಿ-ಶೇಖರೋಜಾ ಮಠದ ಶ್ರೀ ವೀರತಪಸ್ವಿ ವೀರಭದ್ರ ಶಿವಾಚಾರ್ಯರು ಇವರಿಗೆ ಬೆಂಗಳೂರಿನ ಶ್ರೀ ಬಿ.ಆರ್.ವಿ.ಗೌಡ ಫೌಂಡೇಶನ್ ವತಿಯಿಂದ ‘ಪಂಚಾಚಾರ್ಯ ಶ್ರೀ’ ಪ್ರಶಸ್ತಿಯನ್ನು ಪಡೆದ ಹಿನ್ನೆಲೆಯಲ್ಲಿ ಇಲ್ಲಿನ ಜಂಗಮ ಬೆಳಗು ಪ್ರತಿಷ್ಠಾನವು ಜನವರಿ ೧೬ ರಂದು ಬೆಳಗ್ಗೆ ೧೦.೩೦ ಕ್ಕೆ ನಗರದ ಕಲಾ ಮಂಡಳದಲ್ಲಿ ‘ಅಭಿನಂದನ ಸಮಾರಂಭ’ವೊಂದನ್ನು ಏರ್ಪಡಿಸಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಶಿವಾನಂದ ಮಠಪತಿ ಬೆಳಮಗಿ ತಿಳಿಸಿದ್ದಾರೆ.

ಕಲ್ಯಾಣ ನಾಡಿನ ಸರ್ವ ಭಕ್ತರ ಹೃದಯದಲ್ಲಿ ಸದಾಕಾಲ ಉಳಿಯುವಂಥ ಕಾರ್ಯ ಮಾಡುತ್ತಿರುವ ಕಡಗಂಚಿ ಶ್ರೀಗಳ ಸೇವೆ ಅನನ್ಯವಾಗಿದ್ದು, ಅಂಥವರನ್ನು ಗೌರವಿಸುವ ಪ್ರಾಮಾಣಿಕ ಪ್ರಯತ್ನ ಅವರ ಭಕ್ತ ವೃಂದದ ಸಹಕಾರದೊಂದಿಗೆ ಪ್ರತಿಷ್ಠಾನವು ಮಾಡುತ್ತಿದೆ. ಜತೆಗೆ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಂತರ್ವಾಣಿ ಸಮುದಾಯ ರೇಡಿಯೋ ಕೇಂದ್ರದ ಎಫ್.ಎಂ.ನ ದಶಮಾನೋತ್ಸವದ ಸಂಭ್ರಮದ ನಿಮಿತ್ತ ವಿಶೇಷ ಕವಿಗೋಷ್ಠಿಯೂ ಸಹ ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದೆ.

Contact Your\'s Advertisement; 9902492681

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ನೂತನ ಅಧ್ಯಕ್ಷೆ ಶಶಿಕಲಾ ವ್ಹಿ.ಟೆಂಗಳಿ ಸಮಾರಂಭ ಉದ್ಘಾಟಿಸಲಿದ್ದು, ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಪಂ ಅಧ್ಯಕ್ಷೆ ಸುವರ್ಣಾ ಹಣಮಂತರಾಯ ಮಲಾಜಿ, ಬಿಜೆಪಿ ಯುವ ಧುರೀಣ ಚಂದ್ರಕಾಂತ ಬಿ.ಪಾಟೀಲ, ಶ್ರೀ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ.ಶಿವರಾಜ ಶಾಸ್ತ್ರಿ, ಜಿಲ್ಲಾ ವೀರಶೈವ ಮಹಾಸಭಾದ ಉಪಾಧ್ಯಕ್ಷ ಶರಣಬಸಪ್ಪ ಬಿ.ಭೂಸನೂರ, ಸಾಂಸ್ಕೃತಿಕ ಸಂಘಟಕ ವಿಜಯಕುಮಾರ ತೇಗಲತಿಪ್ಪಿ, ಪ್ರವಚನಕಾರ ಸಂಗಮೇಶ ಶಾಸ್ತ್ರಿ ಮಾಶಾಳ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ.

ಕವಿಗಳಾದ ಪರಮೇಶ್ವರ ಶಟಕಾರ, ಸಂತೋಷ ಕುಂಬಾರ, ಡಾ.ಗೀತಾ ಪಾಟೀಲ, ಶಕುಂತಲಾ ಪಾಟೀಲ ಜಾವಳಿ, ರಾಜಕುಮಾರ ಬಿ.ಉದನೂರ, ಶಿಲ್ಪಾ ಜೋಶಿ, ಕವಿತಾ ಕಾವಳೆ, ಹಣಮಂತರಾವ ಘಂಟೇಕರ್, ಯಶೋಧಾ ಕಟಕೆ, ರೇಣುಕಾ ಡಾಂಗೆ ಅವರು ಪ್ರಚಲಿತ ವಿದ್ಯಾಮಾನಗಳ ಕುರಿತು ತಮ್ಮ ಸ್ವ-ರಚಿತ ಕವನ ವಾಚಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here