ವ್ಯಕ್ತಿಗೆ 15 ಕೆ.ಜಿ ಪಡಿತರ ಜೊತೆ ಮಾಸ್ಕ್ ವಿತರಣೆಗೆ ಯುವ ಜಾಗೃತಿ ವೇದಿಕೆ ಆಗ್ರಹ

0
84

ಕಲಬುರಗಿ: ಕೊರೊನಾ ಮಹಾಮಾರಿಗೆ ಜನರು ತತ್ತರಿಸುತ್ತಿದ್ದು, ಉದ್ಯೋಗ ಮತ್ತು ವ್ಯಾಪಾರ ವಿಲ್ಲದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದರಲ್ಲಿ ಕೊರೊನಾ ಎರಡನೇ ಅಲೆ ಜನರ ಜೀವನ ಅಸ್ತವ್ಯಸ್ಥ ಮಾಡುತ್ತಿದೆ. ಇಂತಹ ಸಂಕಷ್ಟ ಸಮಯದಲ್ಲಿ ಸರಕಾರ ಪ್ರತಿ ವ್ಯಕ್ತಿಗೆ 15 ಯಂತೆ ಪಡಿತರ ವಿತರಣೆ ಮಾಡಬೇಕೆಂದು ಯುವ ಜಾಗೃತಿ ವೇದಿಕೆಯ ಅಧ್ಯಕ್ಷರಾದ ಮೊಹ್ಮದ್ ಯೂಸುಫ್ ಮುಜಾಹಿದ್ ಪಟೇಲ್ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊರೊನಾ ಮಹಾಮಾರಿಯಲ್ಲಿ ರಾಜ್ಯ ಸರಕಾರ ಪಡಿತರದಲ್ಲಿ ಕಡಿತಗೊಳಿಸಿರುವುದು ಬಡವರ ಮೇಲೆ ಮತ್ತೊಂದು ಬರೆ ಏಳೆದಂತೆ ಆಗಿದೆ. ಜನರ ರಕ್ಷಣೆಗೆ ನಿಲ್ಲಬೇಕಿರುವ ಸರಕಾರ ನುಣುಚಿಕೊಳ್ಳುವ ನಿಟ್ಟಿನ ನಡೆಯುತ್ತಿದೆ.

Contact Your\'s Advertisement; 9902492681

ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಬೆಡ್ ಸಿಗದಿದ್ದರೆ ಏನು ಮಾಡಬೇಕು.?

ಸೋಂಕಿತರು ಆಕ್ಸಿಜನ್, ವೆಂಟಿಲೇಟರ್ ಹಾಗೂ ಬೆಡ್ ಇಲ್ಲದೆ ಮೃತಪಟ್ಟುತ್ತಿದ್ದು, ಸರಕಾರ ಜನರ ಮೇಲೆ ಲಾಕ್ ಡೌನ್ ಹೇರಿ ಸಚಿವ ಉಮೇಶ್ ಕತ್ತಿಗೆ ಆಹಾರ ಕೇಳಿದರೆ ಸಾಯಿರಿ ಎಂದು ಬೇಜವಾಬದಾರಿ ಹೇಳಿ ಸಚಿವ ಸ್ಥಾನದಲ್ಲಿ ಮುಂದುವರೆಯಲು ಸಾಧ್ಯವಿಲ್ಲ ಕೂಡಲೆ ರಾಜೀನಾಮೆ ನೀಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಲಾಕ್ ಡೌನ್ ಮುಗಿಯುವ ವರೆಗೆ ಪ್ರತಿ ವ್ಯಕ್ತಿಗೆ ತಲ 15 ಕೆ,ಜಿ ಅಕ್ಕಿ, ಮತ್ತು 5 ಕೆ.ಜಿ ಗೋದಿ ಅಥವಾ ರಾಗಿ ಮತ್ತು ಕೊರೊನಾ ನಿಯಂತ್ರಣಕ್ಕಾಗಿ ಪಡಿತರದಾರರ ಕುಟುಂಬಗಳಿಗೆ ಉಚಿತ ಮಾಸ್ಕ್ ಮತ್ತು ಸ್ಯಾನಿಟೈಜರ್ ನೀಡುವ ಮೂಲಕ ಕೊರೊನಾ ನಿಯಂತ್ರಣಕ್ಕೆ ನಾಂದಿಹಾಡಬೇಕು ಎಂದು ವೇದಿಕೆಯ ಕಾರ್ಯದರ್ಶಿ ಸಾಜಿದ್ ಅಲಿ ಆಗ್ರಹಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here