ಖರೀದಿ ಕೇಂದ್ರ ತೆರೆದು ಭತ್ತ, ಶೇಂಗಾ, ಈರುಳ್ಳಿ, ರೇಷ್ಮೆ ಗೂಡಿಗೆ ಖರೀದಿಸಲು ಬೆಂಬಲ ಘೋಷಿಸುವಂತೆ ಮನವಿ

1
31

ಕಲಬುರಗಿ: ಕನಿಷ್ಟ ಬೆಂಬಲ ಬೆಲೆ ಬೋನಸ್ ಘೋಷಿಸಿ ಮತ್ತು ತಕ್ಷಣವೇ ಖರೀದಿ ಕೇಂದ್ರ ತೆರೆದು ಭತ್ತ, ಶೇಂಗಾ, ಈರುಳ್ಳಿ ಖರೀದಿಸಲು ಮತ್ತು ರೇಷ್ಮೆ ಗೂಡಿಗೆ ಬೆಂಬಲ ಘೋಷಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘ (ಂIಏS) ರಾಜ್ಯ ಸಮಿತಿ, ಬೆಂಗಳೂರು ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು ಎಂದು ಸಮಿತಿಯ ಅಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಅವರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯವು ಕಳೆದೆರಡು ವ?ಗಳಿಂದ ಕೋವಿಡ್ – ೧೯ ರಿಂದ ಬಾದಿಸಲ್ಪಟ್ಟಿದೆ. ತಾವು ಮತ್ತೊಮ್ಮೆ ಲಾಕ್ ಡೌನ್ ಘೋಷಿಸಿರುವುದರಿಂದ ರೈತರು ಸಂಕ?ಕ್ಕೀಡಾಗಿದ್ದಾರೆ. ಕಳೆದ ಮುಂಗಾರು ಬೆಳೆಗಳಿಗೆ ರಾಜ್ಯ ಸರಕಾರ ಕನಿಷ್ಟ ಬೆಂಬಲ ಬೆಲೆಗೆ ಯಾವುದೇ ಬೋನಸ್ ಘೋಷಿಸಲಿಲ್ಲ. ಮಾತ್ರವಲ್ಲಾ, ಕೇಂದ್ರ ಸರಕಾರ ಘೋಷಿಸಿದ ಕನಿಷ್ಟ ಬೆಂಬಲ ಬೆಲೆಗೂ ಖರೀದಿಸುವ ಕಾರ್ಯವನ್ನು ಮಾಡಲಿಲ್ಲ. ಹೀಗಾಗಿ ರಾಜ್ಯದ ಭತ್ತ, ತೊಗರಿ, ಜೋಳ, ರಾಗಿ, ಮೆಕ್ಕೆಜೋಳ, ಈರುಳ್ಳಿ, ಹತ್ತಿ, ಒಣಮೆಣಸಿನ ಕಾಯಿ ಮುಂತಾದ ಬೆಳೆಗಾರರು ತಲಾ ಕ್ವಿಂಟಾಲ್ ಬೆಳೆಗೆ ಸರಾಸರಿ ೧,೦೦೦ ರೂ. ಗಳಿಗೂ ಅಧಿಕ ನ?ವನ್ನು ತಲಾ ಎಕರೆಗೆ ಕನಿ?ವೆಂದರೂ ೧೫ ರಿಂದ ೩೫ ಸಾವಿರ ರೂ. ಗಳ ನ? ಹೊಂದಿದ್ದಾರೆ ಎಂದು ರೈತರ ಗೋಳನ್ನು ತೋಡಿಕೊಂಡಿದ್ದಾರೆ.

