ಸುರಪುರ: ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಹಾಗು ತಹಸೀಲ್ ಕಚೇರಿಯ ಅನೇಕ ಜನ ಸಿಬ್ಬಂದಿಗಳು ನಗರದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕೋವಿಡ್ ಲಸಿಕೆಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿಯವರು,೪೫ ವರ್ಷ ಮೇಲ್ಪಟ್ಟ ಎಲ್ಲರು ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಬೇಕು. ಈಗಾಗಲೇ ರಾಜ್ಯದಲ್ಲಿ ಕೋವಿಡ್ ಸೊಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು.ಇದರ ನಿರ್ಮೂಲನೆಗೆ ಜನರು ಅನಾವಶ್ಯಕವಾಗಿ ಹೊರಗೆ ಬರದೆ ಮನೆಯಲ್ಲಿ ಉಳಿದುಕೊಳ್ಳಬೇಕು ಮತ್ತು ಹಾಗೊಮ್ಮೆ ಹೊರಗೆ ಬಂದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರವನ್ನು ಕಾಪಾಡುವ ಜೊತೆಗೆ ಆಗಾಗ ಕೈಗಳನ್ನು ತೊಳೆಯುವಂತೆ ಸಲಹೆ ನೀಡಿದರು.
ಸಾಮಾಜಿಕ ಅಂತರ ಮರೆತು ಸಂತೆಯಲ್ಲಿ ತೊಡಗಿದ ಜನ
ಅಲ್ಲದೆ ಈಗ ೧೮ ವರ್ಷ ಮೇಲ್ಪಟ್ಟವರಿಗೂ ಕೊರೊನಾ ಲಸಿಕೆಯನ್ನು ನೀಡುವ ಯೋಜನೆ ಜಾರಿಯಾಗುತ್ತಿದ್ದು,ಅದಕ್ಕಾಗಿ ೧೮ ವರ್ಷ ಮೇಲ್ಪಟ್ಟವರು ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳುವಂತೆ ಕರೆ ನೀಡಿದರು ಹಾಗು ಎಲ್ಲರು ಸಲಿಕೆಯನ್ನು ಪಡೆಯುವ ಮೂಲಕ ಕೊರೊನಾ ಮುಕ್ತರಾಗಿರುವಂತೆ ತಿಳಿಸಿದರು.
ಈ ಉಪ ತಹಸೀಲ್ದಾರ್ ರೇವಪ್ಪ,ಕಂದಾಯ ನಿರೀಕ್ಷಕ ವಿಠ್ಠಲ್ ಬಂದಾಳ ಅರವಿಂದ ಶ್ರೀನಿವಾಸ ಕುಲಕರ್ಣಿ ಇದ್ದರು.ಇದೇ ಸಂದರ್ಭದಲ್ಲಿ ಸಿಬ್ಬಂದಿಗಳಾದ ಅಂಬ್ರೇಶ ದೇವರಗೋನಾಲ ರವಿ ನಾಯಕ ಭೀಮು ಯಾದವ್ ಹುಚ್ಚಪ್ಪ ಇತರರು ಲಸಿಕೆ ಪಡೆದುಕೊಂಡರು.