ಜೇವರ್ಗಿ: ತಾಲೂಕಿನ ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಮಯೂರ ಗ್ರಾಮದ ಹೊರವಲಯದ ಜಮೀನೊಂದರಲ್ಲಿ ಸಿಡಿಲು ಬಡಿದು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಸಿದ್ದಮ್ಮ ಗಂ.ಭೀಮಣ್ಣ ಘತ್ತರಗಿ ( 35) ಇವರು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಸಿಡಿಲಿಗೆ ಬಲಿಯಾದ ಮಹಿಳೆಯನ್ನು ಸಿಂದಗಿ ರಾಲೂಕಿನ ಕೋಕಟನೂರ ಗ್ರಾಮದ ನಿವಾಸಿಯಾಗಿದ್ದು, ಕೂಲಿ ಮಾಡಲು ಮಯೂರ ಗ್ರಾಮಕ್ಕೆ ಬಂದಿದ್ದರು.
ಸ್ಥಳಕ್ಕೆ ನೆಲೋಗಿ ಪಿಎಸ್ ಐ ರಾಜಕುಮಾರ ಜಾಮಗೊಂಡ ಹಾಗೂ ಸಿಬ್ಬಂದಿ ಭೇಟಿ ನೀಡಿದ್ದು, ಈ ಕುರಿತು ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.