Contact Your\'s Advertisement; 9902492681

ಭತ್ತದ ನಿಗದಿತ ಕನಿಷ್ಠ ಬೆಂಬಲ ಬೆಲೆ ೧೨೦೦/೧೪೦೦ ರೂ. ಮುಂಗಾರು ಮಾರುಕಟ್ಟೆ ದರ ೧೮೮೦ ಹಿಂಗಾರು ಮಾರುಕಟ್ಟೆ ದರ ೧೨೦೦/ ೧೪೦೦ ಕನಿಷ್ಠ ನಷ್ಠ ಮುಂಗಾರು ೪೮೦ ರೂ. ಹಿಂಗಾರು ೪೮೦,  ರಾಗಿ ನಿಗದಿತ ಕನಿಷ್ಠ ಬೆಂಬಲ ಬೆಲೆ ೧೭೦೦ ರೂ. ಮುಂಗಾರು ಮಾರುಕಟ್ಟೆ ದರ ೩೨೯೫ ರೂ. ಕನಿಷ್ಠ ನಷ್ಠ ಮುಂಗಾರು ೧೬೦೦ ರೂ. ಜೋಳ ನಿಗದಿತ ಕನಿಷ್ಠ ಬೆಂಬಲ ಬೆಲೆ ೨೦೦೦ ರೂ. ಮುಂಗರು ಮಾರುಕಟ್ಟೆ ದರ ೨೬೨೦ ರೂ. ಕನಿಷ್ಠ ನಷ್ಠ ಮುಂಗಾರು೬೨೦, ತೋಗರಿ ನಿಗದಿತ ಕನಿಷ್ಠ ಬೆಂಬಲ ಬೆಲೆ ೫೫೦೦ ರೂ. ಮುಂಗಾರು ಮಾರುಕಟ್ಟೆ ದರ ೬೦೦೦ ರೂ. ಕನಿಷ್ಠ ನಷ್ಠ ಮುಂಗಾರು ೫೦೦ ರೂ. ಶೇಂಗಾ ನಿಗದಿತ ಕನಿಷ್ಠ ಬೆಂಬಲ ಬೆಲೆ ೪೨೦೦ ಮುಂಗಾರು ಮಾರುಕಟ್ಟೆ ದರ ೪೮೯೦ ರೂ. ಹಿಂಗಾರು ಮಾರುಕಟ್ಟೆ ದರ ೪೫೦೦ ರೂ. ಕನಿಷ್ಠ ನಷ್ಠ ಮುಂಗಾರು ೬೯೦ ಹಿಂಗಾರು ೩೯೦ ರೂ., ಹತ್ತಿ ನಿಗದಿತ ಕನಿಷ್ಠ ಬೆಂಬಲ ಬೆಲೆ ೪೮೦೦ ರೂ. ಮುಂಗಾರು ಮಾರುಕಟ್ಟೆ ದರ ೫೧೫೦ ಹಿಂಗಾರು ಮಾರುಕಟ್ಟೆ ದರ ೪೫೦೦ ರೂ. ಕನಿಷ್ಠ ನಷ್ಠ ಮುಂಗಾರು ೬೯೦ ರೂ. ಹಿಂಗಾರು ೩೯೦ ರೂ. ಈರುಳ್ಳಿ ನಿಗದಿತ ಕನಿಷ್ಠ ಬೆಂಬಲ ಬೆಲೆ ೩೦೦೦ ರೂ. ಹಿಂಗಾರು ಮಾರುಕಟ್ಟೆ ದರ ೯೫೦ ರೂ. ಹಾಗೂ ಮೆಕ್ಕೆಜೋಳ ನಿಗದಿತ ಕನಿಷ್ಠ ಬೆಂಬಲ ಬೆಲೆ ೧೪೦೦ ರೂ. ಮುಂಗಾರು ಮಾರುಕಟ್ಟೆ ದರ ೧೭೦೦೦ ರೂ. ಕನಿಷ್ಠ ನಷ್ಠ ಮುಂಗಾರು ೩೦೦ ರೂ. ಗಳಾಗಿರುತ್ತದೆ ಎಂದು ವಿವಿವರವಾಗಿ ಮನವಿಯಲ್ಲಿ ತೋರಿಸಲಾಗಿದೆ.

ಭತ್ತಕ್ಕೆ ಕೇಂದ್ರ ಸರಕಾರ ೧೮೮೦ ರೂ. ಗಳನ್ನು ಘೋಷಿಷಿದೆ. ಕರ್ನಾಟಕ ಸರಕಾರ ಯಾವುದೇ ಬೋನಸ್ ಘೋಷಿಸಲಿಲ್ಲ. ಪಕ್ಕದ ಕೇರಳ ರಾಜ್ಯ ಪ್ರತಿ ಕ್ವಿಂಟಾಲ್ ಗೆ ೯೦೦ ರೂ ಬೋನಸ್ ಘೋಷಿಸಿದೆ. ಕರ್ನಾಟಕದಲ್ಲಿ ಮುಂಗಾರು ಹಾಗೂ ಈಗ ಹಿಂಗಾರುಗಳಲ್ಲಿ ಮಾರುಕಟ್ಟೆಯಲ್ಲಿ ಭತ್ತಕ್ಕೆ ಸಿಕ್ಕಿರುವುದು ಮತ್ತು ಸಿಗುತ್ತಿರುವುದು ತಲಾ ಕ್ವಿಂಟಾಲ್ ಗೆ  ಕೇವಲ ೧೨೦೦ ರೂ. ಗಳಿಂದ ೧೪೦೦ ರೂ. ಗಳು ಮಾತ್ರ. ಕೇರಳ ಸರಕಾರ ಘೋಷಿಸಿದ ಬೋನಸ್ ಸೇರಿಸಿ ಲೆಕ್ಕಿಸಿದರೇ ಕರ್ನಾಟಕದ ಭತ್ತ ಬೆಳೆಗಾರರು ಪ್ರತಿ ಕ್ವಿಂಟಾಲ್ ಗೆ ಕನಿಷ್ಟ ೧೪೦೦ ರೂ. ಗಳ ಮತ್ತು ತಲಾ ಎಕರೆಗೆ ೧೪೦೦x೨೫=೩೫,೦೦೦ ರೂ. ನ?  ಹೊಂದಿದ್ದಾರೆ. ಕೇರಳ ಸರಕಾರ ಅಲ್ಲಿನ ಭತ್ತ, ತೊಗರಿ ಮತ್ತಿತರೇ ಬೆಳೆಗಾರರಿಗೆ ಪ್ರತಿ ೨.೫ ಎಕರೆಗೆ ೨೦,೦೦೦ ರಿಂದ ೩೦,೦೦೦ ರೂ. ಗಳ ನೆರವು ನೀಡುತ್ತಿದೆ. ಕರ್ನಾಟಕ ಇಂತಹ ಯಾವುದೇ ನೆರವನ್ನು ನೀಡುತ್ತಿಲ್ಲವೆಂಬುದನ್ನು ಈ ಕೆಳಗೆ ನಮೂದಿಸಲಾಗಿದೆ ಎಂದರು.

ಒಟ್ಟಾರೇ, ತಮ್ಮ ಸರಕಾರದ ನಿರ್ಲಕ್ಷ್ಯದ ಕಾರಣದಿಂದ ರಾಜ್ಯದಾದ್ಯಂತ ಹಲವು ದಶ ಸಾವಿರ ಕೋಟಿ ರೂ. ಗಳ ನ?ವನ್ನು ನಮ್ಮ ರೈತರು ಅನುಭವಿಸಿದ್ದಾರೆ. ಈಗಲೂ ಹಿಂಗಾರು ದಿನಗಳಲ್ಲೂ ರಾಜ್ಯದ ಭತ್ತ ಬೆಳೆಗಾರರು ಕೇಂದ್ರ ಸರಕಾರದ ಬೆಂಬಲ ಬೆಲೆಗಿಂತ ಪ್ರತಿ ಕ್ವಿಂಟಾಲ್ ಗೆ ಸುಮಾರು ೫೦೦ ರೂ. ಗಳ?, ಶೇಂಗಾ ಬೆಳೆಗಾರರು ೪೦೦ ರೂ. ಗಳ? ನ? ಅನುಭವಿಸುತ್ತಿದ್ದಾರೆ. ಈರುಳ್ಳಿ ಬೆಲೆಯು ತೀವ್ರವಾಗಿ ಕುಸಿದಿದೆ. ಕಳೆದ ಎರಡು ತಿಂಗಳ ಹಿಂದೆ ೩,೦೦೦ ರೂ. ಗಳಿಗೆ ಮಾರಾಟವಾದರೇ ಅದೀಗ ಕೇವಲ ೯೫೦ ರೂ. ಗಳಿಗೆ ಮಾರಾಟವಾಗುತ್ತಿದೆ. ರೇ? ಗೂಡು ೨೦೦ ರೂ. ಗಳಿಗೆ ಕುಸಿದಿದೆ.

ಆದ್ದರಿಂದ, ಈಗಲಾದರೂ ರಾಜ್ಯ ಸರಕಾರಕ್ಕೆ ನಿಜವಾಗಲೂ ರೈತರ ಕುರಿತು ಕಿಂಚಿತ್ತಾದರೂ ಖಾಳಜಿ ಇದ್ದರೇ, ಕೂಡಲೇ ಈ ನಾಲ್ಕು ಬೆಳೆಗಳಿಗೆ ಪ್ರೋತ್ಸಾಹ ಧನವನ್ನು ಘೋಷಿಸಬೇಕು ಮತ್ತು ತಕ್ಷಣವೇ ಮಾರುಕಟ್ಟೆಗಳಲ್ಲಿ ಖರೀದಿ ಕೇಂದ್ರಗಳನ್ನು ತೆರೆದು ರೈತರ ಸಂರಕ್ಷಣೆಗೆ ಕ್ರಮವಹಿಸುವಂತೆ ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಒತ್ತಾಯಿಸುತ್ತದೆ ಎಂದು ಸಮಿತಿಯ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ ಜೆ.ಸಿ. ಬಯ್ಯಾರೆಡ್ಡಿ ಹಾಗೂ ಯು ಬಸವರಾಜ ಜಂಟಿಯಾಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here