ಕಲಬುರಗಿ: ಕೊರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಆಸ್ಪತ್ರೆಗಳಲ್ಲಿ ಕೊರೊನಾ ಮತ್ತು ಕೊರೊನಾ ಇಲ್ಲದ ರೋಗಿಗಳಿಗೆ ಬೆಡ್ ಇಲ್ಲವೆಂದು ಚಿಕಿತ್ಸೆ ಸಿಗದೆ ಹಲವರು ಮೃತಪಡುತ್ತಿರುವ ಘಟನೆಗಳು ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ.
ಆದರೆ ಇಂತಹ ಸಂದರ್ಭದಲ್ಲಿ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗೆ ಬೆಡ್ ಇಲ್ಲ ಎಂದು ದಾಖಲಿಸಿಕೊಳ್ಳಲು ನಿರಾಕರಿಸಿದಾಗ ಅವರಿಂದ ಒಂದು ರೆಫರೆ ಲೇಟರ್ ಪಡೆಯಬೇಕು ಅವರು ರೆಫರ್ ಲೇಟರ್ ನೀಡಲು ನಿರಾಕರಿಸಿದರೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿ ವಿರುದ್ಧ ದೂರು ನೀಡಬಹುದಾಗಿದೆ ಎಂದು ಮಾನವ ಹಕ್ಕುಗಳ ಹೋರಾಟಗಾರರಾದ ರಿಯಾಜ್ ಖತೀಬ್ ಮಾಹಿತಿ ನೀಡಿದ್ದಾರೆ.
(ದೂರಿನ ಪ್ರತಿ ಈ ಕೆಳೆಗೆ ಹಾಕಲಾಗಿದೆ)Complaint letter For Refusal Of Admission
ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಖಾಲಿದರು ಸಹ ಖಾಲಿ ಇಲ್ಲ ಎಂದು ಹೇಳಲಾಗುತ್ತಿದೆ. ಸರಕಾರದ ಆದೇಶದಂತೆ 50% ಬೆಡ್ ಮಿಸಲಿಡಲು ಆದೇಶ ನೀಡಲಾಗಿದ್ದು, ಸರಕಾರಿ ದರದಂತೆ ಚಾರ್ಜ್ ಮಾಡಲು ಆದೇಶವಿದೆ. ಆದರೆ ಖಾಸಗಿ ಆಸ್ಪತ್ರೆಗಳು ಆರ್ಥಿಕವಾಗಿ ಇರುವವರನ್ನು ಖಾಸಗಿ ಕೋಟಾದಲ್ಲಿ ಬೆಡ್ ನೀಡಿ ಮೂವತು ಸಾವಿರಕ್ಕೂ ಅಧಿಕವಾಗಿ ಚಾರ್ಜ್ ಮಾಡಲು ಬೆಡ್ ಖಾಲಿ ಇಲ್ಲ ಎಂದು ಹೇಳಿ ಕಳುಹಿಸಲಾಗುತ್ತಿದೆ ಇಂತಹ ದಂಧೆ ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಕಂಡುಬರುತ್ತಿದೆ.
ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ತನಿಖೆ ನಡೆಸಿ ಕಠಿಣ ಕೈಗೊಳ್ಳದಿದ್ದರೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಬಹುದೆಂದು ಸಮಾಜಿಕ ಹೋರಾಟಗಾರರಾದ ಸಿರಾಜ್ ಶಹಾಬಾದಿ ಆತಂಕ ವ್ಯಕ್ತಪಡಿಸಿ ಆಗ್ರಹಿಸಿದ್ದಾರೆ